Allahabad HC Judgement - ಡಿಸ್ಟ್ರಿಕ್ಟ್ ಜಡ್ಜ್ ಆಗಲು 7 ವರ್ಷ ಸತತ ಪ್ರ್ಯಾಕ್ಟಿಸ್ ಕಡ್ಡಾಯ: ಅಲಾಹಾಬಾದ್ ಹೈಕೋರ್ಟ್
ಡಿಸ್ಟ್ರಿಕ್ಟ್ ಜಡ್ಜ್ ಆಗಲು 7 ವರ್ಷ ಸತತ ಪ್ರ್ಯಾಕ್ಟಿಸ್ ಕಡ್ಡಾಯ: ಅಲಾಹಾಬಾದ್ ಹೈಕೋರ್ಟ್
ಭಾರತದ ಸಂವಿಧಾನದ ವಿಧಿ 233 (2) ಪ್ರಕಾರ ಜಿಲ್ಲಾ ನ್ಯಾಯಾಧೀಶರಾಗಿ ನೇಮಕವಾಗಲು ತಡೆ ಇಲ್ಲದೆ 7 ವರ್ಷಗಳ ಕಾಲ ವಕೀಲರಾಗಿ ಅಭ್ಯಾಸ ಮಾಡುವುದು ಅವಶ್ಯಕ ಎಂದು ಅಲಹಾಬಾದ್ ಹೈಕೋರ್ಟ್ ಸ್ಪಷ್ಟಪಡಿಸಿದೆ.
ಪ್ರಕರಣ: ಬಿಂದು Vs ಹೈಕೋರ್ಟ್ ಆಫ್ ಜುಡಿಕೇಚರ್, ಅಲಹಾಬಾದ್
ಅಲಾಹಾಬಾದ್ ಹೈಕೋರ್ಟ್ Dated 22-03-2022
2019ರಿಂದ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಬಿಂದು ಅವರು ಉತ್ತರ ಪ್ರದೇಶದ ಉನ್ನತ ನ್ಯಾಯಾಂಗ ಸೇವೆಯಲ್ಲಿ ನ್ಯಾಯಾಂಗ ಅಧಿಕಾರಿಯಾಗಿ ನೇಮಕ ಬಯಸಿ ಅರ್ಜಿದಾರರಾದ ಬಿಂದು ಸಲ್ಲಿಸಿದ್ದ ಮನವಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.
ದೀಪಕ್ ಅಗರ್ವಾಲ್ Vs ಕೇಶವ್ ಕೌಶಿಕ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ಉದ್ಧರಿಸಿದ ಹೈಕೋರ್ಟ್ ಈ ತೀರ್ಪು ನೀಡಿದೆ.
ಅರ್ಜಿದಾರರಾದ ಬಿಂದು ಅವರು ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದರೂ, ಅರ್ಜಿ ಭರ್ತಿ ಮಾಡಿದ ದಿನದಂದು ವಕೀಲರಾಗಿ ಏಳು ವರ್ಷಗಳ ಸತತ ಪ್ರ್ಯಾಕ್ಟಿಸ್ ಮಾಡಿಲ್ಲ ಎಂಬುದನ್ನು ಗಮನಿಸಿದ ಹೈಕೋರ್ಟ್ ಈ ಅರ್ಜಿಯನ್ನು ತಿರಸ್ಕರಿಸಿತು.