-->
SC consent to new rule to select Senior Advocate - ಹಿರಿಯ ನ್ಯಾಯವಾದಿ ಹುದ್ದೆ: ಅಂಕದ ಮಾನದಂಡ- ಹೊಸ ನಿಯಮಕ್ಕೆ ಸುಪ್ರೀಂ ಗ್ರೀನ್ ಸಿಗ್ನಲ್

SC consent to new rule to select Senior Advocate - ಹಿರಿಯ ನ್ಯಾಯವಾದಿ ಹುದ್ದೆ: ಅಂಕದ ಮಾನದಂಡ- ಹೊಸ ನಿಯಮಕ್ಕೆ ಸುಪ್ರೀಂ ಗ್ರೀನ್ ಸಿಗ್ನಲ್

ಹಿರಿಯ ನ್ಯಾಯವಾದಿ ಹುದ್ದೆ: ಅಂಕದ ಮಾನದಂಡ- ಹೊಸ ನಿಯಮಕ್ಕೆ ಸುಪ್ರೀಂ ಗ್ರೀನ್ ಸಿಗ್ನಲ್





ಹಿರಿಯ ನ್ಯಾಯವಾದಿ ಹುದ್ದೆಗೆ ಅಂಕದ ಮಾನದಂಡ ಎಂಬ ಹೊಸ ನಿಯಮದ ಪ್ರಸ್ತಾಪಕ್ಕೆ ಸುಪ್ರೀಂ ಕೋರ್ಟ್ ಹಸಿರು ನಿಶಾನೆ ತೋರಿದೆ. ಇದರೊಂದಿಗೆ, ಅನುಭವಿ ವಕೀಲರಿಗೆ ವರ್ಷಕ್ಕೆ ಒಂದು ಅಂಕ ನೀಡಿ ಹಿರಿಯ ನ್ಯಾಯವಾದಿ ಹುದ್ದೆಗೆ ಪರಿಗಣಿಸಲು ಸುಪ್ರೀಂ ಕೋರ್ಟ್‌ ಒಪ್ಪಿಕೊಂಡಿದೆ.


10 ವರ್ಷದಿಂದ 20 ವರ್ಷದ ಸೇವಾವೃತ್ತಿ ಮಾಡಿದ ವಕೀಲರಿಗೆ 10 ಅಂಕಗಳನ್ನು ನೀಡಿ ಅದರ ಆಧಾರದ ಮೇಲೆ ಹಿರಿಯ ನ್ಯಾಯವಾದಿ ಹುದ್ದೆ ನೀಡುವ ಕ್ರಮ ಅನುಸರಿಸಲಾಗುತ್ತಿತ್ತು. ಅದಕ್ಕೆ ಪರ್ಯಾಯವಾಗಿ ಹೊಸ ನಿಯಮ ಜಾರಿಗೆ ಬರಲಿದೆ.



ಪರ್ಯಾಯ ನಿಯಮ: 10 ವರ್ಷ ಸೇವೆ ಸಲ್ಲಿಸಿರುವ ವಕೀಲರಿಗೆ ಪ್ರತಿ ವರ್ಷಕ್ಕೆ 1ರಂತೆ ಅಂಕ ನೀಡಿ ಅದರ ಆಧಾರದ ಮೇಲೆ ಹಿರಿಯ ನ್ಯಾಯವಾದಿ ಹುದ್ದೆಗೆ ಪರಿಗಣಿಸುವ ಕ್ರಮ ಇದಾಗಿದೆ. ಇದರೊಂದಿಗೆ, ಉನ್ನತ ನ್ಯಾಯಾಂಗಕ್ಕೆ ಹಿರಿಯ ನ್ಯಾಯವಾದಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ಬದಲಾಗಲಿದೆ.


'ಅನುಭವಕ್ಕೆ ತಕ್ಕಂತೆ ಅಂಕದ ಮಾನದಂಡ' ಪರಿಗಣಿಸಬೇಕು ಎಂದು ಹಿರಿಯ ನ್ಯಾಯವಾದಿ ಇಂದಿರಾ ಜೈಸಿಂಗ್ ಮನವಿ ಮಾಡಿದ್ದರು. ಇದನ್ನು ಪರಿಗಣಿಸಿದ ನ್ಯಾ. U.U. ಲಲಿತ್, ನ್ಯಾ. ರವೀಂದ್ರ ಭಟ್‌ ಹಾಗೂ ನ್ಯಾ. ಪಿ ಎಸ್‌ ನರಸಿಂಹ ಅವರಿದ್ದ ಪೀಠ ಸಮ್ಮತಿ ನೀಡಿತು.


ಕೆಲ ಹೈಕೋರ್ಟ್‌ಗಳು 'ಹಿರಿಯ ನ್ಯಾಯವಾದಿ' ಹುದ್ದೆಗೆ ವಕೀಲರನ್ನು ಪರಿಗಣಿಸುವಾಗ ಏಕಪಕ್ಷೀಯ ಮತ್ತು ತಾರತಮ್ಯ ನೀತಿ ಅನುಸರಿಸಿವೆ ಎಂದು ದೂರಲಾಗಿತ್ತು.

Ads on article

Advertise in articles 1

advertising articles 2

Advertise under the article