ಅಪರಾಧಿಕ ತನಿಖೆ ಕ್ಷಿಪ್ರ ಹಾಗೂ ಪರಿಣಾಮಕಾರಿ ಪೂರ್ಣಗೊಳಿಸಲು ಪೊಲೀಸ್ ಇಲಾಖೆಗೆ ಹೈಕೋರ್ಟ್ ಮಾರ್ಗಸೂಚಿ
ಅಪರಾಧಿಕ ತನಿಖೆ ಪೂರ್ಣಗೊಳಿಸಲು ಪೊಲೀಸ್ ಇಲಾಖೆಗೆ ಹೈಕೋರ್ಟ್ ಮಾರ್ಗಸೂಚಿ
ಅಪರಾಧ ಪ್ರಕರಣಗಳ ತನಿಖೆಯನ್ನು ಪೂರ್ಣಗೊಳಿಸಲು ಕರ್ನಾಟಕ ಉಚ್ಚ ನ್ಯಾಯಾಲಯವು ಪೊಲೀಸರಿಗೆ ಗಡುವು ವಿಧಿಸಿದೆ. ಈ ವಿಷಯದಲ್ಲಿ ಹೈಕೋರ್ಟ್ ನಿರ್ದಿಷ್ಟ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.
ಅಪರಾಧ ಪ್ರಕರಣದ ಪೊಲೀಸ್ ವಸ್ತುನಿಷ್ಟ, ವೃತ್ತಿಪರ ತನಿಖೆಗೆ ಹೈಕೋರ್ಟ್ ಈ ಕೆಳಗಿನ ಅಂಶಗಳನ್ನು ಮುಂದಿಟ್ಟಿದೆ.
#ಪೊಲೀಸ್ ತನಿಖೆಯಲ್ಲಿ ವೃತ್ತಿಪರತೆ ಕಾಪಾಡಲು ಅಗತ್ಯ ತರಬೇತಿ ಜೊತೆಗೆ ಪೊಲೀಸ್ ಠಾಣೆಗಳಲ್ಲಿ ನಿರ್ದಿಷ್ಟ ಸಿಬ್ಬಂದಿಯ ಪ್ರತ್ಯೇಕ ತನಿಖಾ ವಿಭಾಗ ಸ್ಥಾಪಿಸಬೇಕು.
# ಅಪರಾಧದ ಕಾರ್ಯತಂತ್ರ, ಅಪರಾಧ ಪತ್ತೆಹಚ್ಚುವ ತಂತ್ರ, ಸೈಬರ್ ಅಪರಾಧ, ಹವಾಲಾ ಹಣ ಮತ್ತು ಭ್ರಷ್ಟಾಚಾರ ಅಪರಾಧಗಳಿಗೆ ಸಂಬಂಧಿಸಿದಂತೆ ತಂತ್ರಜ್ಞಾನಕ್ಕೆ ಸಂಬಂಧಿಸಿದ ಅಗತ್ಯ ತಿಳಿವಳಿಕೆ ನೀಡಲು ಪೊಲೀಸ್ ಸಿಬ್ಬಂದಿಗೆ ತರಬೇತಿಗೆ ನೀಡಬೇಕು.
# ಸಾಕ್ಷಿ ನುಡಿಯುವ ಸಾರ್ವಜನಿಕರಲ್ಲಿ ಉಂಟಾಗುವ ಆತಂಕ ದೂರ ಮಾಡಲು ಸಾಕ್ಷಿ ಸಂರಕ್ಷಣಾ ಯೋಜನೆಯ ಪರಿಣಾಮಕಾರಿ ಜಾರಿ
# ತನಿಖೆಯಲ್ಲಿನ ವಿಳಂಬ ಮತ್ತು ತತ್ಪರಿಣಾಮ ನಡೆಯುವ ವಿಚಾರಣೆಯೂ ವಿಳಂಬವಾಗುತ್ತದೆ. ಈ ಕಾರಣದಿಂದ ದೂರುದಾರರು ಹಾಗೂ ಸಾಕ್ಷಿಗಳಲ್ಲಿ ಆತಂಕ ಸೃಷ್ಟಿಯಾಗುತ್ತದೆ. ಇದನ್ನು ನಿವಾರಿಸಲು ಸಾಕ್ಷಿ ಸಂರಕ್ಷಣಾ ಯೋಜನೆಯನ್ನು ಅಭಿವೃದ್ಧಿಪಡಿಸುವ ಅಗತ್ಯವಿದೆ
ಅಲ್ಲದೆ, ಹೈಕೋರ್ಟ್ ಈ ಕೆಳಗಿನಂತೆ ಮಾರ್ಗಸೂಚಿ ಹೊರಡಿಸಿದೆ.
# ತನಿಖೆ ತುರ್ತಾಗಿ ನಡೆಯಲು ಮತ್ತು ಎಲ್ಲಿ ತನಿಖೆ ಪೂರ್ವಾಗ್ರಹ ಪೀಡಿತವಾಗಿ ನಡೆಯುತ್ತದೆ ಮತ್ತು ಹಳಿ ತಪ್ಪುತ್ತಿದೆ ಎಂಬುದನ್ನು ಗಮನಿಸಿ ಮ್ಯಾಜಿಸ್ಟ್ರೇಟ್ ಅಥವಾ ವಿಶೇಷ ನ್ಯಾಯಾಧೀಶರು CrPC ಕಲಂ 156 (3)ರಡಿ ಆದೇಶ ಮಾಡಬಹುದು.
