-->
No Mobile for Virtual Session- ವರ್ಚುವಲ್ ಕಲಾಪಕ್ಕೆ ಮೊಬೈಲ್ ಬಳಸಬೇಡಿ: ವಕೀಲರಿಗೆ ಸುಪ್ರೀಂ ಕೋರ್ಟ್ ಕಿವಿಮಾತು

No Mobile for Virtual Session- ವರ್ಚುವಲ್ ಕಲಾಪಕ್ಕೆ ಮೊಬೈಲ್ ಬಳಸಬೇಡಿ: ವಕೀಲರಿಗೆ ಸುಪ್ರೀಂ ಕೋರ್ಟ್ ಕಿವಿಮಾತು

ವರ್ಚುವಲ್ ಕಲಾಪಕ್ಕೆ ಮೊಬೈಲ್ ಬಳಸಬೇಡಿ: ವಕೀಲರಿಗೆ ಸುಪ್ರೀಂ ಕೋರ್ಟ್ ಕಿವಿಮಾತು



ವರ್ಚುಯಲ್ ಕೋರ್ಟ್ ಕಲಾಪದಲ್ಲಿ ಮೊಬೈಲ್ ಬಳಕೆ ಮಾಡದಂತೆ ವಕೀಲರಿಗೆ ಸುಪ್ರೀಂ ಕೋರ್ಟ್ ಕಿವಿಮಾತು ಹೇಳಿದೆ. 


ಹೈಬ್ರೀಡ್ ಕಲಾಪದಲ್ಲಿ ವಕೀಲರು ಮೊಬೈಲ್ ಮೂಲಕ ವಿಚಾರಣೆಗೆ ಹಾಜರಾಗುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್, ಮೊಬೈಲ್ ಬದಲು ಡೆಸ್ಕ್ ಟಾಪ್ ಬಳಕೆ ಮಾಡಲು ಹೆಚ್ಚಿನ ಆದ್ಯತೆ ನೀಡಬೇಕಿದೆ ಎಂದು ಅಭಿಪ್ರಾಯಪಟ್ಟಿದೆ.


ಮುಖ್ಯ ನ್ಯಾಯಮೂರ್ತಿ ಎನ್. ವಿ. ರಮಣ ನೇತೃತ್ವದ ನ್ಯಾಯಪೀಠದ ಮುಂದೆ ಕೆಲ ವಕೀಲರು ಮೊಬೈಲ್ ಮೂಲಕ ಹಾಜರಾಗಿದ್ದರು. ಹಲವು ಬಾರಿ ತಾಂತ್ರಿಕ ಅಡಚಣೆಯಿಂದ ಕಲಾಪಕ್ಕೆ ಅಡ್ಡಿ ಉಂಟಾಯಿತು. ಈ ಬಗ್ಗೆ ಬೇಸರ ವ್ಯಕ್ತಪಡಿಸಿದ ಸಿಜೆಐ ರಮಣ, ವಕೀಲರು ಕಲಾಪಕ್ಕೆ ಮೊಬೈಲ್ ಮೂಲಕ ಹಾಜರಾಗುವುದನ್ನು ನಿಷೇಧಿಸಬೇಕಾಗಬಹುದು ಎಂದರು.


ಪ್ರಕರಣವೊಂದರಲ್ಲಿ ವಾದ ಮಂಡಿಸುತ್ತಿದ್ದ ವಕೀಲರೊಬ್ಬರು ಸರಿಯಾಗಿ ಕಾಣಿಸುತ್ತಿರಲಿಲ್ಲ. ಧ್ವನಿಯೂ ಅಸ್ಪಷ್ಟವಾಗಿತ್ತು. ಇದಕ್ಕೆ ಬೇಸರ ವ್ಯಕ್ತಪಡಿಸಿದ ಜಸ್ಟಿಸ್ ರಮಣ, ವಕೀಲರು ಮೊಬೈಲ್ ಮೂಲಕ ಕಲಾಪಕ್ಕೆ ಹಾಜರಾಗುತ್ತಾರೆ. ಅವರು ಸರಿಯಾಗಿ ಕಾಣಿಸುವುದೂ ಇಲ್ಲ, ಕೇಳಿಸುವುದೂ ಇಲ್ಲ. ನಾವು ಈ ಮೊಬೈಲ್ ಬಳಕೆಯನ್ನು ನಿಷೇಧಿಸಬೇಕಾಗಬಹುದು ಎಂದರು. 


