PF ಬಡ್ಡಿ ದರ ಇಳಿಕೆ- ಕಾರ್ಮಿಕರಿಗೆ ಶಾಕ್ ನೀಡಿದ ಕೇಂದ್ರ ಕಾರ್ಮಿಕ ಸಚಿವಾಲಯ!
PF ಬಡ್ಡಿ ದರ ಇಳಿಕೆ- ಕಾರ್ಮಿಕರಿಗೆ ಶಾಕ್ ನೀಡಿದ ಕೇಂದ್ರ ಕಾರ್ಮಿಕ ಸಚಿವಾಲಯ!
ಕೇಂದ್ರ ಕಾರ್ಮಿಕ ಸಚಿವಾಲಯ ಮತ್ತು ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆಯು ಸುಮಾರು 6 ಕೋಟಿ ಚಂದಾದಾರರಿಗೆ ಕಹಿ ಸುದ್ದಿಯನ್ನು ನೀಡಿದೆ.
ಕಾರ್ಮಿಕರ ಭವಿಷ್ಯ ನಿಧಿ (ಇಪಿಎಫ್) ಮೇಲಿನ ಬಡ್ಡಿದರ ಶೇಕಡಾ 8.1 ಇಳಿಕೆಯಾಗಿದ್ದು, ಇದು ಕಾರ್ಮಿಕರು ಕಷ್ಟಪಟ್ಟು ಕೂಡಿಟ್ಟ ಭದ್ರತಾ ನಿಧಿ ಎಂಬ ಉಳಿತಾಯಕ್ಕೆ ಇದರಿಂದ ಭಾರಿ ಹೊಡೆತ ಬೀಳಲಿದೆ.
2021 22 ನೇ ಹಣಕಾಸು ವರ್ಷದ ಬಡ್ಡಿದರವನ್ನು ಈಗಿರುವ ಶೇಕಡಾ 8.5 ರಿಂದ 8.1ಕ್ಕೆ ಇಳಿಸಲು EPFO ಶಿಫಾರಸು ಮಾಡಿದೆ. ಇದು ಕಳೆದ 43 ವರ್ಷಗಳಲ್ಲಿ ಅತ್ಯಂತ ಕನಿಷ್ಠ ಬಡ್ಡಿದರವಾಗಿದೆ ಎಂದು ಹೇಳಲಾಗಿದೆ.
ಈ EPFO ವಿಶ್ವಸ್ಥ ಮಂಡಳಿಯು ಮುಂದಿನ ವಿತ್ತೀಯ ವರ್ಷದಲ್ಲಿ ಭವಿಷ್ಯ ನಿಧಿಯ ಮೇಲೆ ನೀಡಲಾಗುವ ಬಡ್ಡಿದರವನ್ನು ಇಳಿಸಲು ನಿರ್ಧರಿಸಿದ್ದು, ಅನಿವಾರ್ಯವಾಗಿ ಈ ಕಠಿಣ ಪರಿಸ್ಥಿತಿಯಲ್ಲಿ ನಿರ್ಧಾರ ಕೈಗೊಂಡಿರುವುದಾಗಿ ಚಂದಾದಾರರಿಗೆ ತಿಳಿಸಿದೆ.
ಸದ್ಯದ ಆದಾಯ ಮತ್ತು ಠೇವಣಿಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರಕ್ಕೆ ಬಂದಿದೆ . ಈ ನಿರ್ಧಾರದಿಂದಾಗಿ ಸಂಸ್ಥೆಗೆ 450 ಕೋಟಿ ರೂಪಾಯಿಗಳಷ್ಟು ಮೊತ್ತದ ಹೊರೆ ಕಡಿಮೆಯಾಗಲಿದೆ.
ಪ್ರಸ್ತುತ ಅಂತರಾಷ್ಟ್ರೀಯ ಸನ್ನಿವೇಶ ಮತ್ತು ಮಾರುಕಟ್ಟೆಯ ಸ್ಥಿತಿಗತಿಯನ್ನು ಗಮನಿಸಿ ಇಪಿಎಫ್ ಬಡ್ಡಿದರವನ್ನು ಇಳಿಸಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಕಾರ್ಮಿಕ ಸಚಿವ ಭೂಪೇನ್ ಯಾದವ್ ತಿಳಿಸಿದ್ದಾರೆ
90ರ ದಶಕದಲ್ಲಿ ಇಪಿಎಫ್ ಬಡ್ಡಿದರ 9ರಿಂದ 10 ಶೇಕಡ ಮಧ್ಯೆ ಇತ್ತು. ಈಗ 2018 19 ರಲ್ಲಿ ಶೇಕಡಾ 8.65 ಇಳಿದಿತ್ತು. ಅತ್ಯಂತ ಕನಿಷ್ಠ ಎಂದರೆ ಮಾಡಿದ ಮೇಲೆ 1977-78 ರಲ್ಲಿ ಭವಿಷ್ಯ ನಿಧಿ ಬಡ್ಡಿದರ ಶೇಕಡಾ ಶೇಕಡ 8.10ಕ್ಕೆ ಇಳಿದಿತ್ತು.