NI Act- ಖಾತೆ ಸ್ತಂಬನವಾದರೆ, ಖಾತೆಯ ಅಸ್ತಿತ್ವವನ್ನೇ ನಿರಾಕರಿಸುವಂತಿಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ಖಾತೆ ಸ್ತಂಬನವಾದರೆ, ಖಾತೆಯ ಅಸ್ತಿತ್ವವನ್ನೇ ನಿರಾಕರಿಸುವಂತಿಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ಗ್ರಾಹಕರ ಬ್ಯಾಂಕ್ ಖಾತೆಯನ್ನು ಸ್ತಂಬನ (ಫ್ರೀಜ್) ಮಾಡಲಾಗಿದೆ ಎಂಬ ಕಾರಣಕ್ಕೆ ಆ ಖಾತೆಯ ಚೆಕ್ ಅಮಾನ್ಯ ಮಾಡಿದರೆ, ಆ ಬ್ಯಾಂಕ್ ಸಂಬಂಧಪಟ್ಟ ಖಾತೆಯ ಅಸ್ತಿತ್ವವನ್ನೇ ನಿರಾಕರಣೆ ಮಾಡವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಚೆಕ್ ಅಮಾನ್ಯ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ನೇತೃತ್ವದ ತ್ರಿಸದಸ್ಯ ಪೀಠ ಈ ಮಹತ್ವದ ತೀರ್ಪು ನೀಡಿದೆ.
ವಿಕ್ರಂ ಸಿಂಗ್ Vs ಶ್ಯೋಜಿ ರಾಮ್
Crimanal Appeal 289/2022 Dated: Feb 18, 2022
ಯಾವುದೇ ಗ್ರಾಹಕರ ಚೆಕ್ ಪಾವತಿಸದೆ ಬೌನ್ಸ್ ಮಾಡಿದರೆ, ಆ ಖಾತೆ ಸ್ತಂಬನ ಮಾಡಲಾಗಿದೆ ಎಂಬ ಕಾರಣ ನೀಡಿದರೆ, ಅಂತಹ ಖಾತೆಯ ಅಸ್ತಿತ್ವವನ್ನು ಬ್ಯಾಂಕ್‌ಗಳು ಹೊಂದಿವೆ ಎಂದು ಭಾವಿಸಬೇಕು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು. ಹಾಗೂ, ಮೇಲ್ಮನವಿದಾರರ ವಿರುದ್ಧದ ವಿಚಾರಣೆ ರದ್ದುಗೊಳಿಸಿದ್ದ ರಾಜಸ್ಥಾನ ಹೈಕೋರ್ಟ್‌ನ ಆದೇಶವನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿತು.
ವಿವರ:
ಚೆಕ್ ಅಮಾನ್ಯ ಪ್ರಕರಣವೊಂದರಲ್ಲಿ, ಬ್ಯಾಂಕೊಂದರ ನಿರ್ವಾಹಕರು ಒಂದು ಬ್ಯಾಂಕ್ ಖಾತೆಯು ಸ್ತಂಬನವಾಗಿದೆ (ಫ್ರೀಜ್ ಆಗಿದೆ) ಎಂಬ ಕಾರಣಕ್ಕೆ ಆ ಖಾತೆಯ ಚೆಕ್ ಅಮಾನ್ಯ ಮಾಡಿದ್ದರು. ಮತ್ತೊಂದೆಡೆ ಅಂತಹ ಯಾವುದೇ ಖಾತೆಯನ್ನು ತಮ್ಮ ಬ್ಯಾಂಕಿನಲ್ಲಿ ಆರಂಭಿಸಲಾಗಿಲ್ಲ, ನಿರ್ವಹಣೆಯನ್ನೂ ಮಾಡಲಾಗಿಲ್ಲ ಎಂದು ಸಾಕ್ಷ್ಯ ನುಡಿದಿದ್ದರು.
ಪ್ರಕರಣದಲ್ಲಿ DW-2, 3 ಹಾಗೆ ಸಾಕ್ಷ್ಯ ನುಡಿದರು ಎಂಬ ಕಾರಣಕ್ಕೆ ಪ್ರಕರಣವನ್ನು ರದ್ದುಪಡಿಸುವ ಹಾಗಿಲ್ಲ. ವಿಚಾರಣಾ ನ್ಯಾಯಾಲಯ ಈ ಬಗ್ಗೆ ಗಂಭೀರವಾದ ಮತ್ತು ಆಳವಾದ ಗಮನ ನೀಡಿ ಮರುವಿಚಾರಣೆ ನಡೆಸಬೇಕು ಎಂದು ಹೇಳಿ ರಾಜಸ್ತಾನ ಹೈಕೋರ್ಟ್ ಆದೇಶವನ್ನು ತಿರಸ್ಕರಿಸಿತು.
ಖಾತೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಚೆಕ್ ಮರಳಿಸಿದ್ದರೆ ಅದರ ಅರ್ಥ ಖಾತೆಯನ್ನು ಅಲ್ಲಿ ಆರಂಭಿಸಿ, ನಿರ್ವಹಣೆ ಮಾಡಲಾಗಿತ್ತು ಎನ್ನುವುದಾಗುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.