-->
Post Office is a Banker u/s 42 of NI Act- ಅಂಚೆ ಕಚೇರಿಯೂ 'ಬ್ಯಾಂಕರ್' ವ್ಯಾಪ್ತಿಗೆ ಬರುತ್ತದೆ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

Post Office is a Banker u/s 42 of NI Act- ಅಂಚೆ ಕಚೇರಿಯೂ 'ಬ್ಯಾಂಕರ್' ವ್ಯಾಪ್ತಿಗೆ ಬರುತ್ತದೆ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ಅಂಚೆ ಕಚೇರಿಯೂ 'ಬ್ಯಾಂಕರ್' ವ್ಯಾಪ್ತಿಗೆ ಬರುತ್ತದೆ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು





ಅಂಚೆ ಇಲಾಖೆಯಲ್ಲಿ ಉಳಿತಾಯ ಖಾತೆ ವ್ಯವಹರಣೆ ಮಾಡುವ ಪ್ರತಿ ಶಾಖೆಯೂ ಬ್ಯಾಂಕಿಂಗ್ ವ್ಯಾಪ್ತಿಗೆ ಒಳಪಡುತ್ತದೆ ಮತ್ತು ನೆಗೋಷಿಯೆಬಲ್ ಇನ್ಸ್‌ಟ್ರುಮೆಂಟ್ ಕಾಯ್ದೆ ಅನ್ವಯವಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.



ನೆಗೋಷಿಯೆಬಲ್ ಇನ್ಸ್‌ಟ್ರುಮೆಂಟ್ ಕಾಯ್ದೆ ಸೆಕ್ಷನ್ 3 ಪ್ರಕಾರ ಬ್ಯಾಂಕಿಂಗ್ ಎಂದರೆ ಬ್ಯಾಂಕಿಂಗ್ ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಯಾವುದೇ ವ್ಯಕ್ತಿ. ಉಳಿತಾಯ ಖಾತೆ ವ್ಯವಹರಣ ಮಾಡುವ ಅಂಚೆ ಇಲಾಖೆಯೂ ಬ್ಯಾಂಕ್ ಎಂಬ ವ್ಯಾಪ್ತಿಗೆ ಒಳಪಡುತ್ತದೆ ಎಂದು ಅದು ತನ್ನ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.



ಪ್ರಕರಣ: ಪ್ರದೀಪ್ ಕುಮಾರ್ Vs ಪೋಸ್ಟ್ ಮಾಸ್ಟರ್ ಜನರಲ್ ಮತ್ತು ಇತರರು

ಸುಪ್ರೀಂ ಕೋರ್ಟ್: CA No. 8775-8776/2016 Dated 7-02-2022


ಮೇಲ್ಮನವಿದಾರರು ಎದುರುವಾದಿ 1995 ಮತ್ತು 1996ರಲ್ಲಿ ಅಂಚೆ ಕಚೇರಿಯಿಂದ 32.60 ಲಕ್ಷ ರೂ. ಮೌಲ್ಯದ 'ಕಿಸಾನ್ ವಿಕಾಸ್ ಪತ್ರ' ಪಡೆದಿರುತ್ತಾರೆ. 2000 ಫೆಬ್ರವರಿಯಲ್ಲಿ ಗ್ರಾಹಕರು ಅಂಚೆ ಕಚೇರಿಗೆ ತೆರಳಿ ವಿಕಾಸ ಪತ್ರಗಳನ್ನು ಲಕ್ನೋ ಅಂಚೆ ಕಚೇರಿಗೆ ವರ್ಗಾಯಿಸಬೇಕು ಎಂದು ಮನವಿ ಮಾಡಿದ್ದರು.



ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂಚೆ ಕಚೇರಿಯ ಉಳಿತಾಯ ಯೋಜನೆ ನಿರ್ವಹಿಸುವ ಶಾಖೆಗಳು ಎನ್‌ಐ ಕಾಯ್ದೆ ಕಲಂ 42ರ ಬ್ಯಾಂಕ್ ಪದದ ವ್ಯಾಖ್ಯಾನದ ವ್ಯಾಪ್ತಿಗೆ ಬರುತ್ತದೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.



ಪ್ರಕರಣದ ತೀರ್ಪನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರದೀಪ್ ಕುಮಾರ್ Vs ಪೋಸ್ಟ್ ಮಾಸ್ಟರ್ ಜನರಲ್ ಮತ್ತು ಇತರರು


Ads on article

Advertise in articles 1

advertising articles 2

Advertise under the article