New SOP by Karnataka High Court- ಒಮಿಕ್ರಾನ್ ಭೀತಿ: ಹೈಕೋರ್ಟ್‌ನಿಂದ ಹೊಸ ಮಾರ್ಗಸೂಚಿ...ಏನಿದೆ..? ಏನಿಲ್ಲ?
ಒಮಿಕ್ರಾನ್ ಭೀತಿ: ಹೈಕೋರ್ಟ್‌ನಿಂದ ಹೊಸ ಮಾರ್ಗಸೂಚಿ...ಏನಿದೆ..? ಏನಿಲ್ಲ?
ಬೆಂಗಳೂರು ಸಹಿತ ರಾಜ್ಯದಲ್ಲಿ ಕೋವಿಡ್ ಮತ್ತೆ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಹೈಕೋರ್ಟ್ ಹೊಸ ಮಾರ್ಗಸೂಚಿ ಹೊರಡಿಸಿದೆ. ಜನವರಿ 14ರ ವರೆಗೆ ಜಾರಿ ಬರುವಂತೆ ಈ ಮಾರ್ಗಸೂಚಿ ಜಾರಿ ಮಾಡಲಾಗಿದೆ.
ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಟಿ. ಜಿ. ಶಿವಶಂಕರೇಗೌಡ ನೋಟಿಫಿಕೇಷನ್ ಹೊರಡಿಸಿದ್ದು, ಹೊಸ ಮಾರ್ಗಸೂಚಿ ಪ್ರಕಾರ ಬೆಂಗಳೂರಿನ ಪ್ರಧಾನ ಪೀಠದಲ್ಲಿ ಸಂಪೂರ್ಣ ವರ್ಚುವಲ್ ಕಲಾಪಗಳು ನಡೆಯಲಿದೆ.
ಆದರೆ, ಕಲಬುರ್ಗಿ ಮತ್ತು ಧಾರವಾಡ ಪೀಠಗಳು ಆನ್‌ಲೈನ್ ಮತ್ತು ಫಿಸಿಕಲ್ ಮೋಡ್ ನಲ್ಲಿ ನಡೆಸಲಿವೆ. ಈ ಎರಡು ಪೀಠದಲ್ಲಿ ವೈಯಕ್ತಿಕವಾಗಿ ಪ್ರತಿನಿಧಿಸುವ ಪಕ್ಷಕಾರರು ಕಡ್ಡಾಯವಾಗಿ ಆನ್‌ಲೈನ್ ಮೂಲಕವೇ ಕಲಾಪದಲ್ಲಿ ಭಾಗಿಯಾಲಿದ್ದಾರೆ.
ಹೊಸ ಮಾರ್ಗಸೂಚಿ(SOP)ಯ ಪ್ರಮುಖ ಅಂಶಗಳು
ತಾವೇ ವಾದಿಸುವ ಪಕ್ಷಕಾರರು ಹಾಗೂ ಕಕ್ಷಿದಾರರಿಗೆ ಅನುಮತಿ ಇಲ್ಲದೆ ಕೋರ್ಟ್ ಪ್ರವೇಶ ಇಲ್ಲ
ವಕೀಲರು, ನ್ಯಾಯಾಲಯದ ಸಿಬ್ಬಂದಿ, ಪೊಲೀಸರು, ಭದ್ರತಾ ಸಿಬ್ಬಂದಿ ಸಹಿತ ಕೋರ್ಟ್ ಆವರಣ ಪ್ರವೇಶಿಸುವ ಎಲ್ಲರೂ N-95, ಡಬಲ್ ಮಾಸ್ಕ್ ಧರಿಸಬೇಕು.
ನ್ಯಾಯಾಲಯದ ಸಿಬ್ಬಂದಿ ಕಡ್ಡಾಯವಾಗಿ ಗ್ಲೌಸ್ ಧರಿಸಬೇಕು
ನ್ಯಾಯಾಲಯ ಪ್ರವೇಶಿಸುವ ಪ್ರತಿಯೊಬ್ಬರಿಗೂ ಕಡ್ಡಾಯ ಥರ್ಮಲ್ ಸ್ಕ್ಯಾನಿಂಗ್
ತಾಪಮಾನ ಏರಿಕೆ ಯಾ ಕೋವಿಡ್ ಲಕ್ಷಣ ಇದ್ದಲ್ಲಿ ಪ್ರವೇಶ ನಿಷಿದ್ಧ.
