-->
Cruelty by Wife- CHHATTISGARH HC Judgement ಪೋಷಕರಿಂದ ಪ್ರತ್ಯೇಕವಾಗಿ ವಾಸಿಸಲು ಪತಿಗೆ ಒತ್ತಾಯಿಸುವುದು ಕ್ರೌರ್ಯ: ಛತ್ತೀಸ್‌ಗಢ ಹೈಕೋರ್ಟ್

Cruelty by Wife- CHHATTISGARH HC Judgement ಪೋಷಕರಿಂದ ಪ್ರತ್ಯೇಕವಾಗಿ ವಾಸಿಸಲು ಪತಿಗೆ ಒತ್ತಾಯಿಸುವುದು ಕ್ರೌರ್ಯ: ಛತ್ತೀಸ್‌ಗಢ ಹೈಕೋರ್ಟ್

ಪೋಷಕರಿಂದ ಪ್ರತ್ಯೇಕವಾಗಿ ವಾಸಿಸಲು ಪತಿಗೆ ಒತ್ತಾಯಿಸುವುದು ಕ್ರೌರ್ಯ: ಛತ್ತೀಸ್‌ಗಢ ಹೈಕೋರ್ಟ್





ಪೋಷಕರ ತೊರೆದು ಬೇರೆ ಮನೆ ಮಾಡಲು ಒತ್ತಾಯಿಸುವುದು ಪತ್ನಿ ನಡೆಸುವ ಕ್ರೌರ್ಯ: ಛತ್ತೀಸಘಡ ಹೈಕೋರ್ಟ್



ಹೆತ್ತವರು ಯಾ ಪೋಷಕರನ್ನು ಬಿಟ್ಟು ಬೇರೆಯೇ ಮನೆಯಲ್ಲಿ ಜೀವನ ನಡೆಸೋಣ ಎಂದು ಪತ್ನಿಯು ಪತಿಯ ಮೇಲೆ ಒತ್ತಡ ಹಾಕಿದರೆ, ಆಗ ಅದು ಪತಿಗೆ ನಡೆಸುವ ಕ್ರೌರ್ಯ ಎಂದು ಛತ್ತೀಸ್‌ಗಢ ಹೈಕೋರ್ಟ್ ತೀರ್ಪು ನೀಡಿದೆ.



ಅದೇ ರೀತಿ, ಪ್ರತ್ಯೇಕವಾಗಿ ವಾಸಿಸಲು ಪತಿಗೆ ಒತ್ತಾಯಿಸಿದರೆ, ಸುಳ್ಳು ವರದಕ್ಷಿಣೆ ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಕೆ ಹಾಕಿದರೆ ಅದು ಮಾನಸಿಕ ಕ್ರೌರ್ಯಕ್ಕೆ ಸಮ ಎಂದು ಹೈಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ.


ಪ್ರಕರಣ: ಶೈಲೇಂದ್ರ ಕುಮಾರ್ ಚಂದ್ರ VS ಭಾರತಿ ಚಂದ್ರ

ಛತ್ತೀಸಗಡ ಹೈಕೋರ್ಟ್, Dated- 27-04-2022



ವಿಚ್ಚೇದನ ಪ್ರಕರಣವೊಂದರ ವಿಚಾರಣೆ ವೇಳೆ ಪತಿ ಪತ್ನಿಯ ನಡುವೆ ಭಿನ್ನಾಭಿಪ್ರಾಯ ತಲೆದೋರಿದ ಕಾರಣ ಮದುವೆಯಾದ ಎರಡೇ ತಿಂಗಳಲ್ಲಿ ಸಂಸಾರ ಒಡೆದಿರುವುದನ್ನು ನ್ಯಾಯಾಲಯ ಗಮನಿಸಿತು. ಆ ಪ್ರಕರಣದಲ್ಲಿ, ಪತ್ನಿ ತನ್ನ ಗಂಡನ ಮನೆ ಬಿಟ್ಟು ಪದೇಪದೇ ತವರು ಮನೆಗೆ ತೆರಳುತ್ತಿದ್ದಳು. 


ಪತ್ನಿಯ ತಂದೆ(ಮಾವ) ಕೂಡ ತನ್ನ ಮನೆಯಲ್ಲೇ ವಾಸಿಸಲು ಅಳಿಯನಿಗೆ ಒತ್ತಾಯಿಸುತ್ತಿದ್ದರು. ಪತಿ ಹಲವು ಬಾರಿ ಮನವೊಲಿಸಲು ಮುಂದಾದರೂ ಅದು ವ್ಯರ್ಥವಾಗಿತ್ತು ಎಂಬುದನ್ನು ನ್ಯಾಯಾಲಯ ಗಮನಿಸಿತು.


ತನಗೆ ವಿಚ್ಛೇದನ ನಿರಾಕರಿಸಿದ ಕೌಟುಂಬಿಕ ನ್ಯಾಯಾಲಯದ ತೀರ್ಪು ವಿರುದ್ಧ ಪತಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ, ಪತಿಗೆ ಮಾನಸಿಕ ಕಿರುಕುಳ ನೀಡಲಾಗಿದೆ ಎಂದು ಹೇಳಿ, ದಂಪತಿಗೆ ವಿಚ್ಛೇದನ ನೀಡಿತು.


Read the Judgement 

ಶೈಲೇಂದ್ರ ಕುಮಾರ್ ಚಂದ್ರ VS ಭಾರತಿ ಚಂದ್ರ

Ads on article

Advertise in articles 1

advertising articles 2

Advertise under the article