-->
Govt Employees Service Book Nominee issue- ಸರ್ಕಾರಿ ನೌಕರನ ಸೇವಾ ಪುಸ್ತಕದಲ್ಲಿ ನಾಮಿನಿ ಕೇಳುವ ಹಕ್ಕು ಪತ್ನಿಗೆ ಇಲ್ಲ!

Govt Employees Service Book Nominee issue- ಸರ್ಕಾರಿ ನೌಕರನ ಸೇವಾ ಪುಸ್ತಕದಲ್ಲಿ ನಾಮಿನಿ ಕೇಳುವ ಹಕ್ಕು ಪತ್ನಿಗೆ ಇಲ್ಲ!

ಸರ್ಕಾರಿ ನೌಕರನ ಸೇವಾ ಪುಸ್ತಕದಲ್ಲಿ ನಾಮಿನಿ ಕೇಳುವ ಹಕ್ಕು ಪತ್ನಿಗೆ ಇಲ್ಲ!






ಸರಕಾರಿ ನೌಕರಿಯಲ್ಲಿರುವ ಪತಿಯ ಸೇವಾ ಪುಸ್ತಕದಲ್ಲಿ ತನ್ನನ್ನೇ ನಾಮಿನಿಯನ್ನಾಗಿ ಮಾಡಿ ಎಂದು ಕೇಳುವ ಹಕ್ಕು ಪತ್ನಿಗೆ ಇಲ್ಲ. ಆದರೆ ಪತಿಯ ಮರಣೋತ್ತರ ಪಿಂಚಣಿಯನ್ನು ಕೇಳಿ ಪಡೆಯುವ ಅಧಿಕಾರ ಆಕೆಗೆ ಇದೆ ಎಂದು ಕರ್ನಾಟಕ ಹೈಕೋರ್ಟ್‌ ಮಹತ್ವದ ತೀರ್ಪು ನೀಡಿದೆ.



ಕರ್ನಾಟಕ ಹೈಕೋರ್ಟ್ ಧಾರವಾಡ ಪೀಠದಲ್ಲಿ ನ್ಯಾ.ಕೃಷ್ಣ ಎಸ್‌.ದೀಕ್ಷಿತ್‌ ಅವರಿದ್ದ ಏಕ ಸದಸ್ಯಪೀಠ ಈ ತೀರ್ಪು ನೀಡಿದೆ.



ಪ್ರಕರಣ: ಆದಂ ಸಾಹೇಬ್ Vs ರಜಿಯಾ ಬೇಗಂ ಮತ್ತು ಇತರರು

ಕರ್ನಾಟಕ ಹೈಕೋರ್ಟ್ Dated 02-04-2018 (CRP No. 100049 / 2017)


ನಾಮಿನಿಯಾಗಿ ಯಾರನ್ನು ಮಾಡಬೇಕು ಎಂಬುದು ಸರಕಾರಿ ನೌಕರರ ವೈಯಕ್ತಿಕ ವಿಷಯ ಮತ್ತು ಅವರ ವಿವೇಚನೆಗೆ ಬಿಟ್ಟ ವಿಚಾರ. ಅದರಲ್ಲಿ ಯಾರೂ ಹಕ್ಕು ಮಂಡಿಸಲಾಗದು ಎಂದು ನ್ಯಾಯಪೀಠ ಹೇಳಿದೆ.

ಹಾಗೆಯೆ, 'ಪತ್ನಿಗೆ ಪಿಂಚಣಿ ಪಡೆಯುವ ಹಕ್ಕು ಇರುವಂತೆಯೇ, ಪತಿಯ ಸೇವಾ ಪುಸ್ತಕದಲ್ಲಿ ತನ್ನ ಹೆಸರನ್ನು ನಾಮಿನಿಯನ್ನಾಗಿ ಮಾಡಬೇಕೆಂಬ ಅಧಿಕಾರವೂ ತನಗಿದೆ' ಎಂಬ ವಾದವನ್ನು ತಿರಸ್ಕರಿಸಿದೆ.


