SC Directs Govt to issue Voter ID to Sex Workers- ಲೈಂಗಿಕ ಕಾರ್ಯಕರ್ತರಿಗೂ ವೋಟರ್ ಐಡಿ,: ರಾಜ್ಯ ಸರಕಾರಗಳಿಗೆ ಸು.ಕೋರ್ಟ್ ತಾಕೀತು
ಲೈಂಗಿಕ ಕಾರ್ಯಕರ್ತರಿಗೂ ವೋಟರ್ ಐಡಿ, ಆಧಾರ್ ಕಾರ್ಡ್: ರಾಜ್ಯ ಸರಕಾರಗಳಿಗೆ ಸುಪ್ರೀಂಕೋರ್ಟ್ ತಾಕೀತು
ಲೈಂಗಿಕ ಕಾರ್ಯಕರ್ತರಿಗೂ ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್, ಪಡಿತರ ಚೀಟಿ ನೀಡಿ
2 ವಾರದಲ್ಲಿ ಕ್ರಮ ಕೈಗೊಳ್ಳುವಂತೆ ರಾಜ್ಯ ಸರಕಾರಗಳಿಗೆ ಸುಪ್ರೀಂಕೋರ್ಟ್ ತಾಕೀತು
ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ ಮತ್ತು ಆಧಾರ್ ಕಾರ್ಡುಗಳನ್ನು ಲೈಂಗಿಕ ಕಾರ್ಯಕರ್ತರಿಗೂ ನೀಡಲು ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಸರಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸುಪ್ರೀಂ ಕೋರ್ಟ್ ತಾಕೀತು ಮಾಡಿದೆ.
ಈ ಪ್ರಕ್ರಿಯೆಯನ್ನು ಈ ದಿನದಿಂದ ಎರಡು ವಾರಗಳೊಳಗೆ ಪೂರ್ಣಗೊಳಿಸಬೇಕು ಎಂದು ಜಸ್ಟಿಸ್ ನಾಗೇಶ್ವರ ರಾವ್ ಮತ್ತು ಜಸ್ಟಿಸ್ ವಿ.ಆರ್. ಗವಾಯಿ ಅವರನ್ನೊಳಗೊಂಡ ವಿಭಾಗೀಯ ಪೀಠ ನಿರ್ದೇಶನ ನೀಡಿದೆ.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಮತ್ತು ವಿವಿಧ ಸಂಘಟನೆಗಳ ಸಹಾಯದಿಂದ ಲೈಂಗಿಕ ಕಾರ್ಯಕರ್ತರನ್ನು ಗುರುತಿಸಿ ಈ ಕುರಿತ ಪಟ್ಟಿಯನ್ನು ಸಂಗ್ರಹಿಸುವಂತೆ ರಾಜ್ಯ ಸರಕಾರಗಳಿಗೆ ಸೂಚಿಸಲಾಗಿದೆ.
ದೇಶದಲ್ಲಿ ಬಹುದೊಡ್ಡ ಜನಸಂಖ್ಯೆಯಲ್ಲಿ ಲೈಂಗಿಕ ಕಾರ್ಯಕರ್ತರು ಈ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಅವರಿಗೆ ಅವರ ವಾಸಸ್ಥಳದ ದಾಖಲೆಗಳನ್ನು ಕಡ್ಡಾಯ ಹಾಜರುಪಡಿಸುವಲ್ಲಿ ವಿನಾಯಿತಿ ನೀಡಿ ಪಡಿತರ ಚೀಟಿಗಳನ್ನು ನೀಡುವಂತೆ ಸರಕಾರಗಳಿಗೆ ಸೂಚನೆ ನೀಡಲಾಗಿದೆ.
ಈ ಆದೇಶಕ್ಕೆ ಮುನ್ನ ಕೇಂದ್ರ ಸರಕಾರದ ಪರ ವಾದ ಮಂಡಿಸಿದ ವಕೀಲರು ಈಗಾಗಲೇ ಸುಮಾರು 25000 ಲೈಂಗಿಕ ಕಾರ್ಯಕರ್ತರ ಗುರುತಿಸಲಾಗಿದೆ ಅವರಲ್ಲಿ ಸುಮಾರು 20 ಸಾವಿರ ಮಂದಿಗೆ ಪಡಿತರ ಚೀಟಿಯನ್ನು ನೀಡಲಾಗಿದೆ ಎಂದು ನ್ಯಾಯಪೀಠಕ್ಕೆ ಮಾಹಿತಿ ನೀಡಿದ್ದರು.