IPC Sec 498 A- ಸೊಸೆಯ ಆಭರಣ ಅತ್ತೆ ಎತ್ತಿಟ್ಟುಕೊಳ್ಳುವುದು ಕ್ರೌರ್ಯವೇ..?- ಸುಪ್ರೀಂ ಕೋರ್ಟ್ ತೀರ್ಪು
ಸೊಸೆಯ ಆಭರಣ ಅತ್ತೆ ಎತ್ತಿಟ್ಟುಕೊಳ್ಳುವುದು ಕ್ರೌರ್ಯವೇ..?- ಸುಪ್ರೀಂ ಕೋರ್ಟ್ ತೀರ್ಪು
ಭದ್ರತೆಯ ದೃಷ್ಟಿಯಿಂದ ಸೊಸೆಯ ಆಭರಣವನ್ನು ಅತ್ತೆಯ ಎತ್ತಿ ಇಟ್ಟುಕೊಳ್ಳುವುದು ಭಾರತೀಯ ದಂಡ ಸಂಹಿತೆ 498 ಎ ಪ್ರಕಾರ ಕ್ರೌರ್ಯ ಅಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಸುರಕ್ಷೆಯ ದೃಷ್ಟಿಯಿಂದ ಆಭರಣ ಎತ್ತಿಟ್ಟುಕೊಳ್ಳುವುದು, ಸ್ವತಂತ್ರವಾಗಿ ಬದುಕುತ್ತಿರುವ ಪುತ್ರನನ್ನು ನಿಯಂತ್ರಿಸಲು ವಿಫಲವಾಗುವುದು... ಹಾಗೆ, ಪತಿಯ ಸಹೋದರ ಜೊತೆಗೆ ಹೊಂದಿಕೊಂಡು ಹೋಗುವಂತೆ ಸೊಸೆಗೆ ಸಲಹೆ ನೀಡುವುದು ಭಾರತೀಯ ದಂಡ ಸಂಹಿತೆ 498 ಎ ಪ್ರಕಾರ ಕ್ರೌರ್ಯ ಎಂಬುದಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ತಿಳಿಸಿದೆ.
ಅನಗತ್ಯ ಹಗೆತನ ಬೆಳೆಸಿಕೊಳ್ಳುವ ಬದಲು ಪತಿಯ ಸಹೋದರರೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಳ್ಳುವಂತೆ ಅತ್ತೆಯು ಸೊಸೆಗೆ ಸಲಹೆ ನೀಡಿದರೆ ಅದು ತಪ್ಪಲ್ಲ ಎಂದು ನ್ಯಾಯಪೀಠ ತಿಳಿಸಿದೆ.
ತನ್ನ ಆಭರಣಗಳನ್ನು ಅತ್ತೆ ಎತ್ತಿಟ್ಟುಕೊಂಡಿದ್ದಾರೆ ಎಂದು ಸೊಸೆ ಆರೋಪಿಸಿದ್ದು ಅದಕ್ಕೆ ನಿಖರ ಆಧಾರವನ್ನು ನೀಡಿಲ್ಲ, ಕೇವಲ ಆರೋಪಗಳನ್ನು ಮಾತ್ರ ಮಾಡಲಾಗಿದೆ ಎಂದು ನ್ಯಾಯಪೀಠ ಹೇಳಿದೆ.
ಇದೇ ಪ್ರಕರಣದಲ್ಲಿ ಪಂಜಾಬ್ ಮತ್ತು ಹರಿಯಾಣ ಉಚ್ಚ ನ್ಯಾಯಾಲಯ ಎದುರುದಾರರನ್ನು ತಪ್ಪಿತಸ್ಥ ಎಂದು ಹೇಳಿದ್ದು, ಇದೇ ಕಾರಣಕ್ಕೆ ಭಾರತ ಬಿಟ್ಟು ತನ್ನ ಉದ್ಯೋಗ ಕ್ಷೇತ್ರವಾದ ಅಮೆರಿಕಕ್ಕೆ ತೆರಳಬಾರದು ಎಂದು ಆದೇಶ ನೀಡಿತ್ತು. ಈ ತೀರ್ಪನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ.