-->
ಸಭೆ, ಸಮಾರಂಭದಲ್ಲಿ ಪ್ರಚೋದನಾಕಾರಿ ಘೋಷಣೆ: ಸಂಘಟಕರೂ ಹೊಣೆ ಎಂದ ಕೇರಳ ಹೈಕೋರ್ಟ್

ಸಭೆ, ಸಮಾರಂಭದಲ್ಲಿ ಪ್ರಚೋದನಾಕಾರಿ ಘೋಷಣೆ: ಸಂಘಟಕರೂ ಹೊಣೆ ಎಂದ ಕೇರಳ ಹೈಕೋರ್ಟ್

ಸಭೆ, ಸಮಾರಂಭದಲ್ಲಿ ಪ್ರಚೋದನಾಕಾರಿ ಘೋಷಣೆ: ಸಂಘಟಕರೂ ಹೊಣೆ ಎಂದ ಕೇರಳ ಹೈಕೋರ್ಟ್





ಯಾವುದೇ ರಾಜಕೀಯ ಸಭೆ-ಸಮಾರಂಭ, ಸಮಾವೇಶಗಳಲ್ಲಿ ಭಾಗವಹಿಸಿದ್ದ ಸದಸ್ಯರು ಪ್ರಚೋದನಾಕಾರಿ ಘೋಷಣೆಗಳನ್ನು ಕೂಗಿದರೆ ಆ ಸಮಾವೇಶ ಸಂಘಟಿಸಿದವರೂ ಅದಕ್ಕೆ ಜವಾಬ್ದಾರರಾಗುತ್ತಾರೆ ಎಂದು ಕೇರಳ ಹೈಕೋರ್ಟ್‌ ಮಹತ್ವದ ತೀರ್ಪು ನೀಡಿದೆ.


ಪ್ರಕರಣ: ಆರ್‌ ರಾಮರಾಜ ವರ್ಮ Vs ಕೇರಳ

ಕೇರಳ ಹೈಕೋರ್ಟ್ WP(c) 16371/2022, Dated 27-05-2022



ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ ಆಯೋಜಿಸಿದ್ದ ಸಮಾವೇಶದಲ್ಲಿ ಅಪ್ರಾಪ್ತ ಬಾಲಕನೋರ್ವ ಪ್ರಚೋದನಾಕಾರಿ ಘೋಷಣೆ ಕೂಗುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ ವಿ ಕುಂಞಿಕೃಷ್ಣನ್‌ ಅವರು ಕಾರ್ಯಕರ್ತರ ವರ್ತನೆಯನ್ನು ನಿಯಂತ್ರಿಸುವುದು ಸಮಾವೇಶದ ಸಂಘಟಕರ ಕರ್ತವ್ಯವಾಗಿದೆ ಎಂದರು.


'ಯಾವುದೇ ಸಭೆ-ಸಮಾರಂಭ, ಸಮಾವೇಶದಲ್ಲಿ ಪಾಲ್ಗೊಂಡಿದ್ದ ಸದಸ್ಯರು ಪ್ರಚೋದನಾಕಾರಿ ಘೋಷಣೆ ಹಾಕಿದರೆ ಆ ಕಾರ್ಯಕ್ರಮ ಸಂಘಟಿಸಿದ ವ್ಯಕ್ತಿಗಳೂ ಅದಕ್ಕೆ ಜವಾಬ್ದಾರರಾಗುತ್ತಾರೆ. ಸಮಾವೇಶ ಸಂಘಟಿಸಿದಾಗ ಅದರಲ್ಲಿ ಭಾಗವಹಿಸುವ ಕಾರ್ಯಕರ್ತರನ್ನು ನಿಯಂತ್ರಿಸುವುದು ನಾಯಕರ ಕರ್ತವ್ಯ' ಎಂದು ನ್ಯಾಯಾಲಯವು ತೀರ್ಪಿನಲ್ಲಿ ಹೇಳಿದೆ.


ಆ ವಿವಾದಿತ ಸಮಾರಂಭದಲ್ಲಿ ವ್ಯಕ್ತಿಯೊಬ್ಬರ ಹೆಗಲ ಮೇಲೆ ಕೂತಿದ್ದ ಬಾಲಕ ಪ್ರಚೋದನಾಕಾರಿ ಘೋಷಣೆ ಹಾಕಿರುವ ವೀಡಿಯೋ ವೈರಲ್ ಆಗಿತ್ತು.


ಈ ಸಮಾವೇಶದಲ್ಲಿ ಇದ್ದ ಸದಸ್ಯರು ತಮ್ಮ ನಾಯಕರ ಅರಿವಿಗೆ ತಂದು ಘೋಷಣೆ ಕೂಗಿದ್ದಾರೋ ಅಥವಾ ಪ್ರಚೋದನಕಾರಿ ಘೋಷಣೆಗಳನ್ನು ಕೂಗಿದ ವ್ಯಕ್ತಿಗಳೊಂದಿಗೆ ಸಂಘಟಕರು ಏನಾದರೂ ಶಾಮೀಲಾಗಿದ್ದಾರೋ ಎಂಬುದು ಪೊಲೀಸರ ತನಿಖೆಯಿಂದಷ್ಟೇ ಗೊತ್ತಾಗಬೇಕಿದೆ. ಮೇಲ್ನೋಟಕ್ಕೆ ಘಟನೆಗೆ ಸಂಘಟಕರೇ ಜವಾಬ್ದಾರರು ಎಂದು ತೀರ್ಪು ಹೇಳಿದೆ.


ಹಾಗಾಗಿ, ಈ ಪ್ರಕರಣದಲ್ಲಿ ಸಂಘಟಕರನ್ನು ಆರೋಪಿಯನ್ನಾಗಿ ಮಾಡಿ ಪೊಲೀಸರು ತನಿಖೆ ನಡೆಸಬೇಕು. ಈ ತೀರ್ಪಿನಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯದಿಂದ ಮುಕ್ತವಾಗಿ ಪೊಲೀಸರು ತನಿಖೆ ಮಾಡಬೇಕು. ನೆಲದ ಕಾನೂನನ್ನು ಉಲ್ಲಂಘಿಸಿದ ಎಲ್ಲ ವ್ಯಕ್ತಿಗಳ ವಿರುದ್ಧ ಕಾನೂನಿಗೆ ಅನುಸಾರವಾಗಿ ಪೊಲೀಸರು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಹೇಳಿ ನ್ಯಾಯಾಲಯವು ರಿಟ್ ಅರ್ಜಿಯನ್ನು ಇತ್ಯರ್ತಗೊಳಿಸಿತು. 


Click here for the Judgement;

ಆರ್‌ ರಾಮರಾಜ ವರ್ಮ Vs ಕೇರಳ



Ads on article

Advertise in articles 1

advertising articles 2

Advertise under the article