-->
Karavali College - ನನ್ನ ಸಾವಿಗೆ ಕಾಲೇಜ್ ಕಾರಣ: ಕರಾವಳಿ ಕಾಲೇಜ್ ವಿರುದ್ಧ ಡೆತ್‌ ನೋಟ್ ಬರೆದಿಟ್ಟು ವಿದ್ಯಾರ್ಥಿ ಸಾವು!

Karavali College - ನನ್ನ ಸಾವಿಗೆ ಕಾಲೇಜ್ ಕಾರಣ: ಕರಾವಳಿ ಕಾಲೇಜ್ ವಿರುದ್ಧ ಡೆತ್‌ ನೋಟ್ ಬರೆದಿಟ್ಟು ವಿದ್ಯಾರ್ಥಿ ಸಾವು!

ನನ್ನ ಸಾವಿಗೆ ಕಾಲೇಜ್ ಕಾರಣ: ಕರಾವಳಿ ಕಾಲೇಜ್ ವಿರುದ್ಧ ಡೆತ್‌ ನೋಟ್ ಬರೆದಿಟ್ಟು ವಿದ್ಯಾರ್ಥಿ ಸಾವು!


".... ಕಾಲೇಜು ಸೂಕ್ತ ಶಿಕ್ಷಕ ವೃಂದ ಹೊಂದಿಲ್ಲ ಹಾಗೂ ಸರಿಯಾಗಿ ತರಗತಿಯನ್ನು ಮಾಡುತ್ತಿಲ್ಲ. ನಮ್ಮಿಂದ ಹಣ ಪಡೆದುಕೊಂಡು ಕಾಲೇಜು ನಮಗೆ ಮೋಸ ಮಾಡಿದೆ. ನನ್ನ ಸಾವಿಗೆ ಕಾಲೇಜ್ ಕಾರಣ..."




ಇದು ಮಂಗಳೂರಿನ ಪ್ರತಿಷ್ಠಿತ ಎಂದು ಹೇಳಿಕೊಳ್ಳುತ್ತಿರುವ ಕರಾವಳಿ ಕಾಲೇಜಿನ ವಿದ್ಯಾರ್ಥಿಯೊಬ್ಬನ ಡೆತ್‌ ನೋಟ್‌.


ಮೂಲತಃ ಬೆಂಗಳೂರು ನಗರದ ಕುಮಾರಸ್ವಾಮಿ ಬಡಾವಣೆ ನಿವಾಸಿ ಭರತ್(20) ಆತ್ಮಹತ್ಯೆ ಮಾಡಿಕೊಂಡಿರುವ ನತದೃಷ್ಟ ವಿದ್ಯಾರ್ಥಿ.


ಇವರು ಮಂಗಳೂರಿನ ಕರಾವಳಿ ಕಾಲೇಜಿನ ಹೊಟೇಲ್ ಮ್ಯಾನೇಜ್‌ಮೆಂಟ್‌ ಕಾಲೇಜು ವಿದ್ಯಾರ್ಥಿ.

ಆತ್ಮಹತ್ಯೆ ಮಾಡಿಕೊಂಡಿರುವ ಭರತ್ ತಾನು ವಾಸವಾಗಿದ್ದ ಪಿಜಿಯಲ್ಲಿಯೇ ಮಧ್ಯಾಹ್ನ ಹೊತ್ತಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಆತ್ಮಹತ್ಯೆ ಮಾಡಿಕೊಂಡಿರುವುದಕ್ಕಿಂತ ಮೊದಲು ತನ್ನ ತಾಯಿಗೆ ಕರೆ ಮಾಡಿದ್ದಾರೆ. ಆದರೆ ತಾಯಿಗೆ ಆ ಕ್ಷಣಕ್ಕೆ ಕರೆ ಸ್ವೀಕರಿಸಲು ಸಾಧ್ಯವಾಗಿರಲಿಲ್ಲ.‌ ಇದರಿಂದ ಭರತ್ ಅವರ ವಾಟ್ಸ್ಯಾಪ್ ನಂಬರ್ ಗೆ ಮೆಸೇಜ್ ಮಾಡಿದ್ದಾರೆ‌.


