-->
KSBC resolution suspending Sadashiva Reddy?- ಭಾರತೀಯ ವಕೀಲರ ಪರಿಷತ್ ಸ್ಥಾನದಿಂದ ಸದಾಶಿವರೆಡ್ಡಿ ಉಚ್ಚಾಟನೆ: ರಾಜ್ಯ ವಕೀಲರ ಪರಿಷತ್ ನಿರ್ಣಯ?

KSBC resolution suspending Sadashiva Reddy?- ಭಾರತೀಯ ವಕೀಲರ ಪರಿಷತ್ ಸ್ಥಾನದಿಂದ ಸದಾಶಿವರೆಡ್ಡಿ ಉಚ್ಚಾಟನೆ: ರಾಜ್ಯ ವಕೀಲರ ಪರಿಷತ್ ನಿರ್ಣಯ?

ಭಾರತೀಯ ವಕೀಲರ ಪರಿಷತ್ ಸ್ಥಾನದಿಂದ ಸದಾಶಿವರೆಡ್ಡಿ ಉಚ್ಚಾಟನೆ: ರಾಜ್ಯ ವಕೀಲರ ಪರಿಷತ್ ನಿರ್ಣಯ?





ಕಳೆದ ಏಳು ವರ್ಷದಿಂದ ಭಾರತೀಯ ವಕೀಲರ ಪರಿಷತ್ ಉಪಾಧ್ಯಕ್ಷ ಸ್ಥಾನದಲ್ಲಿ ನೆಲೆಯೂರಿದ್ದ ಸದಾಶಿವ ರೆಡ್ಡಿ ಅವರನ್ನು ಉಚ್ಚಾಟಿಸಲಾಗಿದೆ.


ಬೆಂಗಳೂರಿನಲ್ಲಿ ನಡೆದ ಕರ್ನಾಟಕ ವಕೀಲರ ಪರಿಷತ್‌ನ ಸಭೆಯಲ್ಲಿ ಸತತ ಎರಡು ದಿನಗಳ ಚರ್ಚೆಯ ನಂತರ ಈ ಉಚ್ಚಾಟನೆ ಮಾಡಲಾಗಿದೆ.


ಸಭೆಯಲ್ಲಿ 16 ಸದಸ್ಯರು ನಿರ್ಣಯದ ಪರ ಸದಸ್ಯರು ಮತ ಚಲಾಯಿಸಿ ಆರು ಜನ ವಿರುದ್ದ ಮತ ಚಲಾಯಿಸಿದರು.


ಅಧಿಕಾರ ದುರುಪಯೋಗ, ದಬ್ಬಾಳಿಕೆ, ಹಾಗೂ ಅಧಿಕಾರ ವ್ಯಾಮೋಹ ಹಾಗೂ ಯಾರಿಗೂ ಅವಕಾಶ ಕೊಡದೆ ಎಲ್ಲ ಸದಸ್ಯರನ್ನು ಒಬ್ಬರ ಮೇಲೆ ಒಬ್ಬರನ್ನು ಎತ್ತಿ ಕಟ್ಟಿದ ಆರೋಪ ಅವರ ಮೇಲಿತ್ತು.


ಕಳೆದ ಏಳು ವರ್ಷಗಳಲ್ಲಿ ಯಾವ ಕೆಲಸವನ್ನು ಮಾಡದೆ ಕೇವಲ ಸ್ವಂತ ಕೆಲಸಕ್ಕೆ ಭಾರತೀಯ ವಕೀಲರ ಪರಿಷತ್ ಸ್ಥಾನವನ್ನು ಉಪಯೋಗಿಸಿಕೊಂಡಿದ್ದಾರೆ ಎಂಬ ಆರೋಪವೂ ಅವರ ಮೇಲಿತ್ತು ಎನ್ನಲಾಗಿದೆ.


ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ ಠರಾವು ಹೊರಡಿಸಿ ಸದಾಶಿವ ರೆಡ್ಡಿ ಅವರ ರಾಜೀನಾಮೆ ಕೋರಿತ್ತು. ಆದರೆ ಇದಕ್ಕೂ ಸೊಪ್ಪು ಹಾಕದೆ ತಮ್ಮ ಸ್ಥಾನದಲ್ಲಿ ಮುಂದುವರೆದ ಕಾರಣ, ಅವರನ್ನು ಭಾರತೀಯ ವಕೀಲರ ಪರಿಷತ್ ಸ್ಥಾನದಿಂದ ಉಚ್ಚಾಟನೆ ಮಾಡಲಾಯಿತು.


Ads on article

Advertise in articles 1

advertising articles 2

Advertise under the article