Child Custody- ಪತ್ನಿಗೆ ವಿವಾಹೇತರ ಸಂಬಂಧ: ಪತಿಗೆ ಮಕ್ಕಳ ಪಾಲನೆ ಹೊಣೆ ನೀಡಲು ನಿರಾಕರಿಸಿದ ಗುಜರಾತ್ ಹೈಕೋರ್ಟ್
Child Custody- ಪತ್ನಿಗೆ ವಿವಾಹೇತರ ಸಂಬಂಧ: ಪತಿಗೆ ಮಕ್ಕಳ ಪಾಲನೆ ಹೊಣೆ ನೀಡಲು ನಿರಾಕರಿಸಿದ ಗುಜರಾತ್ ಹೈಕೋರ್ಟ್
ಪತ್ನಿಗೆ ವಿವಾಹೇತರ ಸಂಬಂಧ ಇದ್ದರೂ ಮಕ್ಕಳ ಪಾಲನೆಯ ಹೊಣೆಯನ್ನು ಪತಿಗೆ ನೀಡಲಾಗದು ಎಂದು ಗುಜರಾತ್ ಹೈಕೋರ್ಟ್ ತೀರ್ಪು ನೀಡಿದೆ.
ಪ್ರಕರಣ: ಷೆಹಜಾದಾ ಹನೀಫ್‌ಭಾಯಿ ಪಟೇಲ್ Vs ಬಿಲ್ಕಿಸ್
Shehjada Hanifbhai Patel v Bilkis
17 ಮತ್ತು 12 ವರ್ಷ ವಯಸ್ಸಿನ ತನ್ನ ಮಕ್ಕಳ ಪಾಲನೆಯ ಜವಾಬ್ದಾರಿಯನ್ನು ತನಗೆ ನೀಡಬೇಕು ಎಂಬ ತಂದೆ ಸಲ್ಲಿಸಿದ ಅರ್ಜಿಯನ್ನು ಗುಜರಾತ್ ಹೈಕೋರ್ಟ್ ತಿರಸ್ಕರಿಸಿದೆ ಹಾಗೂ ಕುಟುಂಬ ನ್ಯಾಯಾಲಯದ ಆದೇಶದಲ್ಲಿ ಮಧ್ಯಪ್ರವೇಶಿಸಲು ಗುಜರಾತ್ ಇತ್ತೀಚೆಗೆ ನಿರಾಕರಿಸಿದೆ.
ತನ್ನ ಪತ್ನಿ ವಿವಾಹೇತರ ಸಂಬಂಧ ಹೊಂದಿದ್ದಾರೆ. ಆದರೂ ಮಕ್ಕಳಿಗೆ ಹೇಗೆ ಅಸುರಕ್ಷಿತ ಮತ್ತು ಅವರ ಜೀವನ ಹೇಗೆ ಅಪಾಯಕಾರಿ ಎಂಬುದನ್ನು ವಿವರಿಸಲು ಯಾವುದೇ ಆಧಾರಗಳಿಲ್ಲ ಎಂಬ ಕೌಟುಂಬಿಕ ನ್ಯಾಯಾಲಯದ ಅಭಿಪ್ರಾಯವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.
ಸದ್ರಿ ತೀರ್ಪು ನೀಡುವಲ್ಲಿ ಕೌಟುಂಬಿಕ ನ್ಯಾಯಾಲಯ ಯಾವುದೇ ತಪ್ಪು ಮಾಡಿಲ್ಲ ಎಂದ ಹೈಕೋರ್ಟ್ ಅರ್ಜಿಯನ್ನು ತಿರಸ್ಕರಿಸಿತು.