-->
Medical Service Comes under Consumer Court- "ವೈದ್ಯಕೀಯ ನಿರ್ಲಕ್ಷ್ಯ, ಸೇವಾ ಕೊರತೆ ಗ್ರಾಹಕರ ನ್ಯಾಯಾಲಯದ ವ್ಯಾಪ್ತಿಗೆ ಬರುತ್ತದೆ"

Medical Service Comes under Consumer Court- "ವೈದ್ಯಕೀಯ ನಿರ್ಲಕ್ಷ್ಯ, ಸೇವಾ ಕೊರತೆ ಗ್ರಾಹಕರ ನ್ಯಾಯಾಲಯದ ವ್ಯಾಪ್ತಿಗೆ ಬರುತ್ತದೆ"

"ವೈದ್ಯಕೀಯ ನಿರ್ಲಕ್ಷ್ಯ, ಸೇವಾ ಕೊರತೆ ಗ್ರಾಹಕರ ನ್ಯಾಯಾಲಯದ ವ್ಯಾಪ್ತಿಗೆ ಬರುತ್ತದೆ"


ಕೇರಳ ಹೈಕೋರ್ಟ್ ಮಹತ್ವದ ತೀರ್ಪು





ಪ್ರಕರಣ: ಡಾ. ವಿಜಿಲ್ ಮತ್ತು ಇತರರು Vs ಅಂಬುಜಾಕ್ಷಿ ಮತ್ತು ಇನ್ನೊಬ್ಬರು (2022 LiveLaw (Ker) 107)

Title: Dr Vijil & Ors v. Ambujakshi T.P & Anr. Citation: 2022 LiveLaw (Ker) 107



ವೈದ್ಯಕೀಯ ಸೇವೆಗಳು ಗ್ರಾಹಕ ಸಂರಕ್ಷಣಾ ಕಾಯಿದೆ, 2019 ರ ಸೆಕ್ಷನ್ 2(42) ರ ಅಡಿಯಲ್ಲಿ ವ್ಯಾಖ್ಯಾನಿಸಲಾದ 'ಸೇವೆ' ಪದದ ವ್ಯಾಪ್ತಿಯೊಳಗೆ ಬರುತ್ತವೆ ಎಂದು ಕೇರಳ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.



ವೈದ್ಯಕೀಯ ನಿರ್ಲಕ್ಷ್ಯ (Medical Negligence) ಮತ್ತು ವೈದ್ಯಕೀಯ ಸೇವೆಯಲ್ಲಿನ ಕೊರತೆ(deficiency of service)ಗೆ ಸಂಬಂಧಿಸಿದಂತೆ ದೂರುಗಳನ್ನು ಸ್ವೀಕರಿಸಲು ಗ್ರಾಹಕ ರಕ್ಷಣಾ ಕಾಯಿದೆ, 2019 ರ ಅಡಿಯಲ್ಲಿ ಗ್ರಾಹಕರ ಆಯೋಗಗಳಿಗೆ ಅಧಿಕಾರ ವ್ಯಾಪ್ತಿ ಇಲ್ಲ ಎಂಬುದಾಗಿ ಘೋಷಿಸಲು ವೈದ್ಯರ ತಂಡ ಮನವಿ ಸಲ್ಲಿಸಿತ್ತು.



ಈ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎನ್.ನಾಗರೇಶ್ ನೇತೃತ್ವದ ನ್ಯಾಯಪೀಠ ಈ ಮನವಿಯನ್ನು ವಜಾಗೊಳಿಸಿದರು. ವೈದ್ಯಕೀಯ ವೃತ್ತಿ ಮತ್ತು ಅಭ್ಯಾಸವು ಗ್ರಾಹಕ ಸಂರಕ್ಷಣಾ ಕಾಯಿದೆ, 2019 ರ ಸೆಕ್ಷನ್ 2(42) ಅಡಿಯಲ್ಲಿ ವ್ಯಾಖ್ಯಾನಿಸಲಾದ 'ಸೇವೆ' ಪದದ ಪರಿಧಿಯೊಳಗೆ ಬರುವುದಿಲ್ಲ ಎಂದು ವೈದ್ಯರ ತಂಡ ವಾದಿಸಿತ್ತು.