ಸರ್ಕಾರಿ ನೌಕರನ ಮರಣಾನಂತರ ಕರ್ನಾಟಕ ನಾಗರಿಕ ಸೇವಾ ನಿಯಮದಂತೆ ಅವರ ಧರ್ಮಪತ್ನಿ ಸಹಜವಾಗಿಯೇ ಕೌಟುಂಬಿಕ ಪಿಂಚಣಿಗೆ ಅರ್ಹರಾಗುತ್ತಾರೆ. ಅದನ್ನೇ ಹಕ್ಕು ಎಂದು ತಪ್ಪಾಗಿ ಗ್ರಹಿಸಿ, ನೌಕರ ಬದುಕಿರುವಾಗಲೇ ಅವರ ಸೇವಾ ಪುಸ್ತಕದಲ್ಲಿ ತನ್ನ ಹೆಸರನ್ನು ನಾಮಿನಿ ಆಗಿ ಸೇರಿಸಿ ಎಂದು ಒತ್ತಾಯಿಸಲಾಗದು '' ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.


ಸರಕಾರಿ ನೌಕರ ಮೃತಪಟ್ಟ ಸಂದರ್ಭದಲ್ಲಿ, ಪ್ರಸ್ತುತ ನಿಯಮದಂತೆ ವಿಧವೆ ಪತ್ನಿಯನ್ನು ಪಿಂಚಣಿಗೆ ಪರಿಗಣಿಸಬೇಕು. ಆಗ ಮೃತ ನೌಕರ ಸೇವಾ ಪುಸ್ತಕದಲ್ಲಿ ಯಾರು ನಾಮಿನಿ ಇದ್ದಾರೆ ಎಂಬುದು ಪಿಂಚಣಿಗೆ ಆಧಾರವಾಗುವುದಿಲ್ಲ ಎಂದೂ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.


ಪ್ರಕರಣದ ವಿವರ:


ಬೆಳಗಾವಿಯ ಹುಕ್ಕೇರಿ ನಿವಾಸಿ ಅಡಂ ಸಾಹೇಬ್‌ ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ವಿರುದ್ಧ ಪತ್ನಿ ರಜಿಯಾ ಬೇಗಂ ಬೆಳಗಾವಿ ಕೌಟುಂಬಿಕ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.


2016ರಲ್ಲಿ ಮಧ್ಯಾಂತರ ಅರ್ಜಿ ಸಲ್ಲಿಸಿದ್ದ ರಜಿಯಾ,''ಪತಿಯ ಮರಣಾನಂತರ ತಮಗೆ ಕಾನೂನು ಪ್ರಕಾರ ಪಿಂಚಣಿ ಪಡೆಯುವ ಹಕ್ಕಿದೆ. ಹಾಗಾಗಿ ಪತಿಯ ಸೇವಾ ದಾಖಲೆಗಳಲ್ಲಿ ತಮ್ಮ ಹೆಸರನ್ನು ನಾಮಿನಿಯನ್ನಾಗಿ ಮಾಡುವಂತೆ ಕೇಳುವ ಹಕ್ಕೂ ಇದೆ. ಆದ್ದರಿಂದ ನನ್ನ ಹೆಸರನ್ನು ಪತಿಯ ಸೇವಾ ಪುಸ್ತಕದಲ್ಲಿ ನಾಮಿನಿಯನ್ನಾಗಿ ದಾಖಲು ಮಾಡುವಂತೆ ಸರಕಾರಕ್ಕೆ ನಿರ್ದೇಶನ ನೀಡಬೇಕು" ಎಂದು ಕೋರಿದ್ದರು.