# FIR ದಾಖಲಿಸದ ಅಹವಾಲು ಮತ್ತು ಸೆಕ್ಷನ್ 156(3)ರ ಅಡಿ ಮನವಿ ಸಲ್ಲಿಸದಾಗ ಅದನ್ನು 30 ದಿನಗಳ ಒಳಗಾಗಿ ವಿಲೇವಾರಿ ಮಾಡಬೇಕು.
# CrPC ಕಲಂ 167ರ ಅಡಿ ರಿಮ್ಯಾಂಡ್ ವಿಸ್ತರಿಸುವ ಹಂತದಲ್ಲಿ ಮ್ಯಾಜಿಸ್ಟ್ರೇಟರು ತನಿಖೆ ಯಾವ ಹಂತದಲ್ಲಿದೆ ಎಂಬುದನ್ನು ತಿಳಿಯಬಹುದು.
# ಹಲವು ಸಾಕ್ಷಿಗಳ ದಾಖಲು ಅಗತ್ಯತೆ ಸೇರಿದಂತೆ ಪ್ರಕರಣದ ಇತರೆ ವಿಚಾರಗಳ ಕುರಿತು ಅಭಿಯೋಜಕರು ನಿರ್ಧಾರ ಕೈಗೊಳ್ಳುವ ಅಗತ್ಯವಿದೆ.
# ಕರ್ನಾಟಕ ಪೊಲೀಸ್ ಕೈಪಿಡಿ ಆದೇಶದ 1550, 1550 (2), 1551 (2) ಮತ್ತು (3) ಅನ್ನು ಜಾರಿ ಮಾಡಲು ಅಗತ್ಯ ಯೋಜನೆ ರೂಪಿಸುವುದು.
# ಪೊಲೀಸ್ ನಿಯಮಾವಳಿಗಳು- ೧೯೪೩ ಪ್ರಕಾರ, ನಿಯಮ ರೂಪಿಸುವುದು ಮತ್ತು ಕ್ಷಿಪ್ರ ಹಾಗೂ ಪರಿಣಾಮಕಾರಿಯಾಗಿ ತನಿಖೆ ನಡೆಸುವ ಉದ್ದೇಶಕ್ಕಾಗಿ ನಿಬಂಧನೆ ಹೊಂದುವುದನ್ನು ಸಂಬಂಧಪಟ್ಟ ಅಧಿಕಾರಿಗಳು ಪರಿಗಣಿಸಬಹುದು.
# ಸಾರ್ವಜನಿಕ ಕ್ಷೇತ್ರದಲ್ಲಿರುವ ವ್ಯಕ್ತಿಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ CrPC ಸೆಕ್ಷನ್ 164ನ್ನು ಮೇಲಿಂದ ಮೇಲೆ ಬಳಕೆ ಮಾಡಬೇಕು.
# ತನಿಖೆಗೆ ಅಡ್ಡಿಪಡಿಸಲು ಆರೋಪಿಗಳು ಮಾಡುತ್ತಿರುವ ಪ್ರಯತ್ನಗಳು ಸೇರಿದಂತೆ ತ್ವರಿತ ತನಿಖೆಗೆ ಅಡ್ಡಿಯಾಗುತ್ತಿರುವ ಅಡಚಣೆಗಳನ್ನು ಮ್ಯಾಜಿಸ್ಟ್ರೇಟ್ ಅವರ ಗಮನಕ್ಕೆ ತನಿಖಾಧಿಕಾರಿ ತರಬೇಕು.
# ಮ್ಯಾಜಿಸ್ಟ್ರೇಟ್, ಕಾನೂನಿನಡಿಯಲ್ಲಿ ಅನುಮತಿಸಬಹುದಾದ ಕ್ರಮ ತೆಗೆದುಕೊಳ್ಳುವುದರ ಹೊರತಾಗಿ, ಉದಾಹರಣೆಗೆ, ಶಂಕಿತ, ಆರೋಪಿ ಅಥವಾ ಮೂರನೇ ವ್ಯಕ್ತಿಯ ವಶದಲ್ಲಿರುವ ದಾಖಲೆಗಳನ್ನು ಸಲ್ಲಿಸಲು ಸಮನ್ಸ್ ನೀಡುವುದು, ಸೂಕ್ತ ಕ್ರಮಕ್ಕಾಗಿ ಜಿಲ್ಲಾ ನ್ಯಾಯಾಧೀಶರಿಗೆ ವರದಿಯನ್ನು ಕಳುಹಿಸುವ ಮೂಲಕ ಆಡಳಿತಾತ್ಮಕವಾಗಿ ವಿಳಂಬ ತಡೆಯಬಹುದು.
# ಮಹೇಂದ್ರ ಚಾವ್ಲಾ ಮತ್ತು ಇತರರು ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಸಾಕ್ಷಿ ಸಂರಕ್ಷಣಾ ಯೋಜನೆಯನ್ನು ಜಾರಿಗೊಳಿಸಲು ರಾಜ್ಯ ಸರ್ಕಾರವು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ನ್ಯಾಯಪೀಠ ತನ್ನ ಮಾರ್ಗಸೂಚಿಯಲ್ಲಿ ವಿವರಿಸಿದೆ.