Delhi HC says Mask not compulsory- ಏಕಾಂಗಿ ವಾಹನ ಚಾಲನೆ ವೇಳೆ ಮಾಸ್ಕ್ ಕಡ್ಡಾಯವಲ್ಲ: ದೆಹಲಿ ಹೈಕೋರ್ಟ್
Thursday, February 3, 2022
ಏಕಾಂಗಿ ವಾಹನ ಚಾಲನೆ ವೇಳೆ ಮಾಸ್ಕ್ ಕಡ್ಡಾಯವಲ್ಲ: ದೆಹಲಿ ಹೈಕೋರ್ಟ್
ಯಾವುದೇ ವ್ಯಕ್ತಿ ಏಕಾಂಗಿಯಾಗಿ ವಾಹನ ಚಾಲನೆ ಮಾಡುವಾಗ ಮಾಸ್ಕ್ ಧರಿಸುವುದನ್ನು ಕಡ್ಡಾಯವಲ್ಲ ಎಂದು ದೆಹಲಿ ಹೈಕೋರ್ಟ್ ಹೇಳಿದೆ.
ಕೋವಿಡ್-19 ಹಿನ್ನೆಲೆಯಲ್ಲಿ ಏಕಾಂಗಿಯಾಗಿ ವಾಹನ ಚಲಾಯಿಸುವಾಗಲೂ ಮಾಸ್ಕ್ ಕಡ್ಡಾಯ ಮಾಡುವುದು ಅಸಂಬದ್ಧ ಕ್ರಮ ಎಂದು ಅದು ಹೇಳಿದೆ.
ಏಕಾಂಗಿಯಾಗಿ ವಾಹನ ಚಾಲನೆ ಮಾಡುವಾಗಲೂ ಮಾಸ್ಕ್ ಕಡ್ಡಾಯ ಎಂಬ ದಿಲ್ಲಿ ಸರಕಾರದ ಆದೇಶಕ್ಕೆ ಅಸಮಾಧಾನ ವ್ಯಕ್ತಪಡಿಸಿದ ದಿಲ್ಲಿ ಹೈಕೋರ್ಟ್, ಈ ನಿರ್ಧಾರ ಇನ್ನೂ ಏಕೆ ಚಾಲ್ತಿಯಲ್ಲಿದೆ ಎಂದು ಪ್ರಶ್ನಿಸಿದೆ.
ದಿಲ್ಲಿ ಸರ್ಕಾರದ ಆದೇಶ ಅವಾಸ್ತವಿಕ ಮತ್ತು ಅಸಂಬದ್ಧ. ಅದನ್ನು ಏಕೆ ಹಿಂತೆಗೆದುಕೊಳ್ಳಬಾರದು. ನೀವು ನಿಮ್ಮ ಸ್ವಂತ ಕಾರಿನಲ್ಲಿ ಕುಳಿತಿದ್ದೀರಿ ಹಾಗೂ ನೀವು ಮಾಸ್ಕ್ ಧರಿಸಬೇಕೇ? ಎಂದು ನ್ಯಾಯಪೀಠ ಸರ್ಕಾರಿ ವಕೀಲರನ್ನು ಪ್ರಶ್ನಿಸಿತು.