Insurance plan to KSBC members- ವಕೀಲರಿಗೆ ಸಿಹಿ ಸುದ್ದಿ: ವಿಮಾ ಯೋಜನೆ ಜಾರಿಗೆ ಚಿಂತನೆ
ವಕೀಲರಿಗೆ ಸಿಹಿ ಸುದ್ದಿ: ವಿಮಾ ಯೋಜನೆ ಜಾರಿಗೆ ಚಿಂತನೆ
ರಾಜ್ಯ ವಕೀಲರ ಪರಿಷತ್ತಿಗೆ ನೋಂದಣಿಯಾದ ವಕೀಲರಿಗೆ ವಿಮಾ ಯೋಜನೆ ಜಾರಿಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದಿಂದ ಪ್ರಕ್ರಿಯೆ ಆರಂಭವಾಗಿದೆ.
ಕರ್ನಾಟಕ ರಾಜ್ಯ ವಕೀಲರ ಪರಿಷತ್ (KSBC) ನಲ್ಲಿ ನೋಂದಣಿಯಾದ ಎಲ್ಲ ವಯೋಮಾನದ ವಕೀಲರುಗಳಿಗೆ ವಿಮಾ ಸೌಲಭ್ಯ ಸಿಗಲಿದೆ.
ನವದೆಹಲಿಯಲ್ಲಿ ಅಲ್ಲಿನ ರಾಜ್ಯ ಸರ್ಕಾರ ಆ ರಾಜ್ಯದ ವಕೀಲರ ಪರಿಷತ್ತಿನ ಸದಸ್ಯರಿಗೆ ಜಾರಿ ಮಾಡಿದ ವಿಮಾ ಸೌಲಭ್ಯದ ಯೋಜನೆಯನ್ನು ಮಾದರಿಯಾಗಿ ಇಟ್ಟುಕೊಂಡು ಕರ್ನಾಟಕದಲ್ಲೂ ಈ ಯೋಜನೆಯನ್ನು ಜಾರಿಗೊಳಿಸುವ ಚಿಂತನೆ ಮಾಡಲಾಗಿದೆ.
ರಾಜ್ಯ ಕರ್ನಾಟಕ ಹೈಕೋರ್ಟ್ 3-3-2022ರಂದು ಪ್ರಕರಣವೊಂದರಲ್ಲಿ (W.P. No. 8622/2020) ನೀಡಿದ ಸೂಚನೆಯಂತೆ ಕಾನೂನು ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷರಿಗೆ ಈ ಬಗ್ಗೆ ಪತ್ರ ಬರೆದಿದ್ದಾರೆ
ವಕೀಲರ ವಿಮಾ ಯೋಜನೆಯನ್ನು ಜಾರಿ ಮಾಡುವ ಉದ್ದೇಶದಿಂದ ವಿವಿಧ ವಯೋವರ್ಗದ ಎಷ್ಟು ಮಂದಿ ಸದಸ್ಯರು ನೋಂದಣಿಯಾಗಿದ್ದಾರೆ ಎಂಬ ಮಾಹಿತಿ ಕೋರಿ ರಾಜ್ಯ ಸರಕಾರ ಕರ್ನಾಟಕ ರಾಜ್ಯ ವಕೀಲರ ಪರಿಷತ್‌ಗೆ ಪತ್ರ ಬರೆದಿದೆ.
2022 -23 ನೇ ಸಾಲಿನಲ್ಲಿ ಬಜೆಟ್ ಘೋಷಣೆಯಂತೆ ವಕೀಲರಿಗೆ ಆರೋಗ್ಯ ಸೌಲಭ್ಯ ಕಾರ್ಯಕ್ರಮ ರೂಪಿಸಲು ಅನುಕೂಲವಾಗುವಂತೆ ಮೂಲನಿಧಿ ಸ್ಥಾಪಿಸಲು ಕರ್ನಾಟಕ ರಾಜ್ಯ ಸರಕಾರ ನೆರವು ನೀಡಲಿದೆ.
ಯೋಜನೆಗೆ ಸಂಬಂಧಿಸಿದಂತೆ ನಿಗದಿಪಡಿಸಿದ ವಕೀಲರುಗಳ ಮಾಹಿತಿ ಅಗತ್ಯ ಇರುವುದರಿಂದ ವಿವಿಧ ವಯೋಮಾನದ ವಕೀಲರುಗಳ ಸಂಖ್ಯೆಯ ಮಾಹಿತಿ ನೀಡುವಂತೆ ಪತ್ರದಲ್ಲಿ ಕೋರಲಾಗಿದೆ.