Pramotion for Judges- ಹಿರಿಯ ಸಿವಿಲ್ ನ್ಯಾಯಾಧೀಶರಿಗೆ ಬಡ್ತಿ: ರಾಜ್ಯದ ವಿವಿಧೆಡೆ ಜಿಲ್ಲಾ ನ್ಯಾಯಾಧೀಶರಾಗಿ ನೇಮಕ
ಹಿರಿಯ ಸಿವಿಲ್ ನ್ಯಾಯಾಧೀಶರಿಗೆ ಬಡ್ತಿ: ರಾಜ್ಯದ ವಿವಿಧೆಡೆ ಜಿಲ್ಲಾ ನ್ಯಾಯಾಧೀಶರಾಗಿ ನೇಮಕ
ಕರ್ನಾಟಕದ ವಿವಿಧೆಡೆ ಇರುವ ನ್ಯಾಯಾಲಯಗಳಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರಾಗಿ ಕಾರ್ಯ ನಿರ್ವಹಿಸುತ್ತಿದ್ದ 35 ನ್ಯಾಯಾಧೀಶರಿಗೆ ಬಡ್ತಿ ನೀಡಲಾಗಿದೆ. ಅವರನ್ನು ಜಿಲ್ಲಾ ನ್ಯಾಯಾಧೀಶರಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಅಧೀನ ಕಾರ್ಯದರ್ಶಿ ನಾಗಪ್ಪ ಎಸ್. ಪರೀತ್ ರಾಜ್ಯಪಾಲರ ಆದೇಶಾನುಸಾರ ಈ ಬಗ್ಗೆ ಅಧಿಸೂಚನೆ ಹೊರಡಿಸಿದ್ದಾರೆ.
ಸಂವಿಧಾನದ ವಿಧಿ 233ರ ಅಡಿ ಲಭ್ಯವಿರುವ ಅಧಿಕಾರ ಚಲಾಯಿಸಿ ಮಾನ್ಯ ರಾಜ್ಯಪಾಲರು ರಾಜ್ಯದ ವಿವಿಧೆಡೆ ಸೇವೆ ಸಲ್ಲಿಸಿರುವ 35 ಹಿರಿಯ ಸಿವಿಲ್ ನ್ಯಾಯಾಧೀಶರನ್ನು ಜಿಲ್ಲಾ ನ್ಯಾಯಾಧೀಶರ ಶ್ರೇಣಿಗೆ ಬಡ್ತಿ ನೀಡಿ ಆದೇಶ ಹೊರಡಿಸಿದ್ದಾರೆ.
ಹಿರಿತನ ಹಾಗೂ ಮೆರಿಟ್ ಆಧಾರದಲ್ಲಿ ಬಡ್ತಿ ನೀಡಲಾಗಿದ್ದು, ಕರ್ನಾಟಕ ನ್ಯಾಯಾಂಗ ಸೇವಾ (ನೇಮಕಾತಿ) ನಿಯಮಗಳು -2004 ರ ಪ್ರಕಾರ ಪರಿಷ್ಕೃತ ವೇತನ ಪಡೆಯಲಿದ್ದಾರೆ.
ಆದೇಶ ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಬಡ್ತಿ ಪಡೆದ ನ್ಯಾಯಾಧೀಶರು
Mallari Chidambar rao Nadagouda
Kulkarni Narahari @ Prakash Sripad
S. Sreedhara
Anitha M.
Veeranna Somashekhar
Ramesh Durugappa Ekabote
Vimal R Nandagaon
Madhvesh Daber
Sreenivasa
M. Ramesha
Kalpana M.S.
Shriram Narayan Hegde
Ravi@Ravindra Devakareppa Ari
Prakash Sangappa Helavar
V. Nagaraja
Bala Gopalakrishna
C.G. Vishalakshi
Padma Prasad
Siddanna B Handral
A. Earanna
Prakash V.
Nirmala K.
N. Muniraja
T. Govindaiah
Ganapati Gurusidda Badami
N. Narasamma
T. Shrinivas
Sujatha S.
Malhar Balakrishna Kulkarni
Santhosh Kumar Shetty N.
Ramakant Chavan
H. Devaraju
Manjunatha
Laxman Ramu Kurane
Pruthviraj Vernekar