ಮೊಬೈಲ್ ಮೂಲಕ ಕಲಾಪಕ್ಕೆ ಹಾಜರಾಗಿದ್ದ ವಕೀಲರನ್ನು ಉದ್ದೇಶಿಸಿ, "ಸುಪ್ರೀಂ ಕೋರ್ಟ್ ನಲ್ಲಿ ನೀವು  ನಿರಂತರ ಸೇವೆ ಮಾಡುತ್ತಿದ್ದೀರಿ. ನಿಮಗೆ Desktop ಬಳಸಲು ಸಾಧ್ಯವಿಲ್ಲವೇ?" ಎಂದು ಪ್ರಶ್ನಿಸಿದರು.


ಮತ್ತೊಂದು ಪ್ರಕರಣದಲ್ಲಿ, ಹಿರಿಯ ವಕೀಲರನ್ನು ಪ್ರಶ್ನಿಸಿದ ಸಿಜೆಐ, ನೀವೂ ಮೊಬೈಲ್ ಮೂಲಕ ವಾದ ಮಂಡಿಸುತ್ತೀರಾ ಎಂದರು. ಇದಕ್ಕೆ, "ನಾವು ಮೂರು ಸ್ಕ್ರೀನ್ ಬಳಸುತ್ತಿದ್ದೇವೆ" ಎಂದು ಹಿರಿಯ ವಕೀಲರು ಉತ್ತರಿಸಿದರು. ಆಗ ಪ್ರತಿಕ್ರಿಯಿಸಿದ ಸಿಜೆಐ, "ದಯವಿಟ್ಟು ನಿಮ್ಮ ಮಾತು ನಮಗೆ ಕೇಳುವಂತೆ ವ್ಯವಸ್ಥೆ ಮಾಡಿಕೊಳ್ಳಿ. ಈ ರೀತಿಯ ವ್ಯವಸ್ಥೆಯಲ್ಲಿ ಪ್ರಕರಣ ವಿಚಾರಣೆ ನಡೆಸುವ ಶಕ್ತಿ ನಮಗಿಲ್ಲ. 10 ಪ್ರಕರಣಗಳನ್ನು ಹೀಗೇ ಮುಂದೂಡಿದ್ದೇವೆ" ಎಂದು ಹೇಳಿದರು. ಇದಕ್ಕೆ ನ್ಯಾಯಮೂರ್ತಿ ಹಿಮಾ ಕೊಹ್ಲಿ ದನಿಗೂಡಿಸಿದರು.


ಮೊಬೈಲ್ ಬಳಕೆ: ಸು.ಕೋರ್ಟ್ ಸೂಚನೆ:

ಇದೇ ವೇಳೆ, ಸುಪ್ರೀಂ ಕೋರ್ಟ್ ನೋಟೀಸ್ ಹೊರಡಿಸಿದ್ದು, ಇದರಲ್ಲಿ ವಕೀಲರು, ವೈಯಕ್ತಿಕ ಪಕ್ಷಕಾರರು ಮೊಬೈಲ್ ಮೂಲಕ ವರ್ಚುವಲ್ ಕಲಾಪಕ್ಕೆ ಹಾಜರಾಗದಂತೆ ಸೂಚನೆ ನೀಡಿದೆ. 

Ads on article

Advertise in articles 1

advertising articles 2

Advertise under the article