-->
NCDRC is a tribunal u/s Aritcle 227-SC | ರಾಷ್ಟ್ರೀಯ ಗ್ರಾಹಕ ನ್ಯಾಯಾಲಯದ ಮೇಲ್ಮನವಿ ಆದೇಶ ಹೈಕೋರ್ಟ್‌ನಲ್ಲಿ ಪ್ರಶ್ನಿಸಬಹುದು- ಸುಪ್ರೀಂ ಕೋರ್ಟ್

NCDRC is a tribunal u/s Aritcle 227-SC | ರಾಷ್ಟ್ರೀಯ ಗ್ರಾಹಕ ನ್ಯಾಯಾಲಯದ ಮೇಲ್ಮನವಿ ಆದೇಶ ಹೈಕೋರ್ಟ್‌ನಲ್ಲಿ ಪ್ರಶ್ನಿಸಬಹುದು- ಸುಪ್ರೀಂ ಕೋರ್ಟ್

ರಾಷ್ಟ್ರೀಯ ಗ್ರಾಹಕ ನ್ಯಾಯಾಲಯದ ಮೇಲ್ಮನವಿ ಆದೇಶ ಹೈಕೋರ್ಟ್‌ನಲ್ಲಿ ಪ್ರಶ್ನಿಸಬಹುದು- ಸುಪ್ರೀಂ ಕೋರ್ಟ್






ರಾಷ್ಟ್ರೀಯ ಗ್ರಾಹಕ ಆಯೋಗದ ಮೇಲ್ಮನವಿ ಆದೇಶವನ್ನು ಹೈಕೋರ್ಟ್ ಮುಂದೆ ರಿಟ್ ಅರ್ಜಿ ಸಲ್ಲಿಸುವ ಮೂಲಕ ಪ್ರಶ್ನಿಸಬಹುದು ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಸಂವಿಧಾನದ ಪರಿಚ್ಛೇಧ 227 ರ ಅಡಿಯಲ್ಲಿ ಈ ಅರ್ಜಿಯನ್ನು ಸಲ್ಲಿಸಬಹುದು ಎಂದು ಅದು ಹೇಳಿದೆ.




ರಾಷ್ಟ್ರೀಯ ಗ್ರಾಹಕ ವಿವಾದಗಳ ಪರಿಹಾರ ಆಯೋಗ (NCDRC) ನೀಡಿದ ಆದೇಶವನ್ನು ಗ್ರಾಹಕ ಸಂರಕ್ಷಣಾ ಕಾಯ್ದೆ 2019 ರ ಸೆಕ್ಷನ್ 58(1)(a)(iii) ಅಡಿಯಲ್ಲಿ ಹೈಕೋರ್ಟ್‌ ಮುಂದೆ ರಿಟ್ ಅರ್ಜಿ ಸಲ್ಲಿಸಿ ಪ್ರಶ್ನಿಸಬಹುದು ಎಂದು ತೀರ್ಪಿನಲ್ಲಿ ಹೇಳಲಾಗಿದೆ.




ನ್ಯಾ. ಎಂಆರ್ ಷಾ ಮತ್ತು ನ್ಯಾ. ಬಿ.ವಿ. ನಾಗರತ್ನ ಅವರ ನ್ಯಾಯಪೀಠ ಈ ಆದೇಶ ನೀಡಿದೆ.

ಸಂವಿಧಾನದ ಕಲಂ 227 ರ ಅಡಿಯಲ್ಲಿ ಬರುವ "ಟ್ರಿಬ್ಯೂನಲ್"ಗಳಲ್ಲಿ NCDRC ಕೂಡ ಸೇರುತ್ತದೆ. NCDRC ಆದೇಶದ ವಿರುದ್ಧ ಸಲ್ಲಿಸಲಾದ ಆರ್ಟಿಕಲ್ 227 ಅರ್ಜಿ ಇತ್ಯರ್ಥಪಡಿಸಿದ ದೆಹಲಿ ಹೈಕೋರ್ಟ್ ಆದೇಶದ ಕಾನೂನುಬದ್ಧತೆಯನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು.


ಪ್ರಕರಣ: ಇಬ್ರಾತ್ ಫೈಜಾನ್ VS ಓಮ್ಯಾಕ್ಸ್ ಬಿಲ್‌ಹೋಮ್ ಪ್ರೈವೇಟ್ ಲಿಮಿಟೆಡ್

ಸುಪ್ರೀಂ ಕೋರ್ಟ್ ಸಿವಿಲ್ ಅಪೀಲ್ 3072/2022 Dated 13-05-2022


2019 ರ ಕಾಯಿದೆಯ ಸೆಕ್ಷನ್ 67 ರ ಪ್ರಕಾರ, ಸೆಕ್ಷನ್ 58 ಉಪ-ಕಲಂ (i) ಅಥವಾ (ii) ಉಪಕಲಂ (a) ಅಥವಾ (1) ರಲ್ಲಿ ಪ್ರದತ್ತ ಅಧಿಕಾರ ಚಲಾಯಿಸಿ NCDRC ಹೊರಡಿಸಿದ ಆದೇಶಗಳಿಗೆ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಪರಿಹಾರ ಲಭ್ಯವಿರುತ್ತದೆ.



NCDRC ನೀಡಿದ ಮೂಲ ಆದೇಶಗಳನ್ನು ಮಾತ್ರ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಬಹುದಾಗಿದೆ ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ, NCDRC ಅಂಗೀಕರಿಸಿದ ಮೇಲ್ಮನವಿ ಆದೇಶಗಳಿಗೆ ಸಂಬಂಧಿಸಿದಂತೆ ಯಾವುದೇ ಮೇಲ್ಮನವಿ ಪರಿಹಾರವನ್ನು ನೀಡಲಾಗುವುದಿಲ್ಲ ಎಂದು ತನ್ನ ಮಹತ್ವದ ತೀರ್ಪಿನಲ್ಲಿ ಹೇಳಿದೆ.



ತೀರ್ಪಿನ ಪ್ರತಿಗಾಗಿ:

ಇಬ್ರಾತ್ ಫೈಜಾನ್ VS ಓಮ್ಯಾಕ್ಸ್ ಬಿಲ್‌ಹೋಮ್ ಪ್ರೈವೇಟ್ ಲಿಮಿಟೆಡ್


Ads on article

Advertise in articles 1

advertising articles 2

Advertise under the article