'Holi'day for all courts- ಶುಕ್ರವಾರ ರಾಜ್ಯದ ಎಲ್ಲ ಕೋರ್ಟ್ ಗಳಿಗೆ ರಜೆ; ಮಾರ್ಚ್ ನಾಲ್ಕನೇ ಶನಿವಾರದ ರಜೆ ರದ್ದು
Thursday, March 17, 2022
ಶುಕ್ರವಾರ ರಾಜ್ಯದ ಎಲ್ಲ ಕೋರ್ಟ್ ಗಳಿಗೆ ರಜೆ; ಮಾರ್ಚ್ ನಾಲ್ಕನೇ ಶನಿವಾರದ ರಜೆ ರದ್ದು
ರಾಜ್ಯದ ಎಲ್ಲ ವಿಚಾರಣಾ ನ್ಯಾಯಾಲಯ, ಜಿಲ್ಲಾ ನ್ಯಾಯಾಲಯ ಹಾಗೂ ಹೈಕೋರ್ಟ್ ಪೀಠಕ್ಕೆ 18-03-2022ರಂದು ರಜೆ ಘೋಷಿಸಲಾಗಿದೆ. ಹೋಳಿ ಹಬ್ಬದ ಪ್ರಯುಕ್ತ ರಜೆ ಘೋಷಿಸುವುದಾಗಿ ಹೈಕೋರ್ಟ್ ತನ್ನ ಅಧಿಸೂಚನೆಯಲ್ಲಿ ಪ್ರಕಟಿಸಿದೆ.
ನಿನ್ನೆಯಷ್ಟೇ ಹೋಳಿ ರಜೆಯನ್ನು ಘೋಷಿಸಿದ್ದ
ಹೈಕೋರ್ಟ್, ತನ್ನ ಬೆಂಗಳೂರು ಪ್ರಧಾನ ಪೀಠ, ಕಲ್ಬುರ್ಗಿ ಮತ್ತು ಧಾರವಾಡ ಪೀಠಗಳಿಗೆ ರಜೆಯನ್ನು ಸೀಮಿತಗೊಳಿಸಿತ್ತು.
ಆದರೆ, ಬೆಂಗಳೂರು ವಕೀಲರ ಸಂಘ ಹಾಗೂ ಇತರ
ವಕೀಲರ ಸಂಘದ ಮನವಿಗೆ ಸ್ಪಂದಿಸಿ ಹೈಕೋರ್ಟ್ ಈ ರಜೆಯನ್ನು ಪ್ರಕಟಿಸಿದೆ.
ಈ ರಜೆಯ ಬದಲಿಗೆ ಮಾರ್ಚ್ ತಿಂಗಳ ನಾಲ್ಕನೇ
ಶನಿವಾರದ ರಜೆಯನ್ನು ರದ್ದುಗೊಳಿಸಲಾಗಿದೆ. 26-03-2022ರಂದು ರಾಜ್ಯದ ಎಲ್ಲ ಕೋರ್ಟ್ ಗಳು ಕಚೇರಿಯ
ಪೂರ್ಣ ಅವಧಿಯಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಹೈಕೋರ್ಟ್ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.