ಸರ್ಕಾರಿ ಉದ್ಯೊಗ: ಹೆಚ್ಚು ಅಂಕ ಬಂದರೆ ಮೀಸಲು ಅಭ್ಯರ್ಥಿಗಳಿಗೂ ಸಾಮಾನ್ಯ ವರ್ಗದಲ್ಲೇ ನೇಮಕ- ಸುಪ್ರೀಂ ಕೋರ್ಟ್ ತೀರ್ಪು
ಸರ್ಕಾರಿ ಉದ್ಯೊಗ: ಹೆಚ್ಚು ಅಂಕ ಬಂದರೆ ಮೀಸಲು ಅಭ್ಯರ್ಥಿಗಳಿಗೂ ಸಾಮಾನ್ಯ ವರ್ಗದಲ್ಲೇ ನೇಮಕ- ಸುಪ್ರೀಂ ಕೋರ್ಟ್ ತೀರ್ಪು
ಸರಕಾರಿ ಉದ್ಯೋಗಕ್ಕೆ ನೇಮಕ ಮಾಡುವ ಸಂದರ್ಭದಲ್ಲಿ ಪರೀಕ್ಷೆ ಮತ್ತು ಇತರ ಸುತ್ತುಗಳಲ್ಲಿ ಮೀಸಲಾತಿಯಲ್ಲಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಹೆಚ್ಚು ಅಂಕ ಬಂದಲ್ಲಿ, ಅವರನ್ನು ಸಾಮಾನ್ಯ ವರ್ಗದಲ್ಲಿ ನೇಮಕ ಮಾಡಬಹುದು ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಸುಪ್ರೀಂಕೋರ್ಟ್ ನ ನ್ಯಾಯಮೂರ್ತಿ ಎ.ಆರ್. ಶಾ ಮತ್ತು ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರ ವಿಭಾಗೀಯ ಪೀಠ ಈ ತೀರ್ಪು ನೀಡಿದೆ
ರಾಜಸ್ಥಾನದ ಬಿಎಸ್‌ಎನ್‌ಎನ್ ನಲ್ಲಿ ನೇಮಕಾತಿ ವಿಚಾರಕ್ಕೆ ಸಂಬಂಧಿಸಿದ ದಾಖಲಾದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
1992 ರಲ್ಲಿ ದೇಶಾದ್ಯಂತ ಚರ್ಚೆಗೆ ಕಾರಣವಾಗಿದ್ದ ಮಂಡಲ್ ಆಯೋಗದ ವರದಿ, ಇತರ ಮಹತ್ವದ ತೀರ್ಪುಗಳು ಸೇರಿದಂತೆ ಪ್ರಮುಖ ಪ್ರಕರಣಗಳ ನ್ಯಾಯಪೀಠ ಈ ಸಂದರ್ಭದಲ್ಲಿ ಉಲ್ಲೇಖಿಸಿದೆ.
ಮೀಸಲು ಹೊಂದಿದ ಅಭ್ಯರ್ಥಿಯ ಪರ ವಾದ ಮಂಡಿಸಿದ ವಕೀಲ ರಾಜೀವ್ ಧವನ್, ಸಾಮಾನ್ಯ ವರ್ಗದಲ್ಲಿರುವ ಅಭ್ಯರ್ಥಿಗಿಂತ ಮೀಸಲು ಅಭ್ಯರ್ಥಿ ಹೆಚ್ಚು ಅಂಕ ಗಳಿಸಿದರೆ ಅವರನ್ನು ಸಾಮಾನ್ಯ ವರ್ಗದಲ್ಲೇ ನೇಮಕ ಮಾಡಬೇಕು ಎಂದು ವಾದಿಸಿದ್ದರು.