Attack on Advocate in Udupi court premises- ಉಡುಪಿ ಕೋರ್ಟ್ ಆವರಣದಲ್ಲಿ ವಕೀಲರ ಮೇಲೆ ಹಲ್ಲೆ: ಅಲ್ಲಿ ನಿಜವಾಗಿ ನಡೆದದ್ದೇನು...?
ಉಡುಪಿ ಕೋರ್ಟ್ ಆವರಣದಲ್ಲಿ ವಕೀಲರ ಮೇಲೆ ಹಲ್ಲೆ: ಅಲ್ಲಿ ನಿಜವಾಗಿ ನಡೆದದ್ದೇನು...?
ಉಡುಪಿ ನ್ಯಾಯಾಲಯದ ಆವರಣದಲ್ಲೇ ವಕೀಲರ ಮೇಲೆ ಹಲ್ಲೆ ನಡೆದ ಘಟನೆ ಭಾರೀ ಸದ್ದು ಮಾಡಿದೆ. ಆದರೆ, ಈ ಘಟನೆ ರಾಜ್ಯದಲ್ಲೇ ಭಾರೀ ಸದ್ದು ಮಾಡಿದೆ. ಆದರೆ, ನಿಜವಾಗಿ ಈ ಘಟನೆ ನಡೆದದ್ದು ಹೇಗೆ.. ಮತ್ತು ಯಾಕೆ ಎಂಬ ವಿಸ್ತೃತ ವರದಿ ಇಲ್ಲಿದೆ.
ಶನಿವಾರದ ಅಪರಾಹ್ನದ ಕಲಾಪದಲ್ಲಿ ಅಪಘಾತ ಪ್ರಕರಣವೊಂದರ ಸಾಕ್ಷಿ ಹೇಳಲು ಬಂದ ಸಾಕ್ಷಿದಾರರು ಕೋರ್ಟ್ ಮುಂದೆ ತಮ್ಮ ಸಾಕ್ಷ್ಯ ದಾಖಲಿಸುವ ಕಾರಣಕ್ಕೆ ಇಡೀ ದಿನ ಕಾದವರು. ಆದರೆ, ಸಮಯ ಕಳೆದುಹೋದ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಪ್ರಕರಣ ವಿಚಾರಣೆಯನ್ನು ಮುಂದೂಡಿ ವಾಯಿದೆ ನೀಡಿದರು.
ತಮ್ಮ ಕೇಸ್ ವಾಯಿದೆಯಾದ ಹಿನ್ನೆಲೆಯಲ್ಲಿ ಆ ಪ್ರಕರಣದ ವಕೀಲರು ನ್ಯಾಯಾಲಯದಿಂದ ಹೊರಬಂದು ಆವರಣದೆಡೆಗೆ ಬಂದರು. ಸಾಕ್ಷ್ಯ ದಾಖಲಿಸಿಕೊಳ್ಳದ ಹಿನ್ನೆಲೆಯಲ್ಲಿ ಸಾಕ್ಷಿದಾರರಾಗಿ ಬಂದಿದ್ದ ಶಾಹಿದ್ ಕೊರಂಗ್ರಪಾಡಿ ಎಂಬವರು ಇಡೀ ದಿನ ಕಾದ ಬೇಸರದಲ್ಲಿ ವಕೀಲ ಗುರುಪ್ರಸಾದ್ ಅವರ ಕೆನ್ನೆಗೆ ಬಾರಿಸಿ ಹಲ್ಲೆ ನಡೆಸಿದರು.
