We are liberal- CJI NV Ramana- ಜಾಮೀನು ಆದೇಶ : ನಾವೀಗ ಲಿಬರಲ್ ಎಂಬ ಸಿಜೆಐ; ರಾಜೇಂದ್ರ ಬಾಲಾಜಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್
Monday, January 10, 2022
ಜಾಮೀನು ಆದೇಶ : ನಾವೀಗ ಲಿಬರಲ್ ಎಂಬ ಸಿಜೆಐ; ರಾಜೇಂದ್ರ ಬಾಲಾಜಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್
ಸರಕಾರಿ ಉದ್ಯೋಗ ನೀಡುವ ಆಮಿಷವೊಡ್ಡಿ ಬಹುಕೋಟಿ ವಂಚನೆಯ ಬೃಹತ್ ಹಗರಣದ ರೂವಾರಿ ಮಾಜಿ ಸಚಿವ ಹಾಗೂ ಎಐಎಡಿಎಂಕೆ ನಾಯಕ ಕೆ ಟಿ ರಾಜೇಂದ್ರ ಬಾಲಾಜಿ ಅವರಿಗೆ ಒಂದು ತಿಂಗಳ ಮಧ್ಯಂತರ ಜಾಮೀನು ನೀಡುವ ಆದೇಶಕ್ಕೆ ಸುಪ್ರೀಂಕೋರ್ಟ್ ಮುದ್ರೆಯೊತ್ತಿದೆ.
ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ, ಸೂರ್ಯ ಕಾಂತ್ ಮತ್ತು ಎಸ್ತಿಮಾ ಕೊಹ್ಲಿ ಅವರ ವಿಭಾಗೀಯ ಪೀಠ, ಅರ್ಜಿದಾರರಾದ ಆರೋಪಿಗೆ ಒಂದು ತಿಂಗಳ ಮಧ್ಯಂತರ ಜಾಮೀನು ನೀಡಿದೆ.
ಆರೋಪಿ ಜಾಮೀನು ತಿರಸ್ಕರಿಸಿದ ಮದ್ರಾಸು ಹೈಕೋರ್ಟ್ ಆದೇಶ ಪ್ರಶ್ನಿಸಿ ಸಲ್ಲಿಸಲಾದ ಮೇಲ್ಮನವಿ ಅರ್ಜಿಯನ್ನು ನ್ಯಾಯಪೀಠ ವಿಚಾರಣೆ ನಡೆಸಿತು.
ವಿಚಾರಣೆಯಲ್ಲಿ ವೇಳೆ ಅಭಿಪ್ರಾಯ ಮಂಡಿಸಿದ ಮುಖ್ಯ ನ್ಯಾಯಮೂರ್ತಿ ಎನ್. ವಿ. ರಮಣ, ನಾವೀಗ ಉದಾರಿಗಳಾಗಿವೆ. ಕೋವಿಡ್ ಸಂಕಷ್ಟ ಕಾಲದಲ್ಲಿ ನಾವೀಗ ಎಲ್ಲರಿಗೂ ಜಾಮೀನು ನೀಡಲು ಉದಾರತೆ ತೋರುತ್ತಿದ್ದೇವೆ ಎಂದು ಹೇಳಿದರು.