Cow Slaughtering- ಮುಪ್ಪಾದ ಹೋರಿ, ಎಮ್ಮೆ, ಕೋಣ ವಧೆ ನಿಷೇಧ: ಕೇಂದ್ರದ ಅಭಿಪ್ರಾಯ ಕೇಳಿದ ದೆಹಲಿ ಹೈಕೋರ್ಟ್
ಮುಪ್ಪಾದ ಹೋರಿ, ಎಮ್ಮೆ, ಕೋಣ ವಧೆ ನಿಷೇಧ: ಕೇಂದ್ರದ ಅಭಿಪ್ರಾಯ ಕೇಳಿದ ದೆಹಲಿ ಹೈಕೋರ್ಟ್
ಮುಪ್ಪಿನ ಪ್ರಾಯದ ಹೋರಿ ಮತ್ತು ಕೋಣಗಳ ವಧೆಯನ್ನು ನಿರ್ಬಂಧಿಸುವ ಕುರಿತಂತೆ ದೆಹಲಿ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.
ದೆಹಲಿ ಹೈಕೋರ್ಟ್ ಮುಂದೆ ಈ ಬಗ್ಗೆ IPL ಸಲ್ಲಿಕೆಯಾಗಿದ್ದು, ಇದಕ್ಕೆ ಅಭಿಪ್ರಾಯ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ನ್ಯಾಯಾಲಯ ತಿಳಿಸಿದೆ.
ಪ್ರಕರಣ: ಬಿಶ್ ಬಾನ್ ವರ್ಮಾ Vs ಕೇಂದ್ರ ಸರ್ಕಾರ ಮತ್ತು ಮತ್ತಿತರರು
ಮಾರ್ಚ್ 15ರೊಳಗೆ ಅಭಿಪ್ರಾಯ ನೀಡುವಂತೆ ಮುಖ್ಯ ನ್ಯಾ. ಡಿ ಎನ್ ಪಟೇಲ್ ನೇತೃತ್ವದ ನ್ಯಾಯ ಪೀಠ ತಿಳಿಸಿದೆ. ಬಿಶ್ ಬಾನ್ ವರ್ಮಾ ಎಂಬವರು ಸಲ್ಲಿಸಿದ IPL ಅರ್ಜಿಯಲ್ಲಿ ಗೋಹತ್ಯೆ ನಿಷೇಧವನ್ನು ಹೋರಿಗಳು, ಎಮ್ಮೆಗಳು ಹಾಗೂ ಕೋಣಗಳಿಗೂ ವಿಸ್ತರಿಸುವಂತೆ ಕೋರಲಾಗಿದೆ.
ಕೃಷಿ ಕೆಲಸಗಳಲ್ಲಿ ಹಾಗೂ ವಂಶಾಭಿವೃದ್ದಿಯಲ್ಲಿ ಹೋರಿ, ಎಮ್ಮೆ, ಕೋಣಗಳು ನಿರ್ದಿಷ್ಟ ವಯಸ್ಸನ್ನು ದಾಟಿದ ನಂತರವೂ ಬಳಕೆಯಾಗುತ್ತಿದೆ. ಹಾಗಾಗಿ, ಅವುಗಳ ವಧೆಯನ್ನು ನಿಷೇಧಿಸಬೇಕು. ಇವು ನೀಡುವ ಸೆಗಣಿ, ಗಂಜಲವು ಕೃಷಿ ಬಳಕೆಗೆ ಯೋಗ್ಯವಾಗಿದ್ದು ಇಳುವರಿಯನ್ನು ಹೆಚ್ಚಿಸುತ್ತದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
"ಪ್ರಸ್ತುತ ಇರುವ ಗೋಹತ್ಯಾ ನಿಷೇಧ ಕಾನೂನು ಗಂಡು ಮತ್ತು ಹೆಣ್ಣು ಪ್ರಾಣಿಗಳ ನಡುವೆ ಭೇದವನ್ನು ಮಾಡುತ್ತದೆ" ಎಂದು ಮನವಿ ಅರ್ಜಿಯಲ್ಲಿ ವಾದಿಸಲಾಗಿದೆ.