Job in Karnataka High Court- ಕರ್ನಾಟಕ ಹೈಕೋರ್ಟ್‌ನಲ್ಲಿ ಉದ್ಯೋಗ: 44 ಸಾವಿರದಿಂದ 1.42 ಲಕ್ಷ ರೂ. ವೇತನ
ಕರ್ನಾಟಕ ಹೈಕೋರ್ಟ್‌ನಲ್ಲಿ ಉದ್ಯೋಗ: 44 ಸಾವಿರದಿಂದ 1.42 ಲಕ್ಷ ರೂ. ವೇತನ
ಹೈಕೋರ್ಟ್‌ನಲ್ಲಿ 54 ಸಹಾಯಕ ಕೋರ್ಟ್ ಕಾರ್ಯದರ್ಶಿ (ಅಸಿಸ್ಟೆಂಟ್ ಕೋರ್ಟ್ ಸೆಕ್ರೆಟರಿ)/ ಸ್ಟೆನೋಗ್ರಾಫರ್ ಹುದ್ದೆಗಳಿಗೆ ನೇರ ನೇಮಕಾತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಹೈಕೋರ್ಟ್ ಈ ಬಗ್ಗೆ ಅಧಿಸೂಚನೆ ಹೊರಡಿಸಿದ್ದು, ಅದರಂತೆ, ಅರ್ಹ ಅಭ್ಯರ್ಥಿಗಳು 2022 ಏಪ್ರಿಲ್ 7ರ ಒಳಗೆ ಅರ್ಜಿ ಸಲ್ಲಿಸಬಹುದು. ಈ ಅರ್ಜಿಗಳನ್ನು ಆನ್‌ಲೈನ್‌ನಲ್ಲಿ ಮಾತ್ರ ಸಲ್ಲಿಸಬಹುದಾಗಿದೆ.
ಅರ್ಹತೆ:
a) ಅಭ್ಯರ್ಥಿಗಳು SSLC ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಪಾಸ್ ಆಗಿರಬೇಕು. ಇಲ್ಲವೇ, ಡಿಪ್ಲೊಮಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಪದವಿ ಪಡೆದವರಿಗೆ ಆದ್ಯತೆ ನೀಡಲಾಗುವುದು.
b) ಇದರ ಜೊತೆಗೆ ಸೀನಿಯರ್ ಗ್ರೇಡ್ ಶಾರ್ಟ್ ಹ್ಯಾಂಡ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು.
c) KSEEB ನಡೆಸುವ ಸಿನಿಯರ್ ಗ್ರೇಡ್ ಇಂಗ್ಲಿಷ್ ಟೈಪ್ ರೈಟಿಂಗ್ ಪರೀಕ್ಷೆಯಲ್ಲಿ ಪಾಸ್ ಆಗಿರಬೇಕು.
d) ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
ವಯೋಮಿತಿ: ಅರ್ಜಿ ಸಲ್ಲಿಸುವ ದಿನಾಂಕಕ್ಕೆ 18 ವರ್ಷ ದಾಟಿರಬೇಕು ಹಾಗೂ 35 ವರ್ಷ ಮೀರಿರಬಾರದು. ನಿಯಮಾನುಸಾರ ಸಡಿಲಿಕೆ ಇದೆ.
ವೇತನ ಶ್ರೇಣಿ: ನೇಮಕಾತಿ ಪ್ರಕ್ರಿಯೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ 44,900/- ರೂಗಳಿಂದ 1,42,400/- ರೂ.ವರೆಗೆ ವೇತನ ಸಿಗಲಿದೆ.
ಸಾಮಾನ್ಯ ಮತ್ತು ಇತರೆ ಹಿಂದುಳಿದ ವರ್ಗಕ್ಕೆ ಸೇರಿದ ಅರ್ಹ ಅಭ್ಯರ್ಥಿಗಳು 500/- ರೂ ಶುಲ್ಕ ಹಾಗೂ ಎಸ್ಸಿ-ಎಸ್ಟಿ ಅಭ್ಯರ್ಥಿಗಳು 250 ರೂ ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 7/04/2022 (Only Through Online)
ಅಧಿಸೂಚನೆ ಓದಲು ಈ ಲಿಂಕ್ ಕ್ಲಿಕ್ ಮಾಡಿ
ಕರ್ನಾಟಕ ಹೈಕೋರ್ಟ್‌ನಲ್ಲಿ ಉದ್ಯೋಗ: 44 ಸಾವಿರದಿಂದ 1.42 ಲಕ್ಷ ರೂ. ವೇತನ
ಅರ್ಜಿ ಸಲ್ಲಿಸಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
ಕರ್ನಾಟಕ ಹೈಕೋರ್ಟ್‌ನಲ್ಲಿ ಉದ್ಯೋಗ: 44 ಸಾವಿರದಿಂದ 1.42 ಲಕ್ಷ ರೂ. ವೇತನ