Dress Code relaxed - ವಕೀಲರ ವಸ್ತ್ರಸಂಹಿತೆ ಸಡಿಲಿಸಿದ ಮದ್ರಾಸ್ ಹೈಕೋರ್ಟ್
Saturday, May 7, 2022
ವಕೀಲರ ವಸ್ತ್ರಸಂಹಿತೆ ಸಡಿಲಿಸಿದ ಮದ್ರಾಸ್ ಹೈಕೋರ್ಟ್
ಬೇಸಿಗೆ ಬಿಸಿಲಿನಿಂದ ವಕೀಲರು ಸಂಕಟಪಡುತ್ತಿರುವುದನ್ನು ಮನಗಂಡ ಮದ್ರಾಸ್ ಹೈಕೋರ್ಟ್, ಕಪ್ಪು ಗೌನ್ ಧರಿಸುವುದರಿಂದ ವಕೀಲರಿಗೆ ವಿನಾಯಿತಿ ನೀಡಿ ಮಹತ್ವದ ನಿರ್ಧಾರ ಕೈಗೊಂಡಿದೆ.
ಮದ್ರಾಸ್ ಹೈಕೋರ್ಟ್ ವಕೀಲರ ಸಂಘದ ಪದಾಧಿಕಾರಿಗಳು ಮಾಡಿದ ಮನವಿಯನ್ನು ಆಧರಿಸಿ ಮುಖ್ಯ ನ್ಯಾಯಮೂರ್ತಿಗಳು ಈ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ.
ಮದ್ರಾಸ್ ಹೈಕೋರ್ಟ್ ಅಧಿಸೂಚನೆ ಹೊರಡಿಸಿದ್ದು, ಪ್ರಸಕ್ತ ವರ್ಷ ಬೇಸಿಗೆ ರಜೆ ವೇಳೆ ನ್ಯಾಯಾಲಯಕ್ಕೆ ಹಾಜರಾಗುವ ವಕೀಲರಿಗೆ ವಸ್ತ್ರಸಂಹಿತೆಯಲ್ಲಿ ರಿಯಾಯಿತಿ ನೀಡಿದೆ.
ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ವಿನಾಯಿತಿಗೆ ಸಮ್ಮತಿ ಸೂಚಿಸಿರುವುದನ್ನು ಅಧಿಸೂಚನೆ ವಿವರಿಸಿದ್ದು, ವಕೀಲರು ನ್ಯಾಯಪೀಠದ ಮುಂದೆ ಹಾಜರಾಗುವಾಗ ಕಾಲರ್ ಬ್ಯಾಂಡ್ ಮತ್ತು ಕಪ್ಪು ಕೋಟ್ ಧರಿಸಿರಬೇಕು ಎಂದು ಸ್ಪಷ್ಟಪಡಿಸಲಾಗಿದೆ.