Transfer is not a right- "ವರ್ಗಾವಣೆ" ಸರ್ಕಾರಿ ನೌಕರರ ಹಕ್ಕು ಎನ್ನಲಾಗದು: ಮದ್ರಾಸ್ ಹೈಕೋರ್ಟ್
"ವರ್ಗಾವಣೆ" ಸರ್ಕಾರಿ ನೌಕರರ ಹಕ್ಕು ಎನ್ನಲಾಗದು: ಮದ್ರಾಸ್ ಹೈಕೋರ್ಟ್
ವರ್ಗಾವಣೆಯನ್ನು ಯಾವುದೇ ಸರ್ಕಾರಿ ಉದ್ಯೋಗಿ ಯಾ ಅಧಿಕಾರಿಯು ತನ್ನ ಹಕ್ಕು ಎಂದು ಭಾವಿಸಲಾಗದು ಎಂದು ಮದ್ರಾಸ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಪ್ರಕರಣ: ಎಂ. ಕಾಚು ಫಾತಿಮಾ Vs ತಮಿಳುನಾಡು ಸರ್ಕಾರ
ಎಂದಿನ ಕರ್ತವ್ಯಕ್ಕೆ "ವರ್ಗಾವಣೆ" ಎಂಬುದು ಕೇವಲ ಪ್ರಾಸಂಗಿಕವಾದದ್ದು. ಅದರಲ್ಲಿ ನೀಡುವ ಯಾ ನೀಡಲಾಗುತ್ತಿರುವ ವಿನಾಯಿತಿಯನ್ನು ಎಂದಿಗೂ ಹಕ್ಕು ಎನ್ನಲಾಗದು ಎಂದು ಮದ್ರಾಸ್ ಹೈಕೋರ್ಟ್ ಮಧುರೈ ನ್ಯಾಯಪೀಠ ತೀರ್ಪಿನಲ್ಲಿ ಹೇಳಿದೆ.
ವರ್ಗಾವಣೆ ಕೌನ್ಸೆಲಿಂಗ್ ವೇಳೆ ತಮ್ಮನ್ನು ಪಟ್ಟಿಯಲ್ಲಿ ಸೇರಿಸಬೇಕು ಹಾಗೂ ಆದ್ಯತೆಯಲ್ಲಿ ಪರಿಗಣಿಸಬೇಕು ಎಂದು ಕೋರಿ ಸರ್ಕಾರಿ ಉದ್ಯೋಗಿಯೊಬ್ಬರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಈ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ನ್ಯಾಯಪೀಠ, ಸಾರ್ವಜನಿಕ ಹಿತಾಸಕ್ತಿಯಿಂದ ವರ್ಗಾವಣೆ ಕೈಗೊಳ್ಳುವುದು ಸರ್ಕಾರದ ಅಧಿಕಾರಕ್ಕೆ ಒಳಪಡುವಂತಹದ್ದು ಎಂದ ಪೀಠವು ಅರ್ಜಿಯನ್ನು ವಿಲೇವಾರಿ ಮಾಡಿತು.
ಸಾರ್ವಜನಿಕ ಹಿತಾಸಕ್ತಿಯನ್ನು ಗಮನದಲ್ಲಿ ಇಟ್ಟುಕೊಂಡು, ದಕ್ಷ ಮತ್ತು ಪರಿಣಾಮಕಾರಿ ಆಡಳಿತವನ್ನು ಖಚಿತಪಡಿಸಿಕೊಳ್ಳಲು ಉದ್ಯೋಗಿಯನ್ನು ವರ್ಗಾವಣೆ ಮಾಡುವುದು ಯಾವುದೇ ಸರ್ಕಾರದ ಪರಮಾಧಿಕಾರವಾಗಿದೆ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿತು.