Career for Advocates- ವಕೀಲರ ನೇಮಕಾತಿಗೆ ಅರ್ಜಿ ಆಹ್ವಾನ; ಇಲ್ಲಿದೆ ಸಂಪೂರ್ಣ ಮಾಹಿತಿ
ವಕೀಲರ ನೇಮಕಾತಿಗೆ ಅರ್ಜಿ ಆಹ್ವಾನ; ಇಲ್ಲಿದೆ ಸಂಪೂರ್ಣ ಮಾಹಿತಿ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರ ಕುಟುಂಬ ಕ್ಷೇಮಾಭಿವೃದ್ಧಿ ಸಂಘ ಮತ್ತು ಅದರ ಸದಸ್ಯತ್ವ ಪಡೆದ ನೌಕರರಿಗೆ ಸಂಬಂಧಿಸಿದಂತೆ ನ್ಯಾಯಾಲಯಗಳಲ್ಲಿ ಪ್ರಕರಣಗಳನ್ನು ನಡೆಸಲು ಜಿಲ್ಲಾವಾರು ಮತ್ತು ತಾಲೂಕುವಾರು ಸಹಾಯಕ ಕಾನೂನು ಸಲಹೆಗಾರರು ಅಥವಾ ವಕೀಲರ ನೇಮಕಾತಿಗೆ ಅರ್ಜಿ ಆಹ್ವಾನ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರ ಕುಟುಂಬ ಕ್ಷೇಮಾಭಿವೃದ್ಧಿ ಸಂಘದ ಕಾನೂನು ವಿಭಾಗದಲ್ಲಿ ಸಾರಿಗೆ ನೌಕರರಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಪ್ರಕರಣಗಳನ್ನು ನಡೆಸಲು ಜಿಲ್ಲಾವಾರು ಮತ್ತು ತಾಲೂಕುವಾರು ಸಹಾಯಕ ಕಾನೂನು ಸಲಹೆಗಾರರು ಅಥವಾ ವಕೀಲರ ನೇಮಕಾತಿಗೆ ಅರ್ಹ ವಕೀಲರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಹಾಗೂ ತಾಲೂಕುಗಳಲ್ಲಿ ನೌಕರರ ಮತ್ತು ಅವರ ಕುಟುಂಬಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಗಳಲ್ಲಿ ಪ್ರಕರಣಗಳ ನಡೆಸಲು ವಕೀಲರನ್ನು ನೇಮಕ ಮಾಡಿಕೊಳ್ಳಲಾಗುವುದು.
ಜಿಲ್ಲಾ ಮತ್ತು ತಾಲ್ಲೂಕು ಸಹಾಯಕ ಹುದ್ದೆಗಳ ವಿವರ ಹೀಗಿದೆ
ಬಾಗಲಕೋಟೆ : ಒಟ್ಟು ಹುದ್ದೆ 10 ಪುರುಷ 05 ಮಹಿಳೆ 05
ಬೆಂಗಳೂರು ನಗರ : ಒಟ್ಟು ಹುದ್ದೆ 10 ಪುರುಷ 05 ಮಹಿಳೆ 05
ಬೆಂಗಳೂರು ಗ್ರಾಮಾಂತರ : ಒಟ್ಟು ಹುದ್ದೆ 05 ಪುರುಷ 03 ಮಹಿಳೆ 02
ಬೆಳಗಾವಿ : ಒಟ್ಟು ಹುದ್ದೆ 15 ಪುರುಷ 10 ಮಹಿಳೆ 05
ಬಳ್ಳಾರಿ : ಒಟ್ಟು ಹುದ್ದೆ 08 ಪುರುಷ 05 ಮಹಿಳೆ 03
ಬೀದರ್ : ಒಟ್ಟು ಹುದ್ದೆ 10 ಪುರುಷ 05 ಮಹಿಳೆ 05
ವಿಜಯಪುರ : ಒಟ್ಟು ಹುದ್ದೆ 13 ಪುರುಷ 08 ಮಹಿಳೆ 05
ಚಾಮರಾಜ ನಗರ : ಒಟ್ಟು ಹುದ್ದೆ 06 ಪುರುಷ 03 ಮಹಿಳೆ 03
ಚಿಕ್ಕಬಳ್ಳಾಪುರ : ಒಟ್ಟು ಹುದ್ದೆ 10 ಪುರುಷ 05 ಮಹಿಳೆ 05
ಚಿಕ್ಕಮಗಳೂರು : ಒಟ್ಟು ಹುದ್ದೆ 10 ಪುರುಷ 05 ಮಹಿಳೆ 05
ಚಿತ್ರದುರ್ಗ : ಒಟ್ಟು ಹುದ್ದೆ 10 ಪುರುಷ 05 ಮಹಿಳೆ 05
ದಕ್ಷಿಣ ಕನ್ನಡ : ಒಟ್ಟು ಹುದ್ದೆ 10 ಪುರುಷ 05 ಮಹಿಳೆ 05
ದಾವಣಗೆರೆ : ಒಟ್ಟು ಹುದ್ದೆ 06 ಪುರುಷ 03 ಮಹಿಳೆ 03
ಧಾರವಾಡ : ಒಟ್ಟು ಹುದ್ದೆ 10 ಪುರುಷ 05 ಮಹಿಳೆ 05
ಗದಗ : ಒಟ್ಟು ಹುದ್ದೆ 06 ಪುರುಷ 03 ಮಹಿಳೆ 03
ಕಲ್ಬುರ್ಗಿ : ಒಟ್ಟು ಹುದ್ದೆ 12 ಪುರುಷ 08 ಮಹಿಳೆ 04
ಹಾಸನ : ಒಟ್ಟು ಹುದ್ದೆ 10 ಪುರುಷ 05 ಮಹಿಳೆ 05
ಹಾವೇರಿ : ಒಟ್ಟು ಹುದ್ದೆ 08 ಪುರುಷ 05 ಮಹಿಳೆ 03
ಕೊಡಗು : ಒಟ್ಟು ಹುದ್ದೆ 05 ಪುರುಷ 03 ಮಹಿಳೆ 02
ಕೋಲಾರ : ಒಟ್ಟು ಹುದ್ದೆ 07 ಪುರುಷ 04 ಮಹಿಳೆ 03
ಕೊಪ್ಪಳ : ಒಟ್ಟು ಹುದ್ದೆ 08 ಪುರುಷ 05 ಮಹಿಳೆ 03
ಮಂಡ್ಯ : ಒಟ್ಟು ಹುದ್ದೆ 10 ಪುರುಷ 05 ಮಹಿಳೆ 05
ಮೈಸೂರು : ಒಟ್ಟು ಹುದ್ದೆ 12 ಪುರುಷ 05 ಮಹಿಳೆ 07
ರಾಯಚೂರು : ಒಟ್ಟು ಹುದ್ದೆ 09 ಪುರುಷ 05 ಮಹಿಳೆ 04
ರಾಮನಗರ : ಒಟ್ಟು ಹುದ್ದೆ 07 ಪುರುಷ 04 ಮಹಿಳೆ 03
ಶಿವಮೊಗ್ಗ : ಒಟ್ಟು ಹುದ್ದೆ 07 ಪುರುಷ 04 ಮಹಿಳೆ 03
ತುಮಕೂರು : ಒಟ್ಟು ಹುದ್ದೆ 13 ಪುರುಷ 08 ಮಹಿಳೆ 05
ಉಡುಪಿ : ಒಟ್ಟು ಹುದ್ದೆ 05 ಪುರುಷ 03 ಮಹಿಳೆ 02
ಉತ್ತರ ಕನ್ನಡ : ಒಟ್ಟು ಹುದ್ದೆ 12 ಪುರುಷ 06 ಮಹಿಳೆ 06
ವಿಜಯನಗರ : ಒಟ್ಟು ಹುದ್ದೆ 05 ಪುರುಷ 03 ಮಹಿಳೆ 02
ಯಾದಗಿರಿ : ಒಟ್ಟು ಹುದ್ದೆ 04 ಪುರುಷ 02 ಮಹಿಳೆ 02
ಒಟ್ಟು ಹುದ್ದೆಗಳು : ಒಟ್ಟು ಹುದ್ದೆ 273 ಪುರುಷ 150 ಮಹಿಳೆ 123
ಅರ್ಹ ಅಭ್ಯರ್ಥಿಗಳು ಕರ್ನಾಟಕ ರಾಜ್ಯದಲ್ಲಿ ಪ್ರಸ್ತುತ ವಕೀಲ ವೃತ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರಬೇಕು.
ವಕೀಲ ವೃತ್ತಿಯಲ್ಲಿ ಕನಿಷ್ಠ 3 ವರ್ಷಗಳ ಅನುಭವ ಹೊಂದಿರಬೇಕು
ವಯೋಮಿತಿ 40 ವರ್ಷದೊಳಗಿರಬೇಕು
ವಕೀಲ ವೃತ್ತಿಯಲ್ಲಿ ಕ್ರಿಮಿನಲ್, ಸಿವಿಲ್, ಕಾರ್ಮಿಕರ ನ್ಯಾಯಾಲಯದ ಪ್ರಕರಣಗಳು ಹಾಗೂ ಅಪಘಾತ ಪ್ರಕರಣ ಕೌಟುಂಬಿಕ ಪ್ರಕರಣಗಳನ್ನು ನಡೆಸುವ ಹಾಗೂ ಈ ಹಿಂದೆ ಇಂತಹ ಪ್ರಕರಣಗಳನ್ನು ನಡೆಸಿರುವ ಅನುಭವ ಇರಬೇಕು.
ಅಭ್ಯರ್ಥಿಗಳು ಕಾರ್ಮಿಕರ ಪರವಾಗಿ ನ್ಯಾಯಾಲಯಗಳಲ್ಲಿ ವಕಾಲತ್ತು ವಹಿಸಿ ಪ್ರಕರಣಗಳನ್ನು ಇತ್ಯರ್ಥ ಪಡಿಸಿರುವ ಅನುಭವ ಇರಬೇಕು
ನ್ಯಾಯಾಲಯದಲ್ಲಿ ನಿಗದಿತ ದಿನಾಂಕದಂದು ಕಾರ್ಮಿಕರ ಪರವಾಗಿ ಖುದ್ದು ಹಾಜರಾಗಿ ಪ್ರಕರಣಗಳ ವಿಚಾರಣೆಯಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಬೇಕು. ಒಂದು ವೇಳೆ ನಿಗದಿತ ಸಮಯಕ್ಕೆ ನ್ಯಾಯಾಲಯದಲ್ಲಿ ಕಾರ್ಮಿಕರ ಪರವಾಗಿ ಪ್ರಕರಣ ನಡೆಸಲು ಹಾಜರು ಆಗದಿದ್ದಲ್ಲಿ ಅಂತಹ ವಕೀಲರನ್ನು ಸಂಘದಿಂದ ಮುಖ್ಯ ಕಾನೂನು ಸಲಹೆಗಾರರ ಸಲಹೆ ಮೇರೆಗೆ ಬಿಡಲಾಗುವುದು ಮತ್ತು ಇತರೆ ವಕೀಲರನ್ನು ನೇಮಕ ಮಾಡಿಕೊಳ್ಳಲಾಗುವುದು.
ಕಾರ್ಮಿಕರ ಪರವಾಗಿ ನ್ಯಾಯಾಲಯದಲ್ಲಿ ಅಂದಿನ ಪ್ರಕರಣದ ವಿಚಾರಣೆಯ ಪ್ರಗತಿಯ ಮಾಹಿತಿಯನ್ನು ಮುಖ್ಯ ಕಾನೂನು ಸಲಹೆಗಾರರಿಗೆ ತಿಳಿಸಬೇಕು
ಕಾರ್ಮಿಕರ ಪರವಾಗಿ ಕಾರ್ಯನಿರ್ವಹಿಸುವ ವಕೀಲರುಗಳು ಸಂಘದ ಪರವಾಗಿ ಮುಖ್ಯ ಕಾನೂನು ಸಲಹೆಗಾರರು ಕರೆಯುವ ಸಭೆಗೆ ಹಾಜರಾಗುವುದು
ವಕೀಲರು ಗಳಿಗೆ ಪ್ರಕರಣಗಳಿಗೆ ಅನುಗುಣವಾಗಿ ಶುಲ್ಕವನ್ನು ನಿಗದಿಪಡಿಸಲಾಗುವುದು
ಅರ್ಜಿಯನ್ನು ಬೆರಳಚ್ಚು ಮಾಡಿ ಭರ್ತಿ ಮಾಡಿದ ಅರ್ಜಿಯನ್ನು ದೃಢೀಕರಿಸಿ ಅರ್ಜಿಯಲ್ಲಿ ಕೇಳಿದ ದಾಖಲೆಗಳ ಜೊತೆ ಸಲ್ಲಿಸುವುದು
ವಕೀಲರುಗಳು ಆಯ್ಕೆಯಾದ ನಂತರ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಘದ ನೌಕರರ ಕುಟುಂಬ ಕ್ಷೇಮಾಭಿವೃದ್ಧಿ ಸಂಘದ ನಿಯಮ ಮತ್ತು ಷರತ್ತುಗಳಿಗೆ ಬದ್ಧರಾಗಿರಬೇಕು
ದಿನಾಂಕ 31 3 2022 ರೊಳಗಾಗಿ ಅರ್ಜಿಯು ಸಂಘದ ಕಚೇರಿಗೆ ಅಂಚೆಯ ಮೂಲಕ ಈ ಕೆಳಗಿನ ವಿಳಾಸಕ್ಕೆ ಸಲ್ಲಿಸುವುದು
HBS Law Associates
Old No. 36/A, New No.42
I Main Road, Nagendra Block
SBM Colony, Opp Bus Stop
Bengaluru- 560 050