-->
Hit and Run Accident relief raised- ಅಪಘಾತ ಪ್ರಕರಣ: ಎಪ್ರಿಲ್ 1ರಿಂದ ಪರಿಹಾರ ಮೊತ್ತ ಗಣನೀಯ ಏರಿಕೆ

Hit and Run Accident relief raised- ಅಪಘಾತ ಪ್ರಕರಣ: ಎಪ್ರಿಲ್ 1ರಿಂದ ಪರಿಹಾರ ಮೊತ್ತ ಗಣನೀಯ ಏರಿಕೆ

ಅಪಘಾತ ಪ್ರಕರಣ: ಎಪ್ರಿಲ್ 1ರಿಂದ ಪರಿಹಾರ ಮೊತ್ತ ಗಣನೀಯ ಏರಿಕೆ






ಹಿಟ್-ಅಂಡ್-ರನ್ ಅಪಘಾತ ಪ್ರಕರಣದಲ್ಲಿ ಮೃತಪಟ್ಟವರಿಗೆ ನೀಡಲಾಗುವ ಪರಿಹಾರದ ಹಣವನ್ನು ಗಣನೀಯವಾಗಿ ಹೆಚ್ಚಳ ಮಾಡಲಾಗಿದೆ.



ಈ ಬಗ್ಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಅಧಿಸೂಚನೆ ಹೊರಡಿಸಿದ್ದು, ಏಪ್ರಿಲ್ ಒಂದರಿಂದ ಈ ಅಧಿಸೂಚನೆ ಜಾರಿಗೆ ಬರಲಿದೆ.



ಹಿಟ್-ಅಂಡ್-ರನ್ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಿಹಾರದ ಮೊತ್ತವನ್ನು ಸುಮಾರು ಎಂಟು ಪಟ್ಟು ಹೆಚ್ಚಳ ಮಾಡಲಾಗಿದೆ. ಅಂದರೆ ಅಪಘಾತ ಪ್ರಕರಣದಲ್ಲಿ ಪಟ್ಟವರಿಗೆ ಇನ್ನು ಪರಿಹಾರ ರೂ. 2 ಲಕ್ಷ ಸಿಗಲಿದೆ .



ಅಧಿಸೂಚನೆಯಲ್ಲಿ ಅಪಘಾತ ಪ್ರಕರಣದಲ್ಲಿ ಗಾಯಗೊಂಡ ಸಂತ್ರಸ್ತರಿಗೆ ಸಿಗುವ ಪರಿಹಾರದ ಮೊತ್ತವನ್ನು ಏರಿಸಲಾಗಿದೆ. ಪರಿಹಾರದ ಮೊತ್ತವನ್ನು ಹಾಲಿ ಇರುವ 12,500 ರೂ ಗಳಿಂದ 50 ಸಾವಿರ ರೂ ಗಳಿಗೆ ಏರಿಸಲಾಗಿದೆ. 



ಕೇಂದ್ರ ಸರ್ಕಾರದ ಈ ಅಧಿಸೂಚನೆಯು ಏಪ್ರಿಲ್ 1, 2022ರಿಂದ ಜಾರಿಗೆ ಬರಲಿದೆ.



Ads on article

Advertise in articles 1

advertising articles 2

Advertise under the article