Registration And Stamp Fee- ಆಸ್ತಿ ಖರೀದಿ/ಮಾರಾಟ ಮಾಡುತ್ತಿದ್ದೀರಾ..? ಶೇಕಡಾ 10ರ ರಿಯಾಯಿತಿ ಅವಧಿ ವಿಸ್ತರಣೆ
ಆಸ್ತಿ ಖರೀದಿ/ಮಾರಾಟ ಮಾಡುತ್ತಿದ್ದೀರಾ..? ಶೇಕಡಾ 10ರ ರಿಯಾಯಿತಿ ಅವಧಿ ವಿಸ್ತರಣೆ
ನೀವು ಆಸ್ತಿ ಖರೀದಿ ಯಾ ಮಾರಾಟ ಮಾಡುತ್ತಿದ್ದೀರಾ... ? ಹೌದು ಎಂದಾಗಿದ್ದರೆ ನಿಮಗಿದು ಸಿಹಿ ಸುದ್ದಿ.
ರಾಜ್ಯದ ಆಸ್ತಿ ಖರೀದಿ ಮತ್ತು ಮಾರಾಟಕ್ಕೆ ಘೋಷಿಸಲಾಗಿದ್ದ ಶೇಕಡ ಹತ್ತರಷ್ಟು ನೋಂದಣಿ ಮತ್ತು ಮುದ್ರಾಂಕ ಶುಲ್ಕ ರಿಯಾಯಿತಿಯನ್ನು ವಿಸ್ತರಿಸಿದೆ. ಸರ್ಕಾರದ ಗೈಡ್‌ಲೈನ್ಸ್ ಮೌಲ್ಯಕ್ಕೂ ಇದು ಅನ್ವಯವಾಗಲಿದೆ.
2022ರ ಜನವರಿಯಿಂದ ಮಾರ್ಚ್ ಅಂತ್ಯದವರೆಗೆ ಈ ರಿಯಾಯಿತಿಯನ್ನು ಘೋಷಣೆ ಮಾಡಲಾಗಿತ್ತು. ಈ ಮೂರು ತಿಂಗಳ ಅವಧಿಯಲ್ಲಿ ಭಾರಿ ಸಂಖ್ಯೆಯ ಭೂ ವ್ಯವಹಾರಗಳು ದಾಖಲಾಗಿದ್ದು ಸರಕಾರದ ರಾಜ್ಯಕ್ಕೆ ದೊಡ್ಡ ಮೊತ್ತದ ಹಣ ಶುಲ್ಕದ ರೂಪದಲ್ಲಿ ಶೇಖರಣೆಯಾಗಿತ್ತು.
ಈ ಸೌಲಭ್ಯವನ್ನು ಇನ್ನೂ ಮುಂದುವರಿಸಬೇಕು ಎಂಬ ಬೇಡಿಕೆ ಬಂದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಮೂರು ತಿಂಗಳ ಕಾಲ ಮುಂದುವರಿಸುವ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ.
ಈ ನಿರ್ಧಾರದ ಪ್ರಕಾರ, ಏಪ್ರಿಲ್ ನಿಂದ ಜುಲೈವರೆಗೆ ನೋಂದಣಿ ಮತ್ತು ಮುದ್ರಾಂಕ ಶುಲ್ಕದಲ್ಲಿ ಶೇಕಡ ಹತ್ತರ ರಿಯಾಯಿತಿ ಮುಂದುವರಿಯಲಿದೆ. ಮಾರ್ಗಸೂಚಿ ದರಕ್ಕೂ ಇದು ಅನ್ವಯವಾಗಲಿದೆ. ಇದು ಸ್ಥಿರ ಆಸ್ತಿಗಳ ಮಾರಾಟ ಮತ್ತು ಖರೀದಿ ಗೆ ಮಾತ್ರ ಅನ್ವಯಿಸುತ್ತದೆ.