-->
4 year Jail punishment for Public Prosecutor- ಆರೋಪ ಪಟ್ಟಿ ಸಲ್ಲಿಸಲು ಲಂಚ: ಪಬ್ಲಿಕ್ ಪ್ರಾಸಿಕ್ಯೂಟರ್‌ಗೆ 4 ವರ್ಷ ಜೈಲು- ವಿಶೇಷ ನ್ಯಾಯಾಲಯ

4 year Jail punishment for Public Prosecutor- ಆರೋಪ ಪಟ್ಟಿ ಸಲ್ಲಿಸಲು ಲಂಚ: ಪಬ್ಲಿಕ್ ಪ್ರಾಸಿಕ್ಯೂಟರ್‌ಗೆ 4 ವರ್ಷ ಜೈಲು- ವಿಶೇಷ ನ್ಯಾಯಾಲಯ

ಆರೋಪ ಪಟ್ಟಿ ಸಲ್ಲಿಸಲು ಲಂಚ: ಪಬ್ಲಿಕ್ ಪ್ರಾಸಿಕ್ಯೂಟರ್‌ಗೆ 4 ವರ್ಷ ಜೈಲು- ವಿಶೇಷ ನ್ಯಾಯಾಲಯ





ಕ್ರಿಮಿನಲ್‌ ವಂಚನೆ ಪ್ರಕರಣದಲ್ಲಿ ಕೋರ್ಟ್‌ಗೆ ಆರೋಪ ಪಟ್ಟಿ ಸಲ್ಲಿಸಲು ದೂರುದಾರರಿಂದ ಲಂಚದ ಬೇಡಿಕೆ ಇಟ್ಟಿದ್ದ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕ (SPP) ಆರ್‌ ಶ್ರೀನಿವಾಸ ರಾಜು ಅವರಿಗೆ ವಿಶೇಷ ನ್ಯಾಯಾಲಯವು 4 ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.



ಪ್ರಕರಣದ ವಿಚಾರಣೆ ನಡೆಸಿದ 23ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ಹಾಗೂ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಅಡಿ ಸ್ಥಾಪಿಸಲಾಗಿರುವ ವಿಶೇಷ ನ್ಯಾಯಾಲಯ ಈ ಮಹತ್ವದ ತೀರ್ಪು ನೀಡಿದೆ.



ಭ್ರಷ್ಟಾಚಾರ ನಿಗ್ರಹ ಕಾಯ್ದೆ 1988ರ ಸೆಕ್ಷನ್ 7ರ ಅಡಿ ಆರೋಪ ಸಾಬೀತಾದ ಕಾರಣ, ಅಪರಾಧಿ ಶ್ರೀನಿವಾಸರಾಜು ಅವರಿಗೆ 3 ವರ್ಷ ಜೈಲು ಶಿಕ್ಷೆ ಮತ್ತು 15,000 ರೂಪಾಯಿ ದಂಡ ವಿಧಿಸಲಾಗಿದೆ.



ಅದೇ ಕಾಯ್ದೆಯ ಸೆಕ್ಷನ್‌ 13(2)ರ ಅಪರಾಧಕ್ಕೆ 4 ವರ್ಷಗಳ ಜೈಲು ಶಿಕ್ಷೆ ಮತ್ತು 15,000 ರೂಪಾಯಿ ದಂಡ, ದಂಡದ ಮೊತ್ತ ಪಾವತಿಸಲು ವಿಫಲವಾದರೆ ಹೆಚ್ಚುವರಿಯಾಗಿ 2 ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕು ಎಂದು ಪೀಠ ಆದೇಶ ಮಾಡಿದೆ. ಈ ಎರಡೂ ಜೈಲು ಶಿಕ್ಷೆಯು ಒಟ್ಟಾಗಿ ಜಾರಿಗೆ ಬರಲಿವೆ.



ಪ್ರಕರಣದ ಹಿನ್ನೆಲೆ

ಮುನಿಯಲ್ಲಪ್ಪ ಮತ್ತು ಅವರ ಪುತ್ರ ಕೃಷ್ಣಪ್ಪ ಎಂಬವರ ವಿರುದ್ಧ ಬೆಂಗಳೂರು ನಿವಾಸಿ ವೈ ಶಂಕರ್‌ ವಂಚನೆ, ಕಳ್ಳತನ ಮತ್ತಿತರ ಆರೋಪಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ವರ್ತೂರು ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.


ಪ್ರಕರಣದ ಮೇಲೆ ನಿಗಾ ಇಡುವಂತೆ ಶಂಕರ್‌ ತಮ್ಮ ಸಂಬಂಧಿ ಸುಬ್ರಮಣಿಗೆ ಸೂಚಿಸಿದ್ದರು.



ಆರೋಪ ಪಟ್ಟಿ ನ್ಯಾಯಾಲಯಕ್ಕೆ ರವಾನಿಸಿರುವುದಾಗಿ ವರ್ತೂರು ಪೊಲೀಸರು ತಿಳಿಸಿದ್ದರು. ಅದು, ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕರಾಗಿದ್ದ ಶ್ರೀನಿವಾಸ ರಾಜು ಬಳಿ ಇತ್ತು. ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಶ್ರೀನಿವಾಸರಾಜು ಸುಬ್ರಮಣಿಗೆ 50,000 ರೂ. ಲಂಚದ ಬೇಡಿಕೆ ಇಟ್ಟಿದ್ದರು.



ಇದರಿಂದ ಬೇಸತ್ತ ಸುಬ್ರಹ್ಮಣಿ 2015ರ ಜನವರಿ 24ರಂದು ಶ್ರೀನಿವಾಸರಾಜು ಅವರ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಇದನ್ನು ಆಧರಿಸಿ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.



ಲಂಚ ಪಡೆಯುವ ವೇಳೆ ರೆಡ್ ಹ್ಯಾಂಡ್ ಆಗಿ ಬಂಧಿಸಲಾದ ಆರೋಪಿ ಶ್ರೀನಿವಾಸ ರಾಜು ಅವರಿಂದ 10,000 ರೂಪಾಯಿ ಹಾಗೂ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಲೋಕಾಯುಕ್ತ ಪೊಲೀಸರು ವಶಪಡಿಸಿಕೊಂಡಿದ್ದರು.


ರೆಡ್ ಹ್ಯಾಂಡ್ ಟೆಸ್ಟ್ ಬಳಿಕ ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಆರೋಪಿ ಶ್ರೀನಿವಾಸ ರಾಜು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದು, ಪೊಲೀಸರು ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು.


ಸಮರ್ಥನೆಗೆ 81 ತೀರ್ಪುಗಳ ಉಲ್ಲೇಖ

ಪ್ರಕರಣದಲ್ಲಿ ಆರೋಪಿ ಶ್ರೀನಿವಾಸ ರಾಜು ನಿರಪರಾಧಿ ಎಂದು ಸಾಬೀತುಪಡಿಸಲು ಹೈಕೋರ್ಟ್‌, ಸುಪ್ರೀಂ ಕೋರ್ಟ್‌ನ ಸುಮಾರು 81 ತೀರ್ಪುಗಳನ್ನು ಉಲ್ಲೇಖಿಸಿದ್ದರು. ಆದರೆ, ಇವ್ಯಾವು ಅವರನ್ನು ಶಿಕ್ಷೆಯಿಂದ ಪಾರು ಮಾಡಲಿಲ್ಲ.

Ads on article

Advertise in articles 1

advertising articles 2

Advertise under the article