'ಬಹುಪತ್ನಿತ್ವ'ದ ಅಪರಾಧದಲ್ಲಿ ಮೊದಲ ಪತ್ನಿಯ ಸಮ್ಮತಿ ನಗಣ್ಯ: ಕರ್ನಾಟಕ ಹೈಕೋರ್ಟ್
'ಬಹುಪತ್ನಿತ್ವ'ದ ಅಪರಾಧದಲ್ಲಿ ಮೊದಲ ಪತ್ನಿಯ ಸಮ್ಮತಿ ನಗಣ್ಯ: ಕರ್ನಾಟಕ ಹೈಕೋರ್ಟ್
ಬಹುಪತ್ವಿತ್ವ ಅಪರಾಧವನ್ನು ಪರಿಗಣಿಸುವಾಗ ಮೊದಲ ಪತ್ನಿಯ ಸಮ್ಮತಿ ನಗಣ್ಯವಾಗುತ್ತದೆ. ಬಹುಪತ್ನಿತ್ವ ಅಪರಾಧ ಒಂದು ನಿರಂತರ ಅಪರಾಧ. ಹಾಗಾಗಿ, ವಿಳಂಬದ ಆಧಾರದ ಮೇಲೆ ಅದನ್ನು ಕೈಬಿಡಲು ಸಾಧ್ಯವಿಲ್ಲ ಎಂದು ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಪ್ರಕರಣ: ANAND C.@ANKU GOWDA & Ors Vs CHANDRAMMA
ಕರ್ನಾಟಕ ಹೈಕೋರ್ಟ್, CrP: 9849/2021 Dated 25-05-2022
ಪ್ರಥಮ ಹೆಂಡತಿಯ ಸಮ್ಮತಿ ಪಡೆದು ಆ ಬಳಿಕ ಮದುವೆ ಮಾಡಿಕೊಳ್ಳಲಾಗಿದೆ ಮತ್ತು ತಡವಾಗಿ ಕೇಸು ದಾಖಲಿಸಲಾಗಿದೆ ಎಂಬುದನ್ನು ಆಧರಿಸಿ IPC ಸೆಕ್ಷನ್ 494 (ಬಹುಪತ್ನಿತ್ವ) ಅಡಿ ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣವನ್ನು ವಜಾಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಮನವಿಯ ವಿಚಾರಣೆಯನ್ನು ನ್ಯಾ. ಎಂ ನಾಗಪ್ರಸನ್ನ ಅವರ ಏಕಸದಸ್ಯ ಈ ತೀರ್ಪು ನೀಡಿದೆ.
ಮೊದಲ ಹೆಂಡತಿಯ ಸಮ್ಮತಿ ಅಥವಾ ಒಂದನೇ ಹಾಗೂ ಎರಡನೇ ಪತ್ನಿಯ ಸಮ್ಮತಿಯ ಬಳಿಕ ಮದುವೆ ಆಗಿದೆ ಎಂಬುದು ಬಹುಪತ್ನಿತ್ವ ಅಪರಾಧ ಪರಿಣಿಸಲು ಮುಖ್ಯವಾಗುವುದಿಲ್ಲ ಎಂದು ತೀರ್ಪು ಸ್ಪಷ್ಟಪಡಿಸಿದೆ.
ತಮಗೆ ಮೂರು ಮದುವೆ ಆಗಿದೆ ಎಂಬದುನ್ನು ಆರೋಪಿ ಗಂಡ ನಿರಾಕರಿಸಿಲ್ಲ. 3ನೇ ಮದುವೆಯಾಗಿ 25 ವರ್ಷಗಳ ಕಳೆದಿದೆ. ಆ ಬಳಿಕ ಕೇಸು ದಾಖಲಿಸಲಾಗಿದೆ ಎಂಬುದು ಅವರ ಆಕ್ಷೇಪ. ಆದರೆ, ಬಹುಪತ್ನಿತ್ವ ಎಂಬುದು 'ನಿರಂತರ ಅಪರಾಧ'ವಾಗಿದೆಯೇ ಅಥವಾ 'ಕೇಸು ದಾಖಲಿಸಲು ವಿಳಂಬ' ಹಿನ್ನೆಲೆಯಲ್ಲಿ ಅದು ರದ್ದಾಗಲಿದೆ ಎಂಬ ಪ್ರಶ್ನೆ ನ್ಯಾಯಾಲಯದ ಮುಂದೆ ಎದ್ದಿತ್ತು.
ಸುಪ್ರೀಂ ಕೋರ್ಟ್, ಬಿಹಾರ ರಾಜ್ಯ VS ದಿಯೋ ಕರಣ್ ನ್ಯಾನ್ಸಿ ಪ್ರಕರಣದಲ್ಲಿ ನೀಡಿದ ತೀರ್ಪು ಆಧರಿಸಿ, ನ್ಯಾಯಾಲಯವು ಪತಿಯು ಬೇರೆ ಬೇರೆ ಅವಧಿಯಲ್ಲಿ ಮೂವರು ಮಹಿಳೆಯರನ್ನು ವಿವಾಹವಾಗಿರುವುದನ್ನು ಒಪ್ಪಿಕೊಂಡಿದ್ದಾನೆ. ಆದ್ದರಿಂದ ಆರೋಪಿ 'ಬಹುಪತ್ನಿತ್ವ ಅಪರಾಧ' ಎಂಬ ಆರೋಪಕ್ಕೆ ಒಳಗಾಗಿದ್ದಾರೆ ಎಂದು ನ್ಯಾಯಪೀಠ ತೀರ್ಪಿನಲ್ಲಿ ಹೇಳಿದೆ.
3 ಮದುವೆ ಆಗಿರುವ ಕುರಿತು "ವಿಳಂಬ ಪ್ರಕರಣ ದಾಖಲು" ವಾದ ನಗಣ್ಯವಾಗಿದ್ದು, ಬಹುಪತ್ನಿತ್ವ ಎಂಬುದು 'ನಿರಂತರ ಅಪರಾಧ'ವಾಗಿದೆ ಎಂದು ನ್ಯಾಪೀಠ ಹೇಳಿದೆ.
ಕಾನೂನು ಪ್ರಕಾರ ಆಕ್ಷೇಪಾರ್ಹ ಮದುವೆ ವಿವಾಹಗಳಿಗೆ ನಿರ್ದಿಷ್ಟ ರೀತಿಯಲ್ಲಿ ಕುಟುಂಬ ಸದಸ್ಯರು ಮತ್ತು ಸ್ನೇಹಿತರು ಜವಾಬ್ದಾರರಾಗಿದ್ದಾರೆ ಎಂಬುದನ್ನು ಸಾಬೀತುಪಡಿಸದ ಹೊರತು ಅವರ ವಿರುದ್ಧ ಪ್ರಕ್ರಿಯೆ ಮುಂದುವರಿಸಲಾಗದು ಎಂದು ನ್ಯಾಯಾಲಯವು ಕುಟುಂಬ ಸದಸ್ಯರು ಮತ್ತು ಸ್ನೇಹಿತರ ವಿರುದ್ಧದ ಪ್ರಕರಣ ವಜಾ ಮಾಡಿದೆ.