-->
NI Act Sec 138- ಪ್ರತ್ಯುತ್ತರ ನೋಟೀಸ್‌ನಲ್ಲಿ ಹಣಕಾಸು ಸಾಮರ್ಥ್ಯ ಪ್ರಶ್ನಿಸಿದರೆ ಮಾತ್ರ ದೂರುದಾರ ಪುರಾವೆ ನೀಡಬೇಕು: ಸುಪ್ರೀಂ ಕೋರ್ಟ್

NI Act Sec 138- ಪ್ರತ್ಯುತ್ತರ ನೋಟೀಸ್‌ನಲ್ಲಿ ಹಣಕಾಸು ಸಾಮರ್ಥ್ಯ ಪ್ರಶ್ನಿಸಿದರೆ ಮಾತ್ರ ದೂರುದಾರ ಪುರಾವೆ ನೀಡಬೇಕು: ಸುಪ್ರೀಂ ಕೋರ್ಟ್

NI Act Sec 138- ಪ್ರತ್ಯುತ್ತರ ನೋಟೀಸ್‌ನಲ್ಲಿ ಹಣಕಾಸು ಸಾಮರ್ಥ್ಯ ಪ್ರಶ್ನಿಸಿದರೆ ಮಾತ್ರ ದೂರುದಾರ ಪುರಾವೆ ನೀಡಬೇಕು: ಸುಪ್ರೀಂ ಕೋರ್ಟ್







ಸೆಕ್ಷನ್ 138 ಎನ್ಐ ಆಕ್ಟ್ - ಚೆಕ್ ಅಮಾನ್ಯ ಪ್ರಕರಣದಲ್ಲಿ ದೂರುದಾರರು ಪ್ರಕರಣದ ವಿಚಾರಣೆಯ ಆರಂಭದಲ್ಲೇ ಹಣಕಾಸಿನ ಸಾಮರ್ಥ್ಯದ ಪುರಾವೆಗಳನ್ನು ನೀಡಬೇಕು ಎಂದು ನ್ಯಾಯಪೀಠ ನಿರೀಕ್ಷಿಸುವುದಿಲ್ಲ. ಆದರೆ, ಆರೋಪಿ ಈ ಬಗ್ಗೆ ತನ್ನ ಪ್ರತ್ಯುತ್ತರ ನೋಟೀಸ್‌ನಲ್ಲಿ ತಗಾದೆ ತೆಗೆದಿದ್ದರೆ ಅದಕ್ಕೆ ಸಂಬಂಧಿಸಿದಂತೆ ಪುರಾವೆ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.



ಪ್ರಕರಣ: ತೇಧಿ ಸಿಂಗ್ Vs ನಾರಾಯಣ ದಾಸ್ ಮಹಾಂತ (ಸುಪ್ರೀಂ ಕೋರ್ಟ್ 07-03-2022)

Tedhi Singh vs Narayan Dass Mahant (2022 LiveLaw (SC) 275)



ದೂರುದಾರರು ತಾನು ಹಣಕಾಸಿನ ಸಾಮರ್ಥ್ಯ ಹೊಂದಿದ್ದೇನೆ ಎಂದು ತೋರಿಸಲು ಆರಂಭದಲ್ಲೇ ಸಾಕ್ಷ್ಯ ನೀಡುವ ಅಗತ್ಯ ಇರುವುದಿಲ್ಲ. ಆದರೆ, ಆರೋಪಿಯ ಉತ್ತರ ನೋಟಿಸ್‌ನಲ್ಲಿ ಈ ಬಗ್ಗೆ ತಗಾದೆ ತೆಗೆದಿದ್ದರೆ ಮಾತ್ರ ಅದರ ರುಜುವಿನ ಅಗತ್ಯವಿರುತ್ತದೆ ಎಂದು ಸುಪ್ರೀಂ ಕೋರ್ಟ್ ಅಬಿಪ್ರಾಯಪಟ್ಟಿದೆ.



ಇದೇ ವೇಳೆ, ದೂರುದಾರನು ಪ್ರಕರಣಕ್ಕೆ ಸಂಬಂಧಿಸಿದಷ್ಟು ಹಣಕಾಸಿನ ಸಾಮರ್ಥ್ಯವನ್ನು ಹೊಂದಿಲ್ಲ ಎಂದು ಸಾಬೀತುಪಡಿಸುವ ಸ್ವತಂತ್ರ ದಾಖಲೆಗಳನ್ನು ನ್ಯಾಯಪೀಠಕ್ಕೆ ಒದಗಿಸಲು ಹಕ್ಕು ಹೊಂದಿರುತ್ತಾರೆ.



