-->
ಸೋಮವಾರ ಕೋರ್ಟ್ ಕಲಾಪಗಳಿಗೆ ರಜೆ: ಹೈಕೋರ್ಟ್ ಅಧಿಸೂಚನೆ

ಸೋಮವಾರ ಕೋರ್ಟ್ ಕಲಾಪಗಳಿಗೆ ರಜೆ: ಹೈಕೋರ್ಟ್ ಅಧಿಸೂಚನೆ

ಸೋಮವಾರ ಕೋರ್ಟ್ ಕಲಾಪಗಳಿಗೆ ರಜೆ: ಹೈಕೋರ್ಟ್ ಅಧಿಸೂಚನೆ







ರಂಜಾನ್ ಹಬ್ಬದ ಆಚರಣೆ ಹಿನ್ನೆಲೆಯಲ್ಲಿ ಸೋಮವಾರ, ಮೇ 2, 2022ರಂದು ರಾಜ್ಯ ಎಲ್ಲ ನ್ಯಾಯಾಲಯಗಳಿಗೆ ರಜೆ ಘೋಷಿಸಲಾಗಿದೆ. ಈ ಬಗ್ಗೆ ಭಾನುವಾರ ಕರ್ನಾಟಕ ಹೈಕೋರ್ಟ್ ಅಧಿಸೂಚನೆ ಹೊರಡಿಸಿದೆ.



ನೆಗೋಷಿಯೇಬಲ್ ಇನ್‌ಸ್ಟ್ರುಮೆಂಟ್‌ ಆಕ್ಟ್‌ನ ಸೆಕ್ಷನ್ 25ರ ಪ್ರಕಾರ ಅಧಿಸೂಚನೆ ಹೊರಡಿಸಿರುವ ಹೈಕೋರ್ಟ್‌, ಪ್ರಧಾನ ಪೀಠ, ಧಾರವಾಡ ಮತ್ತು ಕಲ್ಬುರ್ಗಿ ಪೀಠ ಹಾಗೂ ರಾಜ್ಯದ ಎಲ್ಲ ಜಿಲ್ಲಾ ಹಾಗೂ ವಿಚಾರಣಾ ನ್ಯಾಯಾಲಯಗಳಿಗೆ ಈ ಅಧಿಸೂಚನೆ ಅನ್ವಯವಾಗಲಿದೆ ಎಂದು ಹೇಳಿದೆ.


ಮಂಗಳವಾರ ಮೇ 3, 2022ರಂದು ಬಸವ ಜಯಂತಿ ಪ್ರಯುಕ್ತ ನ್ಯಾಯಾಲಯಗಳಿಗೆ ರಜೆ ಇರಲಿದೆ. ಆ ದಿನ ಎಂದಿನಂತೆ ಸರ್ಕಾರಿ ರಜೆ ಮುಂದುವರಿಯಲಿದೆ ಎಂದು ಹೈಕೋರ್ಟ್ ರಿಜಿಸ್ಟ್ರಾರ್ ಹೊರಡಿಸಿರುವ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

Ads on article

Advertise in articles 1

advertising articles 2

Advertise under the article