-->
SC Judgement on paying tax of seized vehicle- ಜಪ್ತಿ ಮಾಡಿದ ಸಂಸ್ಥೆಯೇ ವಾಹನದ ತೆರಿಗೆ ಕಟ್ಟಬೇಕು ಸುಪ್ರೀಂಕೋರ್ಟ್ ಮಹತ್ವದ ನಿರ್ಧಾರ

SC Judgement on paying tax of seized vehicle- ಜಪ್ತಿ ಮಾಡಿದ ಸಂಸ್ಥೆಯೇ ವಾಹನದ ತೆರಿಗೆ ಕಟ್ಟಬೇಕು ಸುಪ್ರೀಂಕೋರ್ಟ್ ಮಹತ್ವದ ನಿರ್ಧಾರ

ಜಪ್ತಿ ಮಾಡಿದ ಸಂಸ್ಥೆಯೇ ವಾಹನದ ತೆರಿಗೆ ಕಟ್ಟಬೇಕು ಸುಪ್ರೀಂಕೋರ್ಟ್ ಮಹತ್ವದ ನಿರ್ಧಾರ






ಜಪ್ತಿ ಮಾಡಿದ ವಾಹನದ ತೆರಿಗೆಯನ್ನು ಜಪ್ತಿ ಮಾಡಿದ ಸಂಸ್ಥೆಯೇ ಕಟ್ಟಬೇಕು ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.



ವಾಹನ ಸಾಲದ ಅಡಿ ಖರೀದಿಸಲಾ ಅಥವಾ ಬಾಡಿಗೆ ಯಾ ಭೋಗ್ಯಕ್ಕೆ ಪಡೆಯಲಾಗಿರುವ ಅಥವಾ ಮತ್ಯಾವುದೇ ರೀತಿಯ ಕಾನೂನಾತ್ಮಕ ಒಪ್ಪಂದದ ಮೇರೆಗೆ ಪಡೆಯಲಾಗಿರುವ ವಾಹನದ ಸಾಲದ ಕಂತು ಕಟ್ಟದ ಕಾರಣ ಬ್ಯಾಂಕ್ ಅಥವಾ ಯಾವುದಾದರೂ ಹಣಕಾಸು ಸಂಸ್ಥೆ ಜಾಸ್ತಿ ಮಾಡಿದರೆ, ಜಪ್ತಿ ಮಾಡಿದ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆ ವಾಹನಕ್ಕೆ ಸಂಬಂಧಪಟ್ಟ ಎಲ್ಲ ತೆರಿಗೆಗಳನ್ನು ಪಾವತಿ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಅಲಹಾಬಾದ್ ಹೈಕೋರ್ಟ್ ನೀಡಿದ ಆದೇಶವನ್ನು ಸುಪ್ರೀಂಕೋರ್ಟ್ ಈ ಮೂಲಕ ಎತ್ತಿಹಿಡಿದಿದೆ.



ಮಹೇಂದ್ರ ಅಂಡ್ ಮಹೇಂದ್ರ ಫೈನಾನ್ಸಿಯಲ್ ಸರ್ವಿಸಸ್ ಸಂಸ್ಥೆ ತಮ್ಮ ಗ್ರಾಹಕರೊಬ್ಬರಿಗೆ ವಾಹನ ಖರೀದಿಸಲು ಸಾಲವನ್ನು ನೀಡಿತ್ತು. ಸಾಲ ಪಡೆದ ಆ ವ್ಯಕ್ತಿಯು ಸಾಲದ ಕಂತನ್ನು ಪಾವತಿಸದ ಹಿನ್ನೆಲೆಯಲ್ಲಿ ಸಂಸ್ಥೆಯು ವಾಹನವನ್ನು ಜಪ್ತಿ ಮಾಡಿತ್ತು.



ಆದರೆ ಜಪ್ತಿಯಾದ ವಾಹನ ತೆರಿಗೆಯನ್ನು ಯಾರು ಕಟ್ಟಬೇಕು? ವಾಹನ ಖರೀದಿಸಿದ ವ್ಯಕ್ತಿ ಕಟ್ಟಬೇಕೇ ಅಥವಾ ಜಪ್ತಿ ಮಾಡಿದ ಮಹೇಂದ್ರ ಸಂಸ್ಥೆ ಕಟ್ಟಬೇಕೆ? ಎಂಬ ಪ್ರಶ್ನೆ ಉದ್ಭವವಾಗಿರುವ ಹಿನ್ನೆಲೆಯಲ್ಲಿ ಈ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು.



ಅರ್ಜಿಯ ವಿಚಾರಣೆ ನಡೆಸಿದ ಅಲಹಾಬಾದ್ ಹೈಕೋರ್ಟ್ ಮಹೇಂದ್ರ ಅಂಡ್ ಮಹೇಂದ್ರ ಫೈನಾನ್ಸಿಯಲ್ ಸರ್ವಿಸಸ್ ಸಂಸ್ಥೆ ವಾಹನದ ತೆರಿಗೆ ಪಾವತಿಸಬೇಕು ಎಂದು ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿ ಹಣಕಾಸು ಸಂಸ್ಥೆ ಮಹೇಂದ್ರ ಸುಪ್ರೀಂ ಕೋರ್ಟಿನ ಮೆಟ್ಟಿಲೇರಿತ್ತು.

Ads on article

Advertise in articles 1

advertising articles 2

Advertise under the article