-->
SC Judgement- RSS ವಿರೋಧಿ ಬರಹದ ವಿರುದ್ಧ ಅದರ ಸದಸ್ಯರು ಮಾನನಷ್ಟ ಮೊಕದ್ದಮೆ ಹೂಡಬಹುದು: ಸುಪ್ರೀಂ ಕೋರ್ಟ್‌

SC Judgement- RSS ವಿರೋಧಿ ಬರಹದ ವಿರುದ್ಧ ಅದರ ಸದಸ್ಯರು ಮಾನನಷ್ಟ ಮೊಕದ್ದಮೆ ಹೂಡಬಹುದು: ಸುಪ್ರೀಂ ಕೋರ್ಟ್‌

RSS ವಿರೋಧಿ ಬರಹದ ವಿರುದ್ಧ ಅದರ ಸದಸ್ಯರು ಮಾನನಷ್ಟ ಮೊಕದ್ದಮೆ ಹೂಡಬಹುದು: ಸುಪ್ರೀಂ ಕೋರ್ಟ್‌





ತಮ್ಮ ಸಂಘಟನೆ ವಿರುದ್ಧ ಅವಹೇಳನಕಾರಿ ವಿಚಾರ ಪ್ರಕಟಿಸಿದ ಸುದ್ದಿ ಸಂಸ್ಥೆ ವಿರುದ್ಧ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಸದಸ್ಯರು ನೀಡಿದ ದೂರನ್ನು IPC ಸೆಕ್ಷನ್‌ 499ರ ಅಡಿ ವಿಚಾರಣೆ ನಡೆಸಬಹುದು ಎಂದು ಕೇರಳ ಹೈಕೋರ್ಟ್‌ ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್‌ ಎತ್ತಿ ಹಿಡಿದಿದೆ.




ಪ್ರಕರಣ: ಮಾತೃಭೂಮಿ ಪ್ರಿಂಟಿಂಗ್ & ಪಬ್ಲಿಷಿಂಗ್ ಕಂ. ಲಿ. ಮತ್ತಿತರರು Vs ಪಿ ಗೋಪಾಲನ್ ಕುಟ್ಟಿ ಇನ್ನಿತರರು



ಕೇರಳ ಹೈಕೋರ್ಟ್‌ ತೀರ್ಪಿನಬಲ್ಲಿ ಸುಪ್ರೀಂ ಕೋರ್ಟ್‌ನ ಮಧ್ಯಪ್ರವೇ ಮಾಡುವ ಯಾವುದೇ ಪ್ರಶ್ನೆ ಇಲ್ಲ ಎಂದು ನ್ಯಾ. ದಿನೇಶ್ ಮಾಹೇಶ್ವರಿ ಮತ್ತು ಅನಿರುದ್ಧ ಬೋಸ್ ಅವರಿದ್ದ ಪೀಠ ಹೇಳಿದ್ದು, ಮಾತೃಭೂಮಿ ಪ್ರಿಂಟಿಂಗ್ ಮತ್ತು ಪಬ್ಲಿಷಿಂಗ್ ಕಂಪೆನಿಯ ಮನವಿಯನ್ನು ವಜಾಗೊಳಿಸಿದೆ.



RSS ಒಂದು ನಿರ್ದಿಷ್ಟ ಮತ್ತು ಗುರುತಿಸಲ್ಪಡುವ ಸಂಸ್ಥೆ. ಈ ಸಂಘಟನೆಯನ್ನು ದೂಷಿಸುವ ಲೇಖನಗಳ ವಿರುದ್ಧ ದೂರು ನೀಡಲು ಅದರ ಸದಸ್ಯರಿಗೆ ಕಾನೂನಾತ್ಮಕ ಅಧಿಕಾರ (Locus Standy) ಇದೆ ಎಂದು ಪ್ರಕರಣದ ಕುರಿತು ತೀರ್ಪು ನೀಡಿದ್ದ ಕೇರಳ ಹೈಕೋರ್ಟ್‌ ಹೇಳಿತ್ತು.



RSS ರಾಜ್ಯ ಕಾರ್ಯದರ್ಶಿ ಸಲ್ಲಿಸಿದ ಖಾಸಗಿ ದೂರಿನ ಮೇರೆಗೆ ಎರ್ನಾಕುಲಂನ ಆರ್ಥಿಕ ಅಪರಾಧಗಳ ವಿಚಾರಣೆ ನಡೆಸುವ ಹೆಚ್ಚುವರಿ ಮುಖ್ಯ ಜುಡಿಷಿಯಲ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ವಿಚಾರಣೆ ರದ್ದುಗೊಳಿಸುವಂತೆ ಮಾತೃಭೂಮಿ ಇಲ್ಲಸ್ಟ್ರೇಟೆಡ್ ವೀಕ್ಲಿ ಮತ್ತು ಅದರ ಕೆಲ ವರದಿಗಾರರು, ಸಂಪಾದಕರು ಮತ್ತು ಚಿತ್ರಕಲಾವಿದರು ಹೈಕೋರ್ಟ್‌ ಮೊರೆ ಹೋಗಿದ್ದರು.


ತೀರ್ಪು ತಮ್ಮ ವಿರುದ್ಧವಾಗಿ ಬಂದ ಬಳಿಕ ಅರ್ಜಿದಾರರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

Ads on article

Advertise in articles 1

advertising articles 2

Advertise under the article