Notification on Registration of Marriage-ಗ್ರಾಮದಲ್ಲೇ ವಿವಾಹ ನೋಂದಣಿ: ಪಿಡಿಓಗೆ ಅಧಿಕಾರ- ಸರ್ಕಾರ ಅಧಿಸೂಚನೆ
ಗ್ರಾಮದಲ್ಲೇ ವಿವಾಹ ನೋಂದಣಿ: ಪಿಡಿಓಗೆ ಅಧಿಕಾರ- ಸರ್ಕಾರ ಅಧಿಸೂಚನೆ
ರಾಜ್ಯದಲ್ಲಿ ಇನ್ನು ಮುಂದೆ ಗ್ರಾಮ ಪಂಚಾಯತ್ ಮಟ್ಟದಲ್ಲೇ ನಿಮ್ಮ ವಿವಾಹವನ್ನು ನೋಂದಾಯಿಸಬಹುದು. ಈ ಬಗ್ಗೆ ಆಯಾ ಗ್ರಾಮದ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ
ಪಂಚಾಯತ್ ಮಟ್ಟದಲ್ಲಿ ವಿವಾಹ ನೋಂದಣಿ ಮಾಡಬಹುದಾಗಿದ್ದು, ಈ ಸಂಬಂಧ ರಾಜ್ಯ ಸರ್ಕಾರ ಶನಿವಾರ ಅಧಿಸೂಚನೆ ಹೊರಡಿಸಿದೆ.
ಸಕ್ಷಮ ಪ್ರಾಧಿಕಾರವಾಗಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು ಸರ್ಕಾರ ನೇಮಿಸಿ ಸುತ್ತೋಲೆಯನ್ನು ಹೊರಡಿಸಿದೆ. (WCD 87 SWW 2022 Dated 16-04-2022)
ಕರ್ನಾಟಕ ವಿವಾಹ (ನೋಂದಾವಣೆ ಮತ್ತು ಇತರ ನಿಯಮಗಳು) ಕಾಯ್ದೆ 1976 ಮತ್ತು WCD 87 ಅಧಿಸೂಚನೆ WCD 100 SWW 2006 Dated 07-11-2007ರ ಮುಂದುವರಿದ ಭಾಗವಾಗಿ ಈ ಅಧಿಸೂಚನೆಯನ್ನು ಹೊರಡಿಸಲಾಗಿದೆ.
ಈ ಆದೇಶದ ಪ್ರಕಾರ, ಇನ್ನು ಮುಂದೆ ಗ್ರಾಮ ಪಂಚಾಯತ್ ಮಟ್ಟದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರೇ ವಿವಾಹ ನೋಂದಾವಣಾಧಿಕಾರಿಯಾಗಿ ಅಧಿಕಾರ ಹೊಂದಿರುತ್ತಾರೆ.
ಈ ಅಧಿಸೂಚನೆಯ ಮೂಲಕ ಪಿಡಿಓ ಅವರು, ಜನನ ಮತ್ತು ಮರಣ ನೋಂದಣಿಯ ಜತೆಗೆ ವಿವಾಹ ನೋಂದಣಿಯನ್ನೂ ಮಾಡಬಹುದಾಗಿದೆ.