ಸ್ವತಃ ವೈದ್ಯರೂ ಆಗಿರುವ ದೂರುದಾರರಿಗೆ ತಮ್ಮ ಎಡಗಣ್ಣಿನಲ್ಲಿ 'ಕಣ್ಣಿನ ಪೊರೆ' ಪತ್ತೆಯಾಯಿತು. ಆದಾಗ್ಯೂ, ಎದುರುದಾರ ವೈದ್ಯರು ಯಾವುದೇ ಪರಿಹಾರವನ್ನು ನೀಡಲಾಗಿಲ್ಲ. ಬದಲಾಗಿ ದೂರುದಾರರನ್ನು ಇತರ ವೈದ್ಯರಿಗೆ ಕಳುಹಿಸಲಾಗಿದೆ. ಚಿಕಿತ್ಸೆ ನೀಡಿದ ನಂತರ, ದೂರುದಾರರು ತಮ್ಮ ಎಡಗಣ್ಣಿನ ದೃಷ್ಟಿ ಕಳೆದುಕೊಂಡಿದ್ದಾರೆ ಎಂದು ಆರೋಪಿಸಿ ಅರ್ಜಿದಾರರು ವೈದ್ಯರೊಬ್ಬರ ವಿರುದ್ಧ ಕಣ್ಣೂರು ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರು ದಾಖಲಿಸಿದ್ದರು.



ವೈದ್ಯಕೀಯ ನಿರ್ಲಕ್ಷ್ಯದಿಂದ ತನ್ನ ದೃಷ್ಟಿ ಕಳೆದುಕೊಂಡಿದ್ದೇನೆ ಎಂದು ಆರೋಪಿಸಿ ಅರ್ಜಿದಾರರು ₹ 32,52,000/- ಮೊತ್ತದ ಪರಿಹಾರ ನೀಡುವಂತೆ ಜಿಲ್ಲಾ ಗ್ರಾಹಕರ ಆಯೋಗಕ್ಕೆ ಮನವಿ ಮಾಡಿದರು. 2019ರ ಹೊಸ ಗ್ರಾಹಕ ಸಂರಕ್ಷಣಾ ಕಾಯ್ದೆಯ ಕರಡು ಮಸೂದೆಯು ಹೊಸ ಕಾಯ್ದೆಯ ಸೆಕ್ಷನ್ 2 (42)ರಲ್ಲಿ 'ಸೇವೆ' (Service) ಎಂದು ಪರಿಗಣಿಸಲಾದ ಸೌಲಭ್ಯಗಳlಲ್ಲಿ ಆರೋಗ್ಯ ಕ್ಷೇತ್ರವನ್ನು ಸೇರಿಸಿದೆ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದರು.



ಆದರೂ, ಸೆಕ್ಷನ್ 2 (42) ರ ಅಡಿಯಲ್ಲಿ ಆರೋಗ್ಯ ಕ್ಷೇತ್ರವನ್ನು ಕಾಯ್ದೆಯ ಅರ್ಥ ವಿವರಣೆಯಿಂದ ತೆಗೆದುಹಾಕಲಾಗಿದೆ. ಹೊಸ ಕಾಯಿದೆಯ ವ್ಯಾಪ್ತಿಯಿಂದ ವೈದ್ಯಕೀಯ ಸೇವೆ/ವೃತ್ತಿಯನ್ನು ಹೊರಗಿಡಲು ಜನಪ್ರತಿನಿಧಿಗಳು ಉದ್ದೇಶಿಸಿರುವುದು ಇದಕ್ಕೆ ಕಾರಣ ಎಂದು ಅವರು ವಾದಿಸಿದರು.



Indian Medical Association Vs V.P. Shantha & Ors. --(1995) 6 SCC 651]-- ಪ್ರಕರಣದಲ್ಲಿ ವೈದ್ಯರು ಸಮಾಲೋಚನೆ, ತಪಾಸಣೆ ಮತ್ತು ಚಿಕಿತ್ಸೆಯ ಮೂಲಕ ವೈದ್ಯವೃತ್ತಿ ಮತ್ತು ಶಸ್ತ್ರಚಿಕಿತ್ಸೆ ಮೂಲಕ ವೈದ್ಯರು ವೈದ್ಯಕೀಯ ವೃತ್ತಿಯ ನೆಲೆಯಲ್ಲಿ ರೋಗಿಗೆ ಸಲ್ಲಿಸಿದ ಸೇವೆಗಳು ಆಗಿರುತ್ತದೆ. ಮತ್ತು ಇದು ಸೆಕ್ಷನ್ 2(1)(o) ಅಡಿಯಲ್ಲಿ ವ್ಯಾಖ್ಯಾನಿಸಲಾದ 'ಸೇವೆ' ವ್ಯಾಪ್ತಿಯೊಳಗೆ ಬರುತ್ತವೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.






