-->
Admin not responsible for the members post in watsapp group- ಸದಸ್ಯರ ವಾಟ್ಸ್ಯಾಪ್ ಸಂದೇಶಕ್ಕೆ ಗ್ರೂಪ್ ಅಡ್ಮಿನ್ ಜವಾಬ್ದಾರನಲ್ಲ: ಕೇರಳ ಹೈಕೋರ್ಟ್ ಮಹತ್ವದ ತೀರ್ಪು

Admin not responsible for the members post in watsapp group- ಸದಸ್ಯರ ವಾಟ್ಸ್ಯಾಪ್ ಸಂದೇಶಕ್ಕೆ ಗ್ರೂಪ್ ಅಡ್ಮಿನ್ ಜವಾಬ್ದಾರನಲ್ಲ: ಕೇರಳ ಹೈಕೋರ್ಟ್ ಮಹತ್ವದ ತೀರ್ಪು

ಸದಸ್ಯರ ವಾಟ್ಸ್ಯಾಪ್ ಸಂದೇಶಕ್ಕೆ ಗ್ರೂಪ್ ಅಡ್ಮಿನ್ ಜವಾಬ್ದಾರನಲ್ಲ: ಕೇರಳ ಹೈಕೋರ್ಟ್ ಮಹತ್ವದ ತೀರ್ಪು





ಯಾವುದೇ ವಾಟ್ಸಾಪ್ ಗ್ರೂಪ್‌ನಲ್ಲಿ, ಅದರ ಸದಸ್ಯರು ಶೇರ್ ಮಾಡುವ ಯಾವುದೇ ಆಕ್ಷೇಪಾರ್ಹ ಯಾ ವಿವಾದಾತ್ಮಕ ಸಂದೇಶಗಳಿಗೆ, ವಿಷಯಗಳಿಗೆ ಆ ಗ್ರೂಪ್‌ನ ಅಡ್ಮಿನ್ ಜವಾಬ್ದಾರರಾಗಿರುವುದಿಲ್ಲ ಎಂದು ನ್ಯಾಯಾಲಯ ಪುನರುಚ್ಚರಿಸಿದೆ.



ವಾಟ್ಸಾಪ್ ಗುಂಪಿನ ಸೃಷ್ಟಿಕರ್ತರು ಅಥವಾ ನಿರ್ವಾಹಕರು ಗ್ರೂಪ್ ಅಡ್ಮಿನ್ ಆಗಿ ಕೇವಲ ಆ ಸಾಮರ್ಥ್ಯದಲ್ಲಿ ಮಾತ್ರವೇ ಕಾರ್ಯನಿರ್ವಹಿಸುತ್ತಾರೆ. ಗುಂಪಿನ ಸದಸ್ಯರಿಂದ ಶೇರ್ ಮಾಡಿದ ಯಾವುದೇ ಆಕ್ಷೇಪಾರ್ಹ ವಿಷಯಕ್ಕೆ ಅವರು ಜವಾಬ್ದಾರರಾಗಿರುವುದಿಲ್ಲ ಎಂದು ಕೇರಳ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.



ವಾಟ್ಸಾಪ್ ಗುಂಪಿನಲ್ಲಿ ಇರುವ ಒಬ್ಬ ಸದಸ್ಯ ಮಾಡಿದ ಪೋಸ್ಟ್ ಗೆ ಸಂಬಂಧಿಸಿದಂತೆ, ಆ ಗ್ರೂಪ್‌ನ ನಿರ್ವಾಹಕರನ್ನು ಹೊಣೆಗಾರರನ್ನಾಗಿ ಮಾಡಲು ಯಾವುದೇ ಕಾನೂನು ಅಸ್ತಿತ್ವದಲ್ಲಿ ಇಲ್ಲ. ವಾಟ್ಸಾಪ್ ಅಡ್ಮಿನ್ ನ್ನು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿಯಲ್ಲಿ ಮಧ್ಯವರ್ತಿಯಾಗಲು ಸಾಧ್ಯವಿಲ್ಲ ಎಂದು ಕೇರಳ ಉಚ್ಚ ನ್ಯಾಯಾಲಯ ತನ್ನ ತೀರ್ಪಿನಲ್ಲಿ ಹೇಳಿದೆ.



ಗುಂಪಿನ ಅಡ್ಮಿನ್ ಮತ್ತು ಸದಸ್ಯರ ನಡುವೆ ಮಾಲಕ-ಕೆಲದಾಳು ಸಂಬಂಧ ಇಲ್ಲ. ಹಾಗೆಯೇ ಪ್ರಿನ್ಸಿಪಾಲ್-ಏಜೆಂಟ್ ಸಂಬಂಧವೂ ಇಲ್ಲ. ಹಾಗಾಗಿ, ಯಾರೋ ಮಾಡಿದ ತಪ್ಪಿಗೆ ಯಾರನ್ನೋ ದೂರುವುದು ಅಪರಾಧ ದಂಡ ಸಂಹಿತೆಯ ಮೂಲ ತತ್ವಗಳಿಗೆ ವಿರುದ್ಧವಾಗಿದೆ ಎಂದು ಕೇರಳ ಹೈಕೋರ್ಟ್ ತೀರ್ಪಿನಲ್ಲಿ ಹೇಳಿದೆ.

Ads on article

Advertise in articles 1

advertising articles 2

Advertise under the article