ಇದನ್ನು ಸಾಬೀತುಪಡಿಸಲು ಆರೋಪಿಯು ತನ್ನನ್ನು ಸ್ವತಃ ಸಾಕ್ಷ್ಯಕ್ಕೊಳಪಡಿಸಬಹುದು ಅಥವಾ ದೂರುದಾರರನ್ನು ಮತ್ತು ಅವರ ಪರ ಸಾಕ್ಷಿದಾರರನ್ನು ಅಡ್ಡ ವಿಚಾರಣೆ ನಡೆಸಬಹುದು. ದೂರುದಾರರು ಸಲ್ಲಿಸಿದ ದಾಖಲೆಗಳಲ್ಲಿ ತನ್ನ ವಾದವನ್ನು ರುಜುಮಾಡಬಹುದು, ಇಲ್ಲವೇ ಸೂಕ್ತ ದಾಖಲೆಯನ್ನು ನ್ಯಾಯಪೀಠಕ್ಕೆ ಒದಗಿಸುವ ಮೂಲಕ ದೂರುದಾರರಿಗೆ ಹಣಕಾಸು ಸಾಮರ್ಥ್ಯ ಇಲ್ಲ ಎಂಬುದನ್ನು ನ್ಯಾಯಪೀಠಕ್ಕೆ ಮನವರಿಕೆ ಮಾಡಬಹುದು ಎಂದು ನ್ಯಾ. ಕೆಎಂ ಜೋಸೆಫ್ ಮತ್ತು ನ್ಯಾ. ಹೃಷಿಕೇಶ್ ರಾಯ್ ಅವರನ್ನೊಳಗೊಂಡ ನ್ಯಾಯಪೀಠ ತೀರ್ಪಿನಲ್ಲಿ ಹೇಳಿದೆ.



ದೂರುದಾರರಿಗೆ ಕೈ ಸಾಲ ನೀಡಲು ಆರ್ಥಿಕ ಸಾಮರ್ಥ್ಯವಿಲ್ಲ ಎಂಬುದಾಗಿ ಆರೋಪಿ/ಮೇಲ್ಮನವಿದಾರರು ವಾದಿಸಿದ್ದರು. ಆದರೆ, NI Act ಸೆಕ್ಷನ್ 138ರ ಅಡಿ, ದೂರುದಾರನು ತನಗೆ ಹಣಕಾಸು ಸಾಮರ್ಥ್ಯವಿದೆ ಎಂದು ಮೊದಲ ನಿದರ್ಶನದಲ್ಲಿ ತೋರಿಸಬೇಕಾಗಿಲ್ಲ ಎಂದು ವಿಚಾರಣಾ ನ್ಯಾಯಾಲಯ ಮತ್ತು ಮೊದಲ ಮೇಲ್ಮನವಿ ನ್ಯಾಯಾಲಯವು ಗಮನಿಸಿತ್ತು ಎಂದು ಸುಪ್ರೀಂ ಕೋರ್ಟ್ ಪೀಠವು ತನ್ನ ತೀರ್ಪಿನಲ್ಲಿ ಉಲ್ಲೇಖಿಸಿತು.



ಆರೋಪಿಯ ಪ್ರತಿವಾದ ಮತ್ತು ಸಾಕ್ಷ್ಯಾಧಾರಗಳ ನೆರವು ಮತ್ತು ವಿಚಾರಣೆಗಳನ್ನು ವಿಚಾರಣಾ ನ್ಯಾಯಾಲಯವು ಸೂಕ್ಷ್ಮವಾಗಿ ಅವಲೋಕಿಸಬೇಕಾಗುತ್ತದೆ. ಸಾಕ್ಷ್ಯಾಧಾರಗಳನ್ನು ಒಟ್ಟಾಗಿ ಗಮನಿಸಿ ವಿಚಾರಣಾ ನ್ಯಾಯಾಲಯವು ಸೂಕ್ತ ನಿರ್ಧಾರಕ್ಕೆ ಬರಬಹುದಾಗಿದೆ ಎಂದು ತೀರ್ಪಿನಲ್ಲಿ ಹೇಳಲಾಗಿದೆ.


Referred Case

Basalingapa Vs. Mudibasappa (2019) 5 SCC 418] (Para 7, 9)


Ads on article

Advertise in articles 1

advertising articles 2

Advertise under the article