ಹಾಗೆಯೇ, 1986ರ ಕಾಯಿದೆಯನ್ನು ಗ್ರಾಹಕ ಸಂರಕ್ಷಣಾ ಕಾಯಿದೆ-2019 ರ ಮೂಲಕ ಬದಲಾದರೂ, 2019 ರ ಕಾಯಿದೆಯ ಸೆಕ್ಷನ್ 2(42) ಮತ್ತು 1986 ರ ಸೆಕ್ಷನ್ 2(1)(o) ಎರಡೂ ಬಹುತೇಕ ಒಂದೇ ಅರ್ಥ ಮತ್ತು ಪರಿಣಾಮಗಳನ್ನು ಹೊಂದಿವೆ ಎಂದು ನ್ಯಾಯಪೀಠ ತೀರ್ಪಿನಲ್ಲಿ ಹೇಳಿದೆ.



2019 ರ ಕಾಯಿದೆಯ ಸೆಕ್ಷನ್ 2(42) ಹೆಚ್ಚು ವಿವರಣಾತ್ಮಕವಾಗಿದೆ ಮತ್ತು ನಿರ್ದಿಷ್ಟವಾಗಿ ಬ್ಯಾಂಕಿಂಗ್, ಹಣಕಾಸು, ವಿಮೆ, ಸಾರಿಗೆ, ಸಂಸ್ಕರಣೆ, ವಿದ್ಯುತ್ ಅಥವಾ ಇತರ ಶಕ್ತಿಯ ಪೂರೈಕೆ, ಟೆಲಿಕಾಂ, ಬೋರ್ಡಿಂಗ್ ಅಥವಾ ಲಾಡ್ಜಿಂಗ್ ಅಥವಾ ಎರಡನ್ನೂ ತೆಗೆದುಕೊಳ್ಳುತ್ತದೆ ಎಂಬುದು ವ್ಯಾಖ್ಯಾನದ ಷರತ್ತುಗಳಲ್ಲಿನ ಏಕೈಕ ವ್ಯತ್ಯಾಸವಾಗಿದೆ.



ಶಾಸನದ ಸ್ಪಷ್ಟ ಅಭಿವ್ಯಕ್ತಿಯ ಕೊರತೆ ಮತ್ತು ನಿಬಂಧನೆಗಳಲ್ಲಿ ಅಸ್ಪಷ್ಟತೆ ಇದ್ದಾಗ ಮಾತ್ರ ಶಾಸನಬದ್ಧ ನಿಬಂಧನೆಯನ್ನು ವ್ಯಾಖ್ಯಾನಿಸಲು ಕರಡು ಮಸೂದೆಗಳಂತಹ ಬಾಹ್ಯ ಸಹಾಯಗಳನ್ನು ತೆಗೆದುಕೊಳ್ಳಬಹುದು ಎಂದು ಹೇಳಿ ಅರ್ಜಿದಾರರ ಮನವಿಯನ್ನು ತಿರಸ್ಕರಿಸಿದೆ. ವಸತಿ ನಿರ್ಮಾಣ, ಮನರಂಜನೆ, ಮನೋರಂಜನೆ ಅಥವಾ ಸುದ್ದಿ ಅಥವಾ ಇತರ ಮಾಹಿತಿಯ ಪ್ರಸಾರ ಮೊದಲಾದ ಕ್ಷೇತ್ರಗಳಲ್ಲಿ ವಿಶಾಲಾರ್ಥದ ವಿವರಣೆ ತೆಗೆದುಕೊಳ್ಳಬೇಕಾಗುತ್ತದೆ ಎಂದು ಹೇಳಿದೆ.



ಇದಲ್ಲದೆ, ಗ್ರಾಹಕ ಸಂರಕ್ಷಣಾ ಕಾಯಿದೆ, 2019 ರ ಸೆಕ್ಷನ್ 2(42) ರ ಶಾಸಕಾಂಗ ಉದ್ದೇಶವು 'ಸೇವೆಗಳನ್ನು' ಸಾಧ್ಯವಾದಷ್ಟು ಒಳಗೊಳ್ಳುವಂತೆ (Inclusive) ಮಾಡುವುದು. ಆದರೆ, ವೈದ್ಯಕೀಯ ಸೇವೆಯು ಉಚಿತವಾಗಿ ಅಥವಾ ವೈಯಕ್ತಿಕ ಸೇವೆಯ ಒಪ್ಪಂದದ ಅಡಿಯಲ್ಲಿ ನೀಡಲಾಗಿದ್ದರೆ, ಅಂತಹ ವೈದ್ಯಕೀಯ ಸೇವೆಗಳು ಸೆಕ್ಷನ್ 2 (42) ರ ವ್ಯಾಪ್ತಿಯೊಳಗೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿತು. 

Ads on article

Advertise in articles 1

advertising articles 2

Advertise under the article