Video
ಉಡುಪಿ ನ್ಯಾಯಾಲಯದಲ್ಲಿ ಅಪಘಾತ ಪ್ರಕರದ ಬಗ್ಗೆ ಸಾಕ್ಷಿಸಿ ಹೇಳಲು ಬಂದ ಆರೋಪಿ ಶಾಹಿದ್ ಕೊರಂಗ್ರಪಾಡಿ ಎಂಬಾತ ಇಂದು ಬೆಳಿಗ್ಗೆ ನ್ಯಾಯಾಲಯಕ್ಕೆ ಬಂದಿದ್ದು, ಸಂಜೆ ಸುಮಾರಿಗೆ ನ್ಯಾಯಾಧೀಶರು ಇಂದಿನ ಕಲಾಪ ಅವಧಿ ಮುಗಿದ ಕಾರಣ ಮುಂದಿನ ದಿನಾಂಕ ನೀಡಿರುವುದಕ್ಕೆ ಶಾಹಿದ್ ಕುಪಿತಗೊಂಡಿದ್ದ.
ಒಂದು ಬೆಳಿಗ್ಗೆ ಬಂದಿದ್ದೇನೆ.. ಇಡೀ ದಿನ ಸಾಕ್ಷಿ ನೀಡಲು ತಯಾರಾಗಿದ್ದು, ಕಾಯುತ್ತಿದ್ದೇನೆ. ಮತ್ತೆ ಯಾಕೆ ದಿನಾಂಕ ಮುಂದೂಡಿದಿರಿ ಎಂದು ವಕೀಲರನ್ನು ಪ್ರಶ್ನಿಸಿದ್ದಲ್ಲದೆ, ಕೋಪಗೊಂಡು ವಕೀಲರಾದ ಗುರುಪ್ರಸಾದ್ ಮೇಲೆ ಹಲ್ಲೆ ನಡೆಸಿದರು.
ನೆಲಕ್ಕೆ ಉರುಳಿದ ಗುರುಪ್ರಸಾದ್ ಅವರ ಕೆನ್ನೆಗೆ ಹಾಗೂ ಹೊಟ್ಟೆಗೆ ತುಳಿದಿದ್ದಾರೆ. ತೀವ್ರ ಹಲ್ಲೆಗೊಳಗಾದ ಗುರುಪ್ರಸಾದ್ ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ.
ಆರೋಪಿಯನ್ನು ತಕ್ಷಣ ಪೊಲೀಸರು ಬಂಧಿಸಿದ್ದು, ಕೋರ್ಟ್ ಕಟ್ಟಡದೊಳಗೆ ಕರೆದುಕೊಂಡು ಬಂದಿದ್ದಾರೆ. ಆ ಸಂದರ್ಭದಲ್ಲಿ ನ್ಯಾಯಾಧೀಶರು ನ್ಯಾಯಪೀಠದಿಂದ ಇಳಿದು ತಮ್ಮ ಕೊಠಡಿಗೆ ಹೋಗಿದ್ದರು.
ಆ ಸಂದರ್ಭದಲ್ಲಿ, ಹಲ್ಲೆಯ ಘಟನೆಯ ಹಿನ್ನೆಲೆಯಲ್ಲಿ ಕೋಪಗೊಂಡ ವಕೀಲರು ಸಾಕ್ಷಿದಾರರಾಗಿ ಬಂದು ಹಲ್ಲೆ ನಡೆಸಿದ ಆರೋಪಿ ಶಾಹೀದ್ ಮೇಲೆ ಮುಗಿಬಿದ್ದು, ಹಲ್ಲೆ ನಡೆಸಿದರು. ನ್ಯಾಯಾಲಯ ಆವರಣದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಯಿತು.
ಸಂಜೆ ನ್ಯಾಯಾಲಯದ ಆವರಣದಲ್ಲಿ ಯಕ್ಷಗಾನ ಪ್ರದರ್ಶನವಿದ್ದ ಕಾರಣ ಕೋರ್ಟ್ ಆವರಣದಲ್ಲಿ ಹಬ್ಬದ ವಾತಾವರಣವಿತ್ತು. ಆದರೆ, ಘಟನೆಯ ಬಳಿಕ ವಕೀಲ ಸಂಘದಿಂದ ಆಯೋಜಿಸಲಾಗಿದ್ದ ಯಕ್ಷಗಾನ ಪ್ರದರ್ಶನ ಸಾಂಗವಾಗಿ ನಡೆಯಿತು.