-->
Registration office timing changed- ನೋಂದಣಿ ಕಚೇರಿಯ ವೇಳೆ ಬದಲಾವಣೆ: ರಾಜ್ಯ ಸರ್ಕಾರದ ಮಹತ್ವದ ಆದೇಶ

Registration office timing changed- ನೋಂದಣಿ ಕಚೇರಿಯ ವೇಳೆ ಬದಲಾವಣೆ: ರಾಜ್ಯ ಸರ್ಕಾರದ ಮಹತ್ವದ ಆದೇಶ

ನೋಂದಣಿ ಕಚೇರಿಯ ವೇಳೆ ಬದಲಾವಣೆ: ರಾಜ್ಯ ಸರ್ಕಾರದ ಮಹತ್ವದ ಆದೇಶ





ಸಾರ್ವಜನಿಕರ ಹಿತದೃಷ್ಟಿಯಿಂದ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಚೇರಿಯ ಕೆಲಸದ ವೇಳೆಯನ್ನು ವಿಸ್ತರಿಸಿ ಕರ್ನಾಟಕ ರಾಜ್ಯ ಸರ್ಕಾರ ಮಹತ್ವದ ಆದೇಶವನ್ನು ಮಾಡಿದೆ.



ದಿನಾಂಕ 15-02-2022ರಂದು ಈ ಬಗ್ಗೆ ಜ್ಞಾಪನವನ್ನು ಹೊರಡಿಸಿರುವ ನೋಂದಣಿ ಮತ್ತು ಮುದ್ರಾಂಕ ಇಲಾಖೆ, ಕಚೇರಿ ಕೆಲಸದ ಅವಧಿಯನ್ನು ಬೆಳಿಗ್ಗೆ 9.00 ಗಂಟೆಯಿಂದ ಸಂಜೆ(ರಾತ್ರಿ) 7.00 ಗಂಟೆಗೆ ವರೆಗೆ ವಿಸ್ತರಿಸಿದೆ. 


ಈ ಆದೇಶವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸೂಚಿಸಿದ್ದು, ರಾಜ್ಯದ ಎಲ್ಲ ಉಪ ನೋಂದಣಾಧಿಕಾರಿಗಳಿಗೆ ಮತ್ತು ಜಿಲ್ಲಾ ನೋಂದಣಾಧಿಕಾರಿಗಳಿಗೆ ಆದೇಶ ಹೊರಡಿಸಿದೆ.



ಇದರಿಂದ ಕಚೇರಿಯಲ್ಲಿ ನೋಂದಾವಣೆಗೊಳ್ಳುವ ದಾಖಲೆಗಳಲ್ಲೂ ಗಣನೀಯ ಏರಿಕೆಯಾಗಲಿದ್ದು, ಸಾರ್ವಜನಿಕರಿಗೆ ಒತ್ತಡ ಕಡಿಮೆಯಾಗಲಿದೆ. ಇದರ ಜೊತೆಗೆ ಮುದ್ರಾಂಕ ಮತ್ತು ನೋಂದಣಿ ಶುಲ್ಕದಲ್ಲಿ ಗಣನೀಯ ಏರಿಕೆಯಾಗಲಿದ್ದು, ಸರ್ಕಾರಿ ಬೊಕ್ಕಸಕ್ಕೆ ಭರ್ಜರಿ ಆದಾಯ ನಿರೀಕ್ಷಿಸಲಾಗಿದೆ.


ಜ್ಞಾಪನ ಸಂಖ್ಯೆ: RGN/614/2021-22 ದಿ. 15-02-2022 (ನೋಂದಣಿ ಮತ್ತು ಮುದ್ರಾಂಕ ಇಲಾಖೆ)


Ads on article

Advertise in articles 1

advertising articles 2

Advertise under the article