HC on Hijab issue - 'ಹಿಜಬ್' ಸಮಸ್ಯೆ ಉದ್ಭವಿಸಿದ್ದು ಹೇಗೆ...?- ಐತಿಹಾಸಿಕ ತೀರ್ಪಿನಲ್ಲಿ ಆತಂಕಕಾರಿ ವಿಷಯ ಬಿಚ್ಚಿಟ್ಟ ಹೈಕೋರ್ಟ್!
'ಹಿಜಬ್' ಸಮಸ್ಯೆ ಉದ್ಭವಿಸಿದ್ದು ಹೇಗೆ...?- ಐತಿಹಾಸಿಕ ತೀರ್ಪಿನಲ್ಲಿ ಆತಂಕಕಾರಿ ವಿಷಯ ಬಿಚ್ಚಿಟ್ಟ ಹೈಕೋರ್ಟ್!
ಶಿರವಸ್ತ್ರ (ಹಿಜಬ್) ಧರಿಸುವ ನೆಪದಲ್ಲಿ ಸಮಾಜದಲ್ಲಿ ಶಾಂತಿ ಹಾಗೂ ಸಾಮರಸ್ಯವನ್ನು ಕದಡುವ ಪ್ರಯತ್ನ ಮಾಡಿರುವ ವ್ಯವಸ್ಥಿತ ಸಂಚನ್ನು ಕ್ಷಿಪ್ರವಾಗಿ ಪತ್ತೆ ಹಚ್ಚಿ, ಅಂಥಹ ಕೃತ್ಯ ಎಸಗಿದವರ ವಿರುದ್ಧ ಕ್ರಮ ಜರುಗಿಸುವ ಅಗತ್ಯವಿದೆ ಎಂದು ಕರ್ನಾಟಕ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಪ್ರಕರಣ: ಶ್ರೀಮತಿ ರೇಶಮ್ ಮತ್ತಿತರರು Vs ಕರ್ನಾಟಕ ಸರ್ಕಾರ ಮತ್ತಿತರರು (ಕರ್ನಾಟಕ ಹೈಕೋರ್ಟ್ 15-03-2022)
ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿರ್ಬಂಧಿಸಿದ ಕ್ರಮ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳನ್ನು ವಜಾಗೊಳಿಸಿರುವ ಹೈಕೋರ್ಟ್ ತ್ರಿಸದಸ್ಯ ವಿಸ್ತೃತ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಉಡುಪಿ ಕಾಲೇಜಿನ ಪರ ವಕೀಲರ ವಾದ ಮಂಡನೆ ಹಾಗೂ ಸಲ್ಲಿಸಿರುವ ದಾಖಲೆಗಳ ಪ್ರಕಾರ 2004ರಿಂದಲೂ ಸಮವಸ್ತ್ರ ಸಂಹಿತೆ ಜಾರಿಯಲ್ಲಿತ್ತು. ಎಲ್ಲವೂ ಸುಸೂತ್ರವಾಗಿ ನಡೆದುಕೊಂಡು ಬಂದಿದೆ. ಉಡುಪಿಯ ಅಷ್ಟ ಮಠಗಳ ಸಾಂಪ್ರದಾಯಿಕ ಹಬ್ಬ- ಆಚರಣೆಯಲ್ಲೂ ಮುಸ್ಲಿಮರು ಭಾಗಿಯಾಗುವುದನ್ನು ತಿಳಿದು ಪ್ರಭಾವಿತರಾಗಿದ್ದೇವೆ ಎಂದು ನ್ಯಾಯಪೀಠ ತನ್ನ ತೀರ್ಪಿನಲ್ಲಿ ಹೇಳಿದೆ.
ಶೈಕ್ಷಣಿಕ ಅವಧಿಯ ಮಧ್ಯದಲ್ಲಿ ಇದ್ದಕ್ಕಿದ್ದಂತೆ ಹಿಜಬ್ ಸಮಸ್ಯೆ ಉದ್ಭವಿಸಿರುವುದು ಆತಂಕಕಾರಿ. ಇದರಲ್ಲಿ ಕಾಣದ ಕೈಗಳು ಸಮಾಜದ ಶಾಂತಿ ಹಾಗೂ ಸಾಮರಸ್ಯವನ್ನು ಕೆಡಿಸುವ ಪ್ರಯತ್ನ ನಡೆಸಿರುವುದು ಗೋಚರವಾಗುತ್ತದೆ ಎಂದು ಪೀಠ ಹೇಳಿದೆ.
ಕಾಲೇಜು ಪರ ವಾದಿಸಿದ ಹಿರಿಯ ವಕೀಲ ಎಸ್.ಎಸ್ ನಾಗಾನಂದ್, ಹಿಜಾಬ್ ವಿವಾದ ಸೃಷಿಯಾಗಲು ಕಾರಣವಾದ ಸಂಘಟನೆ ವಿರುದ್ಧ ಕಾಲೇಜಿನ ಉಪನ್ಯಾಸಕರು ದೂರು ನೀಡಿದ್ದಾರೆ. ಆ ದೂರಿನ ಮೇರೆಗೆ FIR ದಾಖಲಿಸಲಾಗಿದೆ ಎಂದು ವಿಚಾರಣೆ ಸಂದರ್ಭದಲ್ಲಿ ತಿಳಿಸಿದ್ದರು.
ಈ ಸಂಬಂಧ ಕೆಲವೊಂದು ದಾಖಲೆಗಳನ್ನು ಪೀಠಕ್ಕೆ ಸಲ್ಲಿಸಲಾಗಿದೆ. ಪೊಲೀಸ್ ತನಿಖೆಯ ಮೇಲೆ ಪರಿಣಾಮ ಬೀರಬಾರದು ಎಂಬ ಕಾರಣಕ್ಕೆ ನಾವು ಯಾವುದೇ ಅಭಿಪ್ರಾಯ ವ್ಯಕ್ತಪಡಿಸುವುದಿಲ್ಲ. ಸೀಲ್ ಮಾಡಲಾದ ಲಕೋಟೆಯಲ್ಲಿ ಸಲ್ಲಿಸಿದ ವರದಿಯನ್ನು ಪರಿಶೀಲಿಸಿದ್ದೇವೆ. ತನಿಖೆಯು ಕ್ಷಿಪ್ರವಾಗಿ, ಪ್ರಾಮಾಣಿಕವಾಗಿ ನಡೆಯಬೇಕು. ಈ ಬಗ್ಗೆ ತಡಮಾಡದೇ ತಪ್ಪಿತಸ್ಥರನ್ನು ಕಾನೂನು ಕ್ರಮಕ್ಕೆ ಗುರಿಪಡಿಸುವುದನ್ನು ನಿರೀಕ್ಷಿಸುತ್ತೇವೆ ಎಂದು ತೀರ್ಪಿನ 126-127ನೇ ಪುಟದಲ್ಲಿ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
For Court Order Click here below:
ಪ್ರಕರಣ: ಶ್ರೀಮತಿ ರೇಶಮ್ ಮತ್ತಿತರರು Vs ಕರ್ನಾಟಕ ಸರ್ಕಾರ ಮತ್ತಿತರರು (ಕರ್ನಾಟಕ ಹೈಕೋರ್ಟ್ 15-03-2022)