SC, ST ದೌರ್ಜನ್ಯ ತಡೆ ಕಾಯ್ದೆ: ಬಹಿರಂಗ ನಿಂದನೆ ಇದ್ದರೆ ಮಾತ್ರ ಅಪರಾಧ: ಕರ್ನಾಟಕ ಹೈಕೋರ್ಟ್
SC, ST ದೌರ್ಜನ್ಯ ತಡೆ ಕಾಯ್ದೆ: ಬಹಿರಂಗ ನಿಂದನೆ ಇದ್ದರೆ ಮಾತ್ರ ಅಪರಾಧ: ಕರ್ನಾಟಕ ಹೈಕೋರ್ಟ್
ಬಹಿರಂಗ ಪ್ರದೇಶದಲ್ಲಿ ಅಥವಾ ಸಾರ್ವಜನಿಕವಾಗಿ ಗಮನಸೆಳೆಯುವ ಸ್ಥಳದಲ್ಲಿ (Public Place or a Place of Public View) ಜಾತಿ ನಿಂದನೆ ಮಾಡಿದರೆ ಮಾತ್ರ ಎಸ್‌ಸಿ ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆ ಅಡಿ ಶಿಕ್ಷಾರ್ಹ ಅಪರಾಧ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.
ನಾಗಪ್ರಸನ್ನ ನೇತೃತ್ವದ ಏಕಸದಸ್ಯ ಪೀಠ ಈ ಮಹತ್ವದ ಆದೇಶ ಹೊರಡಿಸಿದ್ದು, ಅರ್ಜಿದಾರರ ಮೇಲ್ಮನವಿಯನ್ನು ಪುರಸ್ಕರಿಸಿ ಅವರ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸಿದೆ.
ಪ್ರಕರಣ: ರಿತೇಶ್ ಪಾಯ್ಸ್ Vs ಕರ್ನಾಟಕ ಸರ್ಕಾರ
ಕರ್ನಾಟಕ ಹೈಕೋರ್ಟ್, CrP No. 3597/2022 Dated 10-06-2022
ಅಲ್ಲದೆ, ಸದ್ರಿ ಪ್ರಕರಣದಲ್ಲಿ ಆರೋಪಪಟ್ಟಿಯಲ್ಲಿ ಹೆಸರಿಸಲಾದ ಎಲ್ಲ ಸಾಕ್ಷಿಗಳು ದೂರುದಾರರ ಸಹೋದ್ಯೋಗಿಗಳು ಇಲ್ಲವೇ ಗೆಳೆಯರು ಆಗಿದ್ದಾರೆ ಎಂಬುದನ್ನು ಹೈಕೋರ್ಟ್ ಪೀಠ ಗಮನಿಸಿತು.
ಪ್ರಕರಣದ ವಿವರ:
ಪುತ್ತೂರಿನ ನಿರ್ಮಾಣ ಹಂತದಲ್ಲಿ ಇರುವ ಕಟ್ಟಡದ ನೆಲಮಾಳಿಗೆಯಲ್ಲಿ ಮೋಹನ್ ಎಂಬವರು ಕೆಲಸ ಮಾಡುತ್ತಿದ್ದು, ಅಲ್ಲಿಗೆ ಆಗಮಿಸಿದ್ದ ಆರೋಪಿ ರಿತೇಶ್ ಪಾಯ್ಸ್ ಕೆಲಸ ನಿಲ್ಲಿಸುವಂತೆ ತಾಕೀತು ಮಾಡಿದ್ದರು. ಇದಕ್ಕೆ ಒಪ್ಪದಿದ್ದಾಗ, ದೂರುದಾರ ಮೋಹನ್ ವಿರುದ್ಧ ಕಟ್ಟಡದ ನೆಲ ಮಾಳಿಗೆಯಲ್ಲಿ ಜಾತಿ ನಿಂದನೆ ಮಾಡಿದ್ದರು ಎಂದು ದೂರಿನಲ್ಲಿ ಹೇಳಲಾಗಿತ್ತು.
ಘಟನೆಯಲ್ಲಿ ಹೆಸರಿಸಲಾದ ಎಲ್ಲ ಸಾಕ್ಷಿಗಳು ಕಟ್ಟಡದ ಮಾಲಕರಾದ ಜಯಕುಮಾರ್ ಆರ್. ನಾಯರ್ ಅವರ ಕೆಲಸದಾಳುಗಳು ಇಲ್ಲವೇ ಸ್ನೇಹಿತರಾಗಿದ್ದರು.
ಘಟನೆ ನಡೆದ ಸ್ಥಳ ಕಟ್ಟಡದ ನೆಲಮಾಳಿಗೆಯಾಗಿದ್ದು, ಅದು ಸಾರ್ವಜನಿಕ ಸ್ಥಳ ಯಾ ಪಬ್ಲಿಕ್ ದೃಷ್ಟಿಗೆ ಒಳಪಟ್ಟಿಲ್ಲ.
ಆರೋಪಿಯು ಕಟ್ಟಡದ ಮಾಲೀಕರ ವಿರುದ್ಧ ಪುತ್ತೂರು ನ್ಯಾಯಾಲಯದಲ್ಲಿ ಸಿವಿಲ್ ವ್ಯಾಜ್ಯವನ್ನು ಹೂಡಿದ್ದು, ಕಟ್ಟಡದ ನಿರ್ಮಾಣಕ್ಕೆ ತಡೆಯಾಜ್ಞೆ ಕೋರಿದ್ದರು.
ಈ ಹಿನ್ನೆಲೆಯಲ್ಲಿ ಆರೋಪಿ ವಿರುದ್ಧ ತಮ್ಮ ಕೆಲಸದಾಳುಗಳನ್ನು ಬಳಸಿ ಎಸ್‌ಸಿ ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆ ಅಡಿ ದೂರು ನೀಡಿರುವುದು ತಮ್ಮ ವಿರುದ್ಧದ ಕ್ರಮವನ್ನು ತಪ್ಪಿಸಲು ಇನ್ನೊಬ್ಬರ ಹೆಗಲನ್ನು ಬಳಸಿ ಗುಂಡು ಹಾರಿಸುವ ಪ್ರಯತ್ನ ನಡೆಸಿದ್ದಾರೆ ಎಂಬುದನ್ನು ಹೈಕೋರ್ಟ್ ತೀರ್ಪಿನಲ್ಲಿ ಗಮನಿಸಿತು.
ಸದ್ರಿ ನಿಂದನೆ ಸಾರ್ವಜನಿಕ ಸ್ಥಳ ಅಥವಾ ಬಹಿರಂಗವಾಗಿ ನಡೆದಿಲ್ಲ ಎಂಬುದು ಸ್ಪಷ್ಟ. SC/ST ಕಾಯಿದೆಯ ನಿಬಂಧನೆ ಅನ್ವಯಿಸಬೇಕಾದರೆ ಅದು ಸಾರ್ವಜನಿಕವಾಗಿ ನಡೆದಿರಬೇಕು ಎಂದು ಪೀಠ ಹೇಳಿದ್ದು, ಆರೋಪಿ ವಿರುದ್ಧದ ಪ್ರಕರಣವನ್ನು ವಜಾಗೊಳಿಸಿತು.
Judgement Copy:
ರಿತೇಶ್ ಪಾಯ್ಸ್ Vs ಕರ್ನಾಟಕ ಸರ್ಕಾರ