ನ್ಯಾಯಾಲಯದ ಆವರಣದಲ್ಲಿ ಸಾಮಾಜಿಕ ಅಂತರ ಕಡ್ಡಾಯ.
ಇ-ಫೈಲಿಂಗ್/ ಫಿಸಿಕಲ್ ಫೈಲಿಂಗ್ ಮೂಲಕ ಪ್ರಕರಣ ದಾಖಲಿಸಲು, ದಾಖಲೆ ಸಲ್ಲಿಸಲು ಅವಕಾಶ.
ಇ-ಫೈಲಿಂಗ್ ಮೂಲಕ ಅರ್ಜಿ ಸಲ್ಲಿಸುವಾಗ ಅರ್ಜಿದಾರರು ಮತ್ತು ವಕೀಲರು ಪ್ರತಿ ಪುಟದ ಮೇಲೆ ಸಹಿ ಮಾಡಿದ ನಂತರವೇ ಸ್ಕ್ಯಾನ್ ಮಾಡಿ ಕಳುಹಿಸಬೇಕು.
ಆನ್ ಲೈನ್ ಮೂಲಕ ಕೋರ್ಟ್ ಶುಲ್ಕ ಸಲ್ಲಿಕೆ ಕಡ್ಡಾಯ.
ತುರ್ತು ಪ್ರಕರಣ ಇದ್ದರೂ, ಜ್ಞಾಪನಾ ಪತ್ರ ಸಲ್ಲಿಕೆ ಇದ್ದರೂ ಆನ್ ಲೈನ್ ಮೂಲಕ ಸಲ್ಲಿಕೆ
ಕೋರ್ಟ್ ನ ಪಾರ್ಕಿಂಗ್ ನಲ್ಲಿ ಮಾತ್ರ ನೋಟರಿ ವಕೀಲರಿಗೆ ಕಾರ್ಯ ನಿರ್ವಹಿಸಲು ಅವಕಾಶ.
ಕಚೇರಿ ಆಕ್ಷೇಪಣೆ ಸರಿಪಡಿಸಲು ಲಭ್ಯವಿದ್ದ ಅವಧಿಯಲ್ಲಿ ಕಡಿತ.
ಸೋಮವಾರದಿಂದ ಶುಕ್ರವಾರದವರೆಗೆ 11 ರಿಂದ 1.30. ಶನಿವಾರದಂದು 11 ರಿಂದ 12.30. ಈ ವೇಳೆ ವಕೀಲರು 15ರಿಂದ 30 ನಿಮಿಷಗಳಲ್ಲಿ ಫೈಲ್ ಹಿಂದಿರುಗಿಸಬೇಕು.
ಹೈಕೋರ್ಟ್ ಬೆಂಗಳೂರು ಪ್ರಧಾನ ಪೀಠ, ಕಲಬುರ್ಗಿ ಮತ್ತು ಧಾರವಾಡ ಪೀಠಗಳ ಕ್ಯಾಂಟೀನ್ ಸೇವೆ ರದ್ದು.
ವಕೀಲರ ಸಂಘಗಳ ಸಂಭಾಗಣಗಳನ್ನು ಬಳಕೆ ಮಾಡುವಂತಿಲ್ಲ.
ಸರ್ಕಾರಿ ವಕೀಲರಿಗೂ ಕಡ್ಡಾಯವಾಗಿ ಆನ್ ಲೈನ್ ಮೂಲಕವೇ ಕಲಾಪದಲ್ಲಿ ಭಾಗಿಯಾಗಬೇಕು.
ಮುಂದಿನ ಆದೇಶದವರೆಗೆ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯ ವಿಚಾರಣಾ ನ್ಯಾಯಾಲಯಗಳಿಗೆ ಬಹುತೇಕ ಈ ಹಿಂದೆ ತಿಳಿಸಲಾಗಿದ್ದ ಮಾರ್ಗಸೂಚಿಗಳು ಅನ್ವಯವಾಗಲಿವೆ.