-->
Bank Fraud - ಇನ್ಸ್‌ಪೆಕ್ಟರ್‌ಗೆ ಟೊಪ್ಪಿ ಹಾಕಿದ ಹ್ಯಾಕರ್: ಪೊಲೀಸಪ್ಪನಿಗೆ ಲಕ್ಷಗಟ್ಟಲೆ ಪಂಗನಾಮ

Bank Fraud - ಇನ್ಸ್‌ಪೆಕ್ಟರ್‌ಗೆ ಟೊಪ್ಪಿ ಹಾಕಿದ ಹ್ಯಾಕರ್: ಪೊಲೀಸಪ್ಪನಿಗೆ ಲಕ್ಷಗಟ್ಟಲೆ ಪಂಗನಾಮ

ಇನ್ಸ್‌ಪೆಕ್ಟರ್‌ಗೆ ಟೊಪ್ಪಿ ಹಾಕಿದ ಹ್ಯಾಕರ್: ಪೊಲೀಸಪ್ಪನಿಗೆ ಲಕ್ಷಗಟ್ಟಲೆ ಪಂಗನಾಮ





ಹ್ಯಾಕರ್‌ಗಳ ತಂತ್ರಕ್ಕೆ ಇದೀಗ ವೈಟ್‌ಕಾಲರ್‌ಗಳೇ ಬಲಿಯಾಗುತ್ತಿದ್ದಾರೆ. ಹ್ಯಾಕರ್‌ಗಳ ಬಗ್ಗೆ ಎಚ್ಚರಿಕೆ ನೀಡುವ, ಜನರಿಗೆ ಬುದ್ದಿವಾದ ಹೇಳುವ ಮತ್ತು ಇಂತಹ ಅಪರಾಧಿಗಳನ್ನು ಮಟ್ಟಹಾಕುವ ಪೊಲೀಸ್ ಅಧಿಕಾರಿಗಳೇ ಇದೀಗ ಅವರ ತಂತ್ರಕ್ಕೆ ಪಂಗನಾಮ ಹಾಕಿಸಿಕೊಂಡು ಇಂಗು ತಿಂದ ಮಂಗನಂತಾಗಿದ್ದಾರೆ.


ಹೌದು, ಸೈಬರ್ ಕಳ್ಳರು ಬೆಂಗಳೂರು ಸಿಟಿ ಕ್ರೈಂ ರೆಕಾರ್ಡ್ ಬ್ಯೂರೋದಲ್ಲಿ ಇನ್ಸ್ ಪೆಕ್ಟರ್ ಆಗಿರುವ ನಾಗಭೂಷಣ್ ಖಾತೆಗೇ ಕನ್ನ ಹಾಕಿ ಹಣ ಎಗರಿಸಿದ್ದಾರೆ.


ನಾಗಭೂಷಣ್ ಅವರ ಬ್ಯಾಂಕ್ ಖಾತೆಯ ಕೆವೈಸಿ, ಪಾನ್ ಕಾರ್ಡ್ ಅಪ್ ಡೇಟ್ ಮಾಡುವ ನೆಪದಲ್ಲಿ ಈ ಕೃತ್ಯ ಎಸಗಲಾಗಿದೆ. ಬೆಂಗಳೂರು ಸಿಟಿ ಕ್ರೈಂ ರೆಕಾರ್ಡ್ ಬ್ಯುರೋ ಇನ್ಸ್ ಪೆಕ್ಟರ್ ಆಗಿರುವ ನಾಗಭೂಷಣ್ ಅವರಿಗೆ ಯಾವುದೇ ಸಂಶಯ ಬರದಂತೆ ಈ ಕೃತ್ಯ ಎಸಗಲಾಗಿದೆ.



SBIನ YoYo App ಮೂಲಕ ಮೆಸೇಜ್ ಕಳಿಸಿದ್ದ ಆರೋಪಿಗಳು, ಮೆಸೇಜ್ ಓಪನ್ ಮಾಡ್ತಿದ್ದಾಗೆ ಅಸಲಿ ಬ್ಯಾಂಕ್ ಸಿಬಂದಿ ರೀತಿಯಲ್ಲೇ ಮಾತನಾಡಿದ್ದಾರೆ.


SBI ಲೋಗೋ YoYo App ಸಿಂಬಲ್ ಎಲ್ಲವೂ ಅಸಲಿಯ ಹಾಗೇ ಇತ್ತು. ಅದರಿಂದ ಬ್ಯಾಂಕ್ ಕಡೆಯಿಂದಲೇ ಅಪ್ ಡೇಟ್ ಎಂದು ನಂಬಿದ ಇನ್ಸ್ ಪೆಕ್ಟರ್ ನಾಗಭೂಷಣ್ ತನ್ನ ಪಾನ್ ನಂಬರ್, ಆಧಾರ್, ಮೊಬೈಲ್ ಸಂಖ್ಯೆ ಎಲ್ಲವನ್ನೂ ಹಂಚಿಕೊಂಡರು. ದಾಖಲೆಗಳ ಮಾಹಿತಿ ಸಿಗುತ್ತಿದ್ದಂತೆ OTP ನಂಬರ್ ಬಂದಿದ್ದು ಅದನ್ನು ಪಡೆದು ಅಕೌಂಟಿನಲ್ಲಿದ್ದ 3 ಲಕ್ಷ 66 ಸಾವಿರ ರೂ.ವನ್ನು ಕ್ಷಣಾರ್ಧದಲ್ಲಿ ಎಗರಿಸಿದ್ದಾರೆ.


ಈ ಪ್ರಕರಣ ಸಂಬಂಧ ಸೈಬರ್ ಪೊಲೀಸ್ ಠಾಣೆಯಲ್ಲಿ ನಾಗಭೂಷಣ್ ಪ್ರಕರಣ ದಾಖಲಿಸಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

Ads on article

Advertise in articles 1

advertising articles 2

Advertise under the article