Ktk HC on Adoption of Elephant - ವಾಣಿಜ್ಯೇತರ ಕಾರ್ಯಕ್ಕೆ ಆನೆಗಳನ್ನು ದತ್ತು ಪಡೆಯಬಹುದು: ಕರ್ನಾಟಕ ಹೈಕೋರ್ಟ್
ವಾಣಿಜ್ಯೇತರ ಕಾರ್ಯಕ್ಕೆ ಆನೆಗಳನ್ನು ದತ್ತು ಪಡೆಯಬಹುದು: ಕರ್ನಾಟಕ ಹೈಕೋರ್ಟ್
ಖಾಸಗಿ ಮಾಲಕತ್ವದಲ್ಲಿರುವ ಆನೆಗಳನ್ನು ವಾಣಿಜ್ಯ ಉದ್ದೇಶಗಳಿಗೆ ಹೊರತುಪಡಿಸಿದ ಚಟುವಟಿಕೆಗಳಿಗೆ ಯಾ ಕಾರ್ಯಕ್ಕೆ ಬಳಸಲು ದತ್ತು ಪಡೆಯಬಹುದು ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಗುಜರಾತ್ ಮೂಲದ ರಾಧಾಕೃಷ್ಣ ದೇವಾಲಯ ಟ್ರಸ್ಟ್‌ಗೆ ಕರ್ನಾಟಕದಿಂದ ನಾಲ್ಕು ಆನೆಗಳನ್ನು ದತ್ತು ನೀಡಲಾಗಿತ್ತು. ಈ ದತ್ತು ಪ್ರಕ್ರಿಯೆಯನ್ನು ಆಕ್ಷೇಪಿಸಿ ಎಂ ಎಸ್ ಮುರಳಿ ಎಂಬವರು ಕರ್ನಾಟಕ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಮಹತ್ವದ ತೀರ್ಪು ನೀಡಿದೆ.
ವನ್ಯಜೀವಿ ಸಂರಕ್ಷಣಾ ಕಾಯ್ದೆ ಸಾವಿರ 1972 ಕಲಂ 40ರ ಅಡಿ ವಾಣಿಜ್ಯ ಉದ್ದೇಶಗಳನ್ನು ಹೊರತುಪಡಿಸಿ ಉಳಿದ ಸ್ವರೂಪದ ಚಟುವಟಿಕೆಗಳಿಗೆ ಜೀವಂತ ಆನೆಗಳನ್ನು ದತ್ತು ಪಡೆಯುವುದಕ್ಕೆ ಯಾವುದೇ ನಿರ್ಬಂಧ ಅಥವಾ ಅಡೆತಡೆ ಇಲ್ಲ ಎಂದು ನ್ಯಾಯಾಲಯ ತೀರ್ಪಿನಲ್ಲಿ ಹೇಳಿದೆ.