-->
Passport new NOC guideline for Govt employees- ಸರ್ಕಾರಿ ನೌಕರರಿಗೆ ಪಾಸ್‌ಪೋರ್ಟ್: ಸುತ್ತೋಲೆ ಜಾರಿ (2-03-2022)

Passport new NOC guideline for Govt employees- ಸರ್ಕಾರಿ ನೌಕರರಿಗೆ ಪಾಸ್‌ಪೋರ್ಟ್: ಸುತ್ತೋಲೆ ಜಾರಿ (2-03-2022)

ಸರ್ಕಾರಿ ನೌಕರರಿಗೆ ಪಾಸ್‌ಪೋರ್ಟ್: ಸುತ್ತೋಲೆ ಜಾರಿ (2-03-2022)







ಕರ್ನಾಟಕದಲ್ಲಿ ಸರಕಾರಿ ನೌಕರರಿಗೆ ಪಾಸ್‌ಪೋರ್ಟ್ ನಿರಪೇಕ್ಷಣ ಪತ್ರ ನೀಡುವ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಅಧಿಕಾರ ನೀಡುವ ಬಗ್ಗೆ ರಾಜ್ಯ ಸರ್ಕಾರ ಹೊಸ ಸುತ್ತೋಲೆಯನ್ನು ಜಾರಿಮಾಡಿದೆ.



ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಉಪ ಕಾರ್ಯದರ್ಶಿ ಜ್ಯೋತಿ ಜೆ.ಆರ್. ಅವರು 2-3-2022 ರಂದು ಈ ಸುತ್ತೋಲೆಯನ್ನು ಹೊರಡಿಸಿದ್ದು, ತಕ್ಷಣದಿಂದಲೇ ಆದೇಶವನ್ನು ಜಾರಿಗೊಳಿಸುವಂತೆ ಇಲಾಖಾ ಮುಖ್ಯಸ್ಥರಿಗೆ ತಿಳಿಸಿದ್ದಾರೆ.



ಸರಕಾರದ B, C ಮತ್ತು D ವೃಂದದ ಅಧಿಕಾರಿ ವ ನೌಕರರು ಪಾಸ್‌ಪೋರ್ಟ್ ಪಡೆಯಲು ಅಗತ್ಯವಿರುವ ನಿರಪೇಕ್ಷಣಾ ಪತ್ರವನ್ನು ನೀಡಲು ನೀಡುವ ಸಂಬಂಧಿಸಿ ಸುತ್ತೋಲೆ ನಿಯಮಗಳು ಅನ್ವಯವಾಗಲಿದೆ.



ಆಯಾ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಅಧಿಕಾರವನ್ನು ಪ್ರತ್ಯಾಯೋಜಿಸಲಾಗಿದ್ದು ಅರ್ಜಿದಾರರಿಗೆ ನಿರಪೇಕ್ಷಣಾ ಪತ್ರ ನೀಡುವ ಮುನ್ನ ಕೆಲವೊಂದು ಅಂಶವನ್ನು ಪರಿಗಣಿಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ


ಸುತ್ತೋಲೆಯಲ್ಲಿ ತಿಳಿಸಿರುವ ಅಂಶಗಳು ಹೀಗಿವೆ


1 ಅರ್ಜಿದಾರ ನೌಕರ / ಅಧಿಕಾರಿಯ ವಿರುದ್ಧ ಕಠಿಣ ದಂಡನೆ ವಿಧಿಸಬಹುದಾದ ಶಿಸ್ತಿನ ಪ್ರಕರಣಗಳು ಬಾಕಿ ಇದ್ದಲ್ಲಿ ಅಥವಾ ಪ್ರಕರಣಗಳು ಹೂಡಲು ಉದ್ದೇಶಿಸಿದ್ದಲ್ಲಿ...


2 ಲೋಕಾಯುಕ್ತ ಪ್ರಕರಣ / ಎಸಿಬಿ ಪ್ರಕರಣ / ವಿಜಿಲೆನ್ಸ್ ಪ್ರಕರಣಗಳು ಬಾಕಿ ಇದ್ದಲ್ಲಿ ಅಥವಾ ಹೂಡಲು ಉದ್ದೇಶಿಸಿದ್ದಲ್ಲಿ...


3 ಗುರುತರ ಕ್ರಿಮಿನಲ್ (Cognizable Offense) / ನ್ಯಾಯಾಂಗ ವಿಚಾರಣೆ ಬಾಕಿ ಇದ್ದಲ್ಲಿ ಅಥವಾ ಹೂಡಲು ಉದ್ದೇಶಿಸಿದ್ದಲ್ಲಿ...


ಭಾರತದ ಸಾರ್ವಭೌಮತ್ವ, ಭದ್ರತೆಗೆ ಧಕ್ಕೆ ತರುವಂತಹ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪಗಳು ಸಂಬಂಧಿಸಿದ ಸಂಸ್ಥೆಯ ಏಜೆನ್ಸಿಗಳಲ್ಲಿ ದಾಖಲಾಗಿದ್ದ ವಿಚಾರಣೆ ಪ್ರಗತಿ ಇದ್ದಲ್ಲಿ ನಿರಪೇಕ್ಷಣಾ ಪತ್ರವನ್ನು ನೀಡುವಂತಿಲ್ಲ



ಉಳಿದಂತೆ, ಇತರ ಗ್ರೂಪಿಗೆ ಎ ವೃಂದದ ಅಧಿಕಾರಿಗಳು ಪಾಸ್‌ಪೋರ್ಟ್ ಪಡೆಯಲು ಅಗತ್ಯವಿರುವ ನಿರಪೇಕ್ಷಣಾ ಪತ್ರವನ್ನು ಸರಕಾರದ ಹಂತದಲ್ಲಿ ಪಡೆಯುವ ಸೂಚನೆ ನೀಡಿದೆ.

ಸುತ್ತೋಲೆ ವಿವರ:

ಸಂಖ್ಯೆ: ಸಿಆಸುಇ(ಆಸು) 2 ಇವಿತ 2021 dated 2-03-2022


Ads on article

Advertise in articles 1

advertising articles 2

Advertise under the article