Summer Dress Code for Advocates- ವಕೀಲರ ಡ್ರೆಸ್ ಕೋಡ್: ಬೇಸಿಗೆಯಲ್ಲಿ ಕೋಟ್‌ಗೆ ವಿನಾಯಿತಿ- ವಕೀಲರ ಪರಿಷತ್ತು
ವಕೀಲರ ಡ್ರೆಸ್ ಕೋಡ್: ಬೇಸಿಗೆಯಲ್ಲಿ ಕೋಟ್‌ಗೆ ವಿನಾಯಿತಿ- ವಕೀಲರ ಪರಿಷತ್ತು
ರಾಜ್ಯದಲ್ಲಿ ವಿಚಾರಣಾ ನ್ಯಾಯಾಲಯಗಳಲ್ಲಿ ನ್ಯಾಯಪೀಠದ ಮುಂದೆ ಹಾಜರಾಗುವ ವಕೀಲರು ಕೋಟು ರಹಿತವಾಗಿ ಹಾಜರಾಗಬಹುದಾಗಿದೆ ಎಂದು ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ತನ್ನ ಸುತ್ತೋಲೆ/ನೋಟೀಸ್‌ನಲ್ಲಿ ತಿಳಿಸಿದೆ.
ಎಪ್ರಿಲ್ 13, 2022ರಂದು ವಿವಿಧ ವಕೀಲರ ಸಂಘದ ಅಧ್ಯಕ್ಷರನ್ನು ಉದ್ದೇಶಿಸಿ ಹೊರಡಿಸಿರುವ ಪತ್ರ ಸಂಖ್ಯೆ KSBC/732/2022ರಲ್ಲಿ ಈ ಬಗ್ಗೆ ಹೇಳಲಾಗಿದೆ.
ಬಾರ್ ಕೌನ್ಸಿಲ್ ಆಫ್ ಇಂಡಿಯಾ ರೂಲ್ಸ್ ಅಧ್ಯಾಯ 4ರ ನಿಯಮ 4ರ ಪ್ರಕಾರ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ಹೊರತುಪಡಿಸಿ ಬೇಸಿಗೆಯಲ್ಲಿ ಯಾವುದೇ ನ್ಯಾಯಾಲಯದಲ್ಲಿ ಕರಿಕೋಟು ಧರಿಸುವುದು ಕಡ್ಡಾಯವಲ್ಲ ಎಂದು ನೋಟೀಸ್‌ನಲ್ಲಿ ಹೇಳಲಾಗಿದೆ.
ಅದರಂತೆ, ಈಗ ಜಾರಿಯಲ್ಲಿ ಇರುವಂತೆ ಬಿಳಿ ಶರ್ಟ್, ಬಿಳಿ ಪ್ಯಾಂಟ್ ಅಥವಾ ಕಪ್ಪು ಪಟ್ಟಿ ಅಥವಾ ಬೂದು ಬಣ್ಣದ ಪ್ಯಾಂಟ್, ಜೊತೆಗೆ ಬಿಳಿ ಬಣ್ಣದ ಬ್ಯಾಂಡ್ ಧರಿಸತಕ್ಕದ್ದು.
ಮಹಿಳಾ ವಕೀಲರು ಸೀರೆ, ಉದ್ದನೆಯ ಲಂಗ/ದಾವಣಿ (ಬಿಳಿ ಮತ್ತು ಕಪ್ಪು ಅಥವಾ ಪ್ರಿಂಟ್ ಮತ್ತು ಡಿಸೈನ್ ಹೊಂದಿರುವ ಅನುಮೋದಿತ ಬಣ್ಣ) ಅಥವಾ ಪಂಜಾಬಿ ಡ್ರೆಸ್, ಚೂಡಿದಾರ್ ಕುರ್ತಾ ಅಥವಾ ಸಲ್ವಾರ್ ಕುರ್ತ (ಬಿಳಿ ಮತ್ತು ಕಪ್ಪು ಬಣ್ಣ) ಹಾಗೂ ಬಿಳಿ ಬಣ್ಣದ ಬ್ಯಾಂಡ್ ಧರಿಸಬಹುದು.