-->
APP ಪರೀಕ್ಷೆ: ಮಾಹಿತಿ ನೀಡಲು ಅಭ್ಯರ್ಥಿಗಳಿಗೆ ಸೂಚನೆ

APP ಪರೀಕ್ಷೆ: ಮಾಹಿತಿ ನೀಡಲು ಅಭ್ಯರ್ಥಿಗಳಿಗೆ ಸೂಚನೆ

APP ಪರೀಕ್ಷೆ: ಮಾಹಿತಿ ನೀಡಲು ಅಭ್ಯರ್ಥಿಗಳಿಗೆ ಸೂಚನೆ





ಸಹಾಯಕ ಸರ್ಕಾರಿ ಅಭಿಯೋಜಕ / ಸಹಾಯಕ ಸರ್ಕಾರಿ ವಕೀಲರ ಹುದ್ದೆಗಳಿಗೆ 26-10-2021ರಂದು ಹೊರಡಿಸಲಾದ ಅಧಿಸೂಚನೆಯಂತೆ ಮುಖ್ಯ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳಿಗೆ ನ್ಯಾಷನಲ್ ಸ್ಕೂಲ್ ಆಫ್ ಇಂಡಿಯಾ, ನಾಗರಭಾವಿ, ಬೆಂಗಳೂರು ಇವರು 28-05-2022 ಮತ್ತು 29-05-2022ರಂದು ಮುಖ್ಯ ಪರೀಕ್ಷೆ ನಡೆಸಲಿರುವರು.



ಈ ಪರೀಕ್ಷೆ ಸಂಬಂಧ ಅಗತ್ಯ ಮಾಹಿತಿ ಒದಗಿಸುವಂತೆ ಅರ್ಹ ಅಭ್ಯರ್ಥಿಗಳಿಗೆ ನ್ಯಾಷನಲ್ ಸ್ಕೂಲ್ ಆಫ್ ಇಂಡಿಯಾ ಸೂಚನೆ ನೀಡಿದೆ.



ಅಭ್ಯರ್ಥಿಗಳು ನೀಡಿರುವ ತಮ್ಮ ಇಮೇಲ್ ಮತ್ತು ಮೊಬೈಲ್ ಸಂಖ್ಯೆಗೆ ಸಂದೇಶ ಕಳುಹಿಸಿ ಈ ಬಗ್ಗೆ ಮನವಿ ಮಾಡಲಾಗಿದೆ. ಆದರೂ, ಕೆಲ ಅಭ್ಯರ್ಥಿಗಳು ಮಾಹಿತಿ ನೀಡಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಅವರನ್ನು ಈ ಪ್ರಕಟಣೆ ಮೂಲಕ ಮಾಹಿತಿ ಹಂಚಿಕೊಳ್ಳುವಂತೆ ವಿನಂತಿಸುವುದಾಗಿ ಸಂಸ್ಥೆ ಹೇಳಿಕೊಂಡಿದೆ.



ಅಭ್ಯರ್ಥಿಗಳು ಒದಗಿಸಿರುವ ಇಮೇಲ್ ಮತ್ತು ಮೊಬೈಲ್ ಸಂಖ್ಯೆಗೆ ಪಾಸ್‌ವರ್ಡ್ ಮತ್ತು ಯೂಸರ್ ನೇಮ್ ಕಳುಹಿಸಲಾಗಿದೆ. ಇದನ್ನು ಬಳಸಿ 16-05-2022ರ ಒಳಗೆ ಮಾಹಿತಿ ಒದಗಿಸಬೇಕು ಎಂದು ಸೂಚಿಸಲಾಗಿದೆ.



ಮುಖ್ಯ ಪರೀಕ್ಷೆಯ ಕುರಿತು ಅಭ್ಯರ್ಥಿಗಳಿಗೆ ಗೊಂದಲ, ಸ್ಪಷ್ಟೀಕರಣ ಇದ್ದರೆ ಈ ಕೆಳಗಿನ ಇಮೇಲ್ ಮೂಲಕ ನೇರವಾಗಿ ಸಂಪರ್ಕಿಸಬಹುದು.


appexamhelpdesk@nls.ac.in


Ads on article

Advertise in articles 1

advertising articles 2

Advertise under the article