-->
ವಿದೇಶಿ ಪ್ರಜೆಯ ಅಕ್ರಮ ಬಂಧನ: ಸಬ್ ಇನ್ಸ್‌ಪೆಕ್ಟರ್‌ಗೆ ದಂಡ ಹಾಕಿದ ರಾಜ್ಯ ಮಾನವ ಹಕ್ಕುಗಳ ಆಯೋಗ

ವಿದೇಶಿ ಪ್ರಜೆಯ ಅಕ್ರಮ ಬಂಧನ: ಸಬ್ ಇನ್ಸ್‌ಪೆಕ್ಟರ್‌ಗೆ ದಂಡ ಹಾಕಿದ ರಾಜ್ಯ ಮಾನವ ಹಕ್ಕುಗಳ ಆಯೋಗ

ವಿದೇಶಿ ಪ್ರಜೆಯ ಅಕ್ರಮ ಬಂಧನ: ಸಬ್ ಇನ್ಸ್‌ಪೆಕ್ಟರ್‌ಗೆ ದಂಡ ಹಾಕಿದ ರಾಜ್ಯ ಮಾನವ ಹಕ್ಕುಗಳ ಆಯೋಗ





ಒಬ್ಬ ವಿದೇಶಿ ಪ್ರಜೆಯನ್ನು ಅಕ್ರಮವಾಗಿ ಬಂಧಿಸಿದ್ದಲ್ಲದೆ, ಸೂಕ್ತ ಕಾನೂನು ನೆರವು ಒದಗಿಸದೆ 19 ದಿನಗಳ ಕಾಲ ಜೈಲು ವಾಸ ನೀಡಿದ ಪ್ರಕರಣದಲ್ಲಿ ಪೊಲೀಸ್ ಸಬ್‌ ಇನ್‌ಪೆಕ್ಟರ್‌ಗೆ ರಾಜ್ಯ ಮಾನವ ಹಕ್ಕುಗಳ ಆಯೋಗ ರೂ. 75,000/- ದಂಡ ವಿಧಿಸಿ ಆದೇಶ ಹೊರಡಿಸಿದೆ.


ಪ್ರಕರಣ: Hiotoshi Tanaka Vs B Hanumantharayappa

Karnataka State Human Rights Commission

HRC 4131/10/31/2020 dated 09-05-2022


ಈ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಗಳು ನಡೆದುಕೊಂಡ ರೀತಿಯ ಬಗ್ಗೆ ರಾಜ್ಯ ಮಾನವ ಹಕ್ಕುಗಳ ಆಯೋಗ ತೀವ್ರ ಅಸಮಾಧಾನ ಮತ್ತು ಆಕ್ರೋಶ ವ್ಯಕ್ತಪಡಿಸಿದೆ. ಜಾಮೀನು ನೀಡಬಹುದಾದ ಮತ್ತು ಅಸಂಜ್ಞೇಯ ಅಪರಾಧ ಪ್ರಕರಣಗಳಲ್ಲಿ ಯಾವುದೇ ವ್ಯಕ್ತಿಯ ಬಂಧನವಾದಾಗ ಪೊಲೀಸ್ ಅಧಿಕಾರಿಗಳು ಹೇಗೆ ನಡೆದುಕೊಳ್ಳಬೇಕು ಎಂಬ ಬಗ್ಗೆ ರಾಜ್ಯ ಸರ್ಕಾರ ಸೂಕ್ತ ಮಾರ್ಗಸೂಚಿ ಹೊರಡಿಸುವಂತೆ ನಿರ್ದೇಶನ ನೀಡಿದೆ.


'ಈ ಪ್ರಕರಣದಲ್ಲಿ ಯಾವುದೇ ಕಾನೂನು ಪ್ರಕ್ರಿಯೆ ಪಾಲಿಸಿಲ್ಲ. ಆರೋಪಿ ಬಂಧನ ಮತ್ತು ವಶಕ್ಕೆ ಪಡೆದಿರುವುದು ಕಾನೂನುಬಾಹಿರ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಆದ್ದರಿಂದ, ಕಾನೂನು ಕಾಪಾಡಬೇಕಿದ್ದ ಮತ್ತು ಜನರ ಹಕ್ಕುಗಳನ್ನು ರಕ್ಷಿಸಬೇಕಾದ ಅಂದಿನ PSI (ಈಗ ನಿವೃತ್ತ) ಹನುಮಂತರಾಯಪ್ಪ ತಾವು ಎಸಗಿರುವ ಕಾನೂನುಬಾಹಿರ ಕೃತ್ಯಕ್ಕೆ ಆರೋಪಿಗೆ ಪರಿಹಾರ ನೀಡಬೇಕು' ಎಂದು ನ್ಯಾಯಪೀಠ ಆದೇಶಿಸಿದೆ.