ದರಲ್ಲಿ ".... ಕಾಲೇಜು ಸೂಕ್ತ ಶಿಕ್ಷಕ ವೃಂದ ಹೊಂದಿಲ್ಲ ಹಾಗೂ ಸರಿಯಾಗಿ ತರಗತಿಯನ್ನು ಮಾಡುತ್ತಿಲ್ಲ. ನಮ್ಮಿಂದ ಹಣ ಪಡೆದುಕೊಂಡು ಕಾಲೇಜು ನಮಗೆ ಮೋಸ ಮಾಡಿದೆ. ನನ್ನ ಸಾವಿಗೆ ಕಾಲೇಜ್ ಕಾರಣ..." ಎಂದು ಬರೆದುಕೊಂಡಿದ್ದರು.



ಜೊತೆಗೆ ಕಾಲೇಜಿನ‌ ಪ್ರಾಧ್ಯಾಪಕರೊಬ್ಬರು ತಾನು ಮಾಡಿರುವ ಪ್ರಾಜೆಕ್ಟ್ ವರ್ಕ್ ಸರಿಯಿಲ್ಲವೆಂದು ಸಹಿ ಮಾಡದೆ ಕಿರಿ ಕಿರಿ ಮಾಡುತ್ತಿದ್ದಾರೆ. ಅಲ್ಲದೆ ಮನಸ್ಸಿಗೆ ತೀರಾ ನೋವಾಗುವಂತೆ ವರ್ತಿಸುತ್ತಿದ್ದಾರೆ‌. ಇದೀಗ ತನ್ನನ್ನು ಪರೀಕ್ಷೆಗೆ ಕುಳಿತುಕೊಳ್ಳಲು ಬಿಡುವುದಿಲ್ಲ ಎಂದು ಬೆದರಿಸುತ್ತಿದ್ದಾರೆ. ಆದ್ದರಿಂದ ತಾನು ಈ ಲೋಕವನ್ನು ತ್ಯಜಿಸುತ್ತಿದ್ದೇನೆ'' ಸಂದೇಶ ರವಾನಿಸಿದ್ದಾರೆ.



ಆ ಬಳಿಕ‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಂಜೆ ವೇಳೆಗೆ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ತಿಳಿದು ಬಂದಿದೆ.


ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸಿದ ಮೃತರ ಹೆತ್ತವರು ತಮ್ಮ ಸಾವಿಗೆ ಕಾರಣನಾದ ಪ್ರಾಧ್ಯಾಪಕ ಹಾಗೂ ಕಾಲೇಜು ಅಧ್ಯಕ್ಷರು ಸಹಿತ ಆಡಳಿತ ಮಂಡಳಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.


ಈ ಬಗ್ಗೆ ಸರಿಯಾಗಿ ತನಿಖೆ ನಡೆಸಿ ನ್ಯಾಯ ದೊರಕಿಸಿಕೊಡಬೇಕೆಂದು ಉರ್ವ ಪೊಲೀಸ್ ಠಾಣೆಯಲ್ಲಿ ನೀಡಿರುವ ದೂರಿನಲ್ಲಿ ಆಗ್ರಹಿಸಿದ್ದಾರೆ.


ಈ ಘಟನೆಯಿಂದ ವಿದ್ಯಾರ್ಥಿಗಳು ಆಕ್ರೋಶಿತಗೊಂಡಿದ್ದು, ಧನದಾಹಿ ಮ್ಯಾನೇಜ್‌ಮೆಂಟ್ ಹಾಗೂ ಶಿಕ್ಷಣ ಸಂಸ್ಥೆಗೆ ಹಿಡಿಶಾಪ ಹಾಕುತ್ತಿದ್ದಾರೆ.

Ads on article

Advertise in articles 1

advertising articles 2

Advertise under the article