New SOP Expected on 7/2/22- ಕೋರ್ಟ್ ಕಲಾಪ ಮತ್ತೆ ಸಹಜ ಸ್ಥಿತಿಗೆ?- ಸೋಮವಾರದಿಂದ ಹೈಕೋರ್ಟ್ ಹೊಸ ಅಧಿಸೂಚನೆ ನಿರೀಕ್ಷೆ
ಕೋರ್ಟ್ ಕಲಾಪ ಮತ್ತೆ ಸಹಜ ಸ್ಥಿತಿಗೆ?- ಸೋಮವಾರದಿಂದ ಹೈಕೋರ್ಟ್ ಹೊಸ ಅಧಿಸೂಚನೆ ನಿರೀಕ್ಷೆ
ಕಳೆದ ಕೆಲವು ದಿನಗಳಿಂದ ರಾಜ್ಯಾದ್ಯಂತ ಕೋರ್ಟ್ ಕಲಾಪಗಳು ಸ್ಥಗಿತಗೊಂಡಿದ್ದು, ವಕೀಲ ಸಮುದಾಯಕ್ಕೆ ಭಾರೀ ಸಂಕಷ್ಟ ತಂದೊಡ್ಡಿದೆ.
ಇದೀಗ ಹೊಸ ಅಧಿಸೂಚನೆ ಹೊರಡಿಸುವ ನಿಟ್ಟಿನಲ್ಲಿ 2-2-22 ರಂದು ಎಸ್‌ಒಪಿ ಸಭೆ ನಡೆದಿದೆ. ಈ ಸಭೆಯಲ್ಲಿ ಕರ್ನಾಟಕದ ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ಎಸ್‌ಒಪಿ ಸಮಿತಿಯು 7-2-22 ಸೋಮವಾರದಿಂದ ಜಾರಿಗೆ ಬರುವಂತೆ ನ್ಯಾಯಾಲಯಗಳನ್ನು ಭೌತಿಕ ಮತ್ತು ಹೈಬ್ರಿಡ್ ಮೋಡ್‌ನಲ್ಲಿ ಪುನರಾರಂಭಿಸಲು ನಿರ್ಧರಿಸಿದೆ.
ಸಭೆಯಲ್ಲಿ ಚರ್ಚೆ ನಡೆಸಿದ ಕೆಲವೊಂದು ಅಂಶಗಳು ಈ ಕೆಳಗಿನಂತಿವೆ.
1. ಹೈ ಕೋರ್ಟ್ ಮತ್ತು ಎಲ್ಲಾ ವಿಚಾರಣಾ ನ್ಯಾಯಾಲಯಗಳು ಹೈಬ್ರಿಡ್ ಮೋಡ್‌ನಲ್ಲಿ ಪುನಃ ತೆರೆಯುವುದು. ಭೌತಿಕ ವಾದ ಮಂಡನೆಗೆ ಅವಕಾಶ ಮತ್ತು ವೀಡಿಯೊ ಮೋಡ್ ಸಹ ಅವಕಾಶ ಮುಕ್ತವಾಗಿಡುವುದು. ವಕೀಲರು ಯಾವುದೇ ಮೋಡ್ ಅನ್ನು ಆಯ್ಕೆ ಮಾಡುವ ಅವಕಾಶ ನೀಡಬಹುದು.
2. ಎಲ್ಲಾ ವಿಚಾರಣಾ ನ್ಯಾಯಾಲಯಗಳಲ್ಲಿ ಸಾಕ್ಷ್ಯವನ್ನು ದಾಖಲಿಸಲು ಅನುಮತಿಸುವುದು. ವಿಚಾರಣೆ ಮತ್ತು ಉಚ್ಚ ನ್ಯಾಯಾಲಯಗಳಲ್ಲಿ ದಾವೆದಾರರಿಗೆ ಪ್ರವೇಶವನ್ನು ಸಹ ಅನುಮತಿಸುವುದು.
3. ಎಲ್ಲಾ ಕ್ಯಾಂಟೀನ್‌ಗಳು ತೆರೆದಿರಲು ಅವಕಾಶ. 7-2-22 ರಿಂದ ಸಹಜ ಕಲಾಪ ಮತ್ತು ಸಾಮಾನ್ಯ ಕಾರ್ಯವನ್ನು ಪ್ರಾರಂಭಿಸುವುದು. ಸಾಮಾಜಿಕ ಅಂತರದ ನಿಯಮಗಳನ್ನು ಅನುಸರಿಸಲು ವಕೀಲರಿಗೆ ಸೂಚನೆ ನೀಡುವುದು.
4. ಮಾಸ್ಕ್ ಧರಿಸುವುದು ಕಡ್ಡಾಯ ಮತ್ತು ಸೋಂಕು ಸಂಪೂರ್ಣವಾಗಿ ದುರ್ಬಲಗೊಳ್ಳದ ಕಾರಣ ತಮ್ಮ ಸುರಕ್ಷತೆಗಾಗಿ ಮತ್ತು ಜನಸಂದಣಿಯನ್ನು ತಪ್ಪಿಸಲು ಮಾಸ್ಕ್‌ಗಳನ್ನು ಧರಿಸಲು ವಕೀಲರ ಸಂಘವು ವಕೀಲರನ್ನು ವಿನಂತಿಸುವುದು.
5. ಉಚ್ಚ ನ್ಯಾಯಾಲಯದಲ್ಲಿ ಪ್ರಕರಣಗಳ ದಾಖಲೀಕರಣಕ್ಕೆ ಭೌತಿಕವಾಗಿ ಜ್ಞಾಪನಾ ಯಾ ಮೆಮೊವನ್ನು ಸಲ್ಲಿಸಲು ಅವಕಾಶ ನೀಡುವುದು.
6. ವಿವಿಧ ಪ್ರಕರಣಗಳ ವಾದ ಆಲಿಸುವ ಗಡುವು ಮುಂದುವರಿಯುತ್ತದೆ.
ಈ SOP 7-2-22 ರಿಂದ ಜಾರಿಗೆ ಬರಲಿದೆ ಎಂದು ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾ ರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.