ಅರ್ಜಿಗೆ ಆಕ್ಷೇಪ ಸಲ್ಲಿಸಿದ ಅಡಂ ಸಾಹೇಬ್‌, ''ನನ್ನ ಮರಣಾನಂತರ ಗ್ರಾಚ್ಯುಯಿಟಿ ಪ್ರಯೋಜನ ಯಾರಿಗೆ ಸಿಗಬೇಕು, ಅನುಕಂಪ ನೌಕರಿ ಸೇರಿದಂತೆ ಇತರೆ ಪ್ರಯೋಜನಗಳನ್ನು ಯಾರಿಗೆ ನೀಡಬೇಕು, ಯಾರನ್ನು ನಾಮಿನಿ ಮಾಡಬೇಕು, ಯಾರನ್ನು ಬಿಡಬೇಕು ಎಂಬುದು ನನ್ನ ವಿವೇಚನೆಗೆ ಬಿಟ್ಟ ವಿಚಾರ. ಇದರಲ್ಲಿ ಹಕ್ಕು ಇತರರು ಮಂಡಿಸಲಾಗದು, ಬಲವಂತವನ್ನೂ ಮಾಡಲಾಗದು. ಹಾಗಾಗಿ, ಪತ್ನಿಯ ಅರ್ಜಿ ವಜಾಗೊಳಿಸಬೇಕು'' ಎಂದು ವಾದಿಸಿದ್ದರು.



ಕೌಟುಂಬಿಕ ನ್ಯಾಯಾಲಯ ರಜಿಯಾ ಅರ್ಜಿಯನ್ನು ಪುರಸ್ಕರಿಸಿದ ಕಾರಣ, ಅದನ್ನು ಪ್ರಶ್ನಿಸಿ ಆದಂ ಸಾಹೇಬ್ ಧಾರವಾಡ ಹೈಕೋರ್ಟ್‌ ಮೊರೆ ಹೋದರು.



ಇದನ್ನು ವಿಚಾರಣೆಗೆ ಎತ್ತಿಕೊಂಡ ನ್ಯಾಯಪೀಠ, "ನಿಯಮಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಮತ್ತು ಸುಪ್ರೀಂ ಕೋರ್ಟ್‌ನ ತೀರ್ಪುಗಳ ಆಧಾರದಲ್ಲಿ ಕೆಸಿಎಸ್‌ ನಿಯಮ 302 ರ ಸ್ಥಿತಿ ಬದಲಾಗುವುದಿಲ್ಲ. ನೌಕರರ ಸೇವಾ ದಾಖಲೆಗಳಲ್ಲಿ ದಂಪತಿಯನ್ನು ನಾಮಿನಿಯನ್ನಾಗಿ ಮಾಡುವಂತೆ ಕೋರುವ ನ್ಯಾಯಯುತ ಹಕ್ಕು ಲಭಿಸುವುದಿಲ್ಲ. ಹಾಗಾಗಿ ಪತಿ ಸಲ್ಲಿಸಿರುವ ಅರ್ಜಿಯನ್ನು ಮಾನ್ಯ ಮಾಡಲಾಗುವುದು ''ಎಂದು ಸ್ಪಷ್ಟಪಡಿಸಿದೆ. ಅಲ್ಲದೆ, ಪತ್ನಿ ಬೇಕಿದ್ದರೆ ಆ ಬಗ್ಗೆ ಸರಕಾರಕ್ಕೆ ಮನವಿ ಸಲ್ಲಿಸಬಹುದು ಎಂದೂ ಆದೇಶದಲ್ಲಿ ತಿಳಿಸಲಾಗಿದೆ.



ಪ್ರಕರಣದ ತೀರ್ಪಿನ ಪ್ರತಿಗಾಗಿ ಇಲ್ಲಿ ಕ್ಲಿಕ್ ಮಾಡಿ:

ಆದಂ ಸಾಹೇಬ್ Vs ರಜಿಯಾ ಬೇಗಂ ಮತ್ತು ಇತರರು





Ads on article

Advertise in articles 1

advertising articles 2

Advertise under the article