ಅರ್ಜಿದಾರರಿಗೆ ರೂ. 75,000/- ಗಳನ್ನು ಕಡ್ಡಾಯವಾಗಿ ಅವರ ಹೆಸರಿಗೆ ತೆಗೆಯಲಾದ ಡಿಮ್ಯಾಂಡ್ ಡ್ರಾಫ್ಟ್ ಮೂಲಕ ಪರಿಹಾರ ಪಾವತಿಸಬೇಕು ಮತ್ತು ಆ ಪರಿಹಾರ ಮೊತ್ತವನ್ನು ಪಿಎಸ್‌ಐ ಹನುಮಂತರಾಯಪ್ಪ ಅವರಿಂದ ವಸೂಲಿ ಮಾಡಬೇಕು ಮತ್ತು ಅವರ ವಿರುದ್ಧ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಆದೇಶ ಮಾಡಲಾಗಿದೆ.


ಘಟನೆ ವಿವರ

2019ರಲ್ಲಿ ಜಪಾನಿ ಪ್ರಜೆ ಇಂಗ್ಲಿಷ್‌ ಕಲಿಯಲು ಬೆಂಗಳೂರಿಗೆ ಬಂದಿದ್ದು, ಆರ್‌ ಟಿ ನಗರದ ಕೋಚಿಂಗ್ ಸೆಂಟರ್‌‌ಗೆ ಸೇರ್ಪಡೆಯಾಗಿದ್ದರು. ಅಲ್ಲಿ ಉಂಟಾದ ಕಲಹದ ಪರಿಣಾಮ, ಸೆಂಟರ್ ಮಾಲಕ ಪೊಲೀಸರಿಗೆ ದೂರು ನೀಡಿದ್ದರು.



ಅವರು IPC ಸೆಕ್ಷನ್‌ 323 ಮತ್ತು 504ರ ಅಡಿ ಸಂಜ್ಞೆಯೇತರ ಕೇಸು ದಾಖಲಿಸಿದ್ದರು. ಅಲ್ಲದೆ, ಆರೋಪಿಯನ್ನು ಬಂಧಿಸಿದ್ದರು.



ಯಾವುದೇ ಕಾನೂನು ಸೇವೆ ನೀಡದೆ, ಭಾಷೆ ಗೊತ್ತಿಲ್ಲದ ಜಪಾನಿ ಪ್ರಜೆಗೆ ತೊಂದರೆ ಕೊಟ್ಟಿದ್ದರು. ಅರೆಸ್ಟ್ ವೇಳೆ, ಆರೋಪಿಗೆ ಅವರ ಹಕ್ಕುಗಳ ಬಗ್ಗೆ ಪೊಲೀಸರು ತಿಳಿಸಿರಲಿಲ್ಲ. ಆಥನ ಬಳಿ ಇದ್ದ ಪಾಸ್‌ಪೋರ್ಟ್‌, ಕ್ರೆಡಿಟ್‌ ಮತ್ತು ಡೆಬಿಟ್‌ ಕಾರ್ಡ್‌ಗಳು, ನಗದು, ಎಲೆಕ್ಟ್ರಾನಿಕ್ ಉಪಕರಣಗಳು, ಮೊಬೈಲ್‌ ಎಲ್ಲವನ್ನೂ ಪೊಲೀಸರು ವಶಕ್ಕೆ ಪಡೆದಿದ್ದರು.



ಜಪಾನ್‌ ರಾಯಭಾರ ಕಚೇರಿ ಹಾಗೂ ಆತನ ಸ್ನೇಹಿತರ ಜೊತೆ ಮಾತನಾಡಲೂ ಬಿಡಲಿಲ್ಲ. ಅನಾರೋಗ್ಯದಿಂದ ಬಳಲುತ್ತಿದ್ದರೂ ಔಷಧ ಪಡೆಯಲು ಅವಕಾಶ ಮಾಡಿಕೊಟ್ಟಿರಲಿಲ್ಲ. ಆರೋಪಿಯನ್ನು ಮ್ಯಾಜಿಸ್ಟ್ರೇಟ್‌ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿತ್ತು.



ಹೀಗೆ, ಜಾಮೀನು ನೀಡಬಹುದಾದ ಅಸಂಜ್ಞೇಯ ಅಪರಾಧವಾದರೂ 11-12-2019ರಂದು ಜಾಮೀನು ಸಿಗುವವರೆಗೂ 'ತನಕಾ' ಕೇಂದ್ರ ಕಾರಾಗೃಹದಲ್ಲಿ ಇರಬೇಕಾಗಿತ್ತು.



ಕಾನೂನಿನ ಕೊರತೆಯ ದುರ್ಬಳಕೆ ಮತ್ತು ಪೊಲಿಸ್ ಕಿರುಕುಳ ವಿರುದ್ಧ ಜಪಾನಿ ಪ್ರಜೆ ಮಾನವ ಹಕ್ಕುಗಳ ಮೊರೆ ಹೋಗಿದ್ದರು.



ಆದೇಶ ಪ್ರತಿಗೆ ಇಲ್ಲಿ ಕ್ಲಿಕ್ ಮಾಡಿ:

Hiotoshi Tanaka Vs B Hanumantharayappa


Ads on article

Advertise in articles 1

advertising articles 2